Sunday, 23rd June 2024

ಹಸೆಮಣೆ ಏರಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ನವವಧು..!

ಮಡಿಕೇರಿ: ಮದುವೆ ದಿನಾಂಕ ನಿಗದಿಯಾದರೆ ಸಾಕು, ಕೆಲವರು ಎಲ್ಲವನ್ನೂ ಮುಂದೂಡುತ್ತಾರೆ. ಆದರೆ ಇಲ್ಲೊಂದು ನವ ಜೋಡಿ ಹಸೆಮಣೆ ಏರಿ ಧಾರೆಶಾಸ್ತ್ರ ಮುಗಿಸಿಕೊಂಡು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿರುವ ಅಪರೂಪದ ಘಟನೆ ಮಂಜಿನ ‌ನಗರಿ ಮಡಿಕೇರಿಯಲ್ಲಿ ನಡೆದಿದೆ.

ಮಡಿಕೇರಿಯ ಅಶೋಕಪುರ ನಿವಾಸಿ ಸ್ವಾತಿ ಜೀವನ ಪರೀಕ್ಷೆ ಮುಗಿಸಿಕೊಂಡು ಕಲ್ಯಾಣ ಮಂಟಪದಿಂದ ನೇರವಾಗಿ ನಗರದ ಜೂನಿಯರ್ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಿದ್ದಾರೆ.

ವಿವಾಹ ದಿನಾಂಕಕ್ಕೂ ಮೊದಲು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಂಡಿದ್ದ ಸ್ವಾತಿ ಅವರಿಗೆ ಸುಂಟಿಕೊಪ್ಪದ ಮದುರಮ್ಮ ಪಟ್ಟಣದ ಸುರೇಶ್ ಅವರೊಂದಿಗೆ ಮಡಿಕೇರಿಯ ಅಂಬೇಡ್ಕರ್ ಭವನದಲ್ಲಿ ಮದುವೆ ನಿಶ್ಚಯವಾಗಿತ್ತು. ವಿಪರ್ಯಾಸವೆಂದರೆ ಪರೀಕ್ಷಾ ದಿನದಂದೇ ಧಾರೆ ಮುಹೂರ್ತಗಳು ಬಂದಿದ್ದವು.

ಆದರೆ ಧೃತಿಗೆಡದೆ ಇಬ್ಬರ ಕುಟುಂಬದವರು ಸ್ವಾತಿ ಪರೀಕ್ಷೆಗೆ ಅಡ್ಡಿಯಾಗದಂತೆ ಬೆಳಗ್ಗೆ  6.30 ಗಂಟೆಯಿಂದ 9 ಗಂಟೆವರೆಗೆ ಇದ್ದಂತಹ ಶುಭಲಗ್ನದಲ್ಲಿ ಧಾರೆ ಮುಹೂರ್ತ ನಿಗದಿಪಡಿಸಿ ಕೊಂಡು ವಿವಾಹ ನೆರವೇರಿಸಿದ್ದಾರೆ.‌

ಬಳಿಕ ಧಾರೆ ವಸ್ತ್ರದಲ್ಲೇ ಪರಿಕ್ಷಾ ಕೇಂದ್ರಕ್ಕೆ ಹಾಜರಾದರು. ಇಂತಹದ್ದೊಂದು ಅವಕಾಶ ಎಲ್ಲರಿಗೂ ಸಿಗುವುದಿಲ್ಲ ಎಂದು ಕುಟುಂಬದವರು ಧೈರ್ಯ ಹೇಳಿದ್ದರು. ನಾನೂ ಕೂಡ ಪರೀಕ್ಷೆ  9 ತಿಂಗಳಿಂದ ತಯಾರಾಗಿದ್ದೆ.

ಪರೀಕ್ಷೆ ಬರೆಯುವ ಉದ್ದೇಶ ದಿಂದಲೇ ಮದುವೆ ಶಾಸ್ತ್ರಗಳನ್ನು ಸ್ವಲ್ಪ ಆತುರವಾಗಿಯೇ ಮುಗಿಸಿದ್ದೇವೆ. ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎನ್ನುವ ವಿಶ್ವಾಸ ವಿದೆ ಎಂದು ನವವಧು ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!