Sunday, 8th September 2024

ವಿಶಿಷ್ಟವಾಗಿ ಪಂಚರತ್ನ ಯಾತ್ರೆ ನಡೆಸಲು ಸಿದ್ದತೆ: ಶಾಸಕ ಗೌರಿಶಂಕರ್

ತುಮಕೂರು: ಗ್ರಾಮಾಂತರದಲ್ಲಿ ಡಿ. ೨೯ ರಂದು ಜೆಡಿಎಸ್ ಪಂಚರತ್ನರಥಯಾತ್ರೆಗೆ ಬೇರೆ ತಾಲೂಕುಗಳಿಗಿಂತ ವಿಶೇಷವಾಗಿ ಹಾಗೂ ವಿಭಿನ್ನವಾಗಿ ಸ್ವಾಗತಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗುರುವಾರ ಬೆಳಗ್ಗೆ ಗ್ರಾಮಾಂತರ ಕ್ಷೇತ್ರದ ಹೆಬ್ಬೂರಿ ನಿಂದ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆ ನಾಗವಲ್ಲಿ, ಹೊನ್ನುಡಿಕೆ, ಹೊನ್ನುಡಿಕೆ ಹ್ಯಾಂಡ್ ಪೋಸ್ಟ್, ಗೂಳೂರು ಮಾರ್ಗವಾಗಿ ಸಾಗಿ ಪಂಡಿತನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಊರ್ಡಿಗೆರೆ, ಬೆಳಗುಂಬ ಮಾರ್ಗವಾಗಿ ಯಲ್ಲಾಪುರ ಗ್ರಾಮಕ್ಕೆ ಪಂಚರತ್ನ ರಥಯಾತ್ರೆ ತಲುಪಲಿದ್ದು, ಬೃಹತ್ ಬಹಿರಂಗ ಸಮಾವೇಶ ಹಮ್ಮಿಕೊಳ್ಳ ಲಾಗಿದೆ. ಕಾರ್ಯಕ್ರಮಕ್ಕೆ ಸುಮಾರು ೫೦ ಸಾವಿರ ಜನರು ಭಾಗಿ ಯಾಗುವ ನಿರೀಕ್ಷೆಯಿದೆ. ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ದಲಿತ ಕುಟುಂಬದ ಮನೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದರು.

ಪ್ಯಾರಾ ಗ್ಲೆöÊಡಿಂಗ್ ಮೂಲಕ ಹೂ ಮಳೆ:
ಬೇರೆ ತಾಲೂಕುಗಳಿಗಿಂತ ವಿಶೇಷವಾಗಿ ಕುಮಾರಸ್ವಾಮಿ ಅವರನ್ನು ಸ್ವಾಗತಿಸಲು ಸಿದ್ದತೆ ಮಾಡಿಕೊಂಡಿದ್ದು ಗ್ರಾಮಾಂತರ ಕ್ಷೇತ್ರದಲ್ಲಿ ಇತಿಹಾಸ ನಿರ್ಮಿಸುವಂತೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಹೆಬ್ಬೂರಿನಲ್ಲಿ ಪ್ರಾರಂಭವಾಗುವ ಪಂಚರತ್ನ ರಥಯಾತ್ರೆಗೆ ಡ್ರೋನ್ ಮೂಲಕ ಜೆಡಿಎಸ್ ಚಿನ್ಹೆವುಳ್ಳ ಫಾಗ್ ಸಿಂಪಡಣೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಹಾಗೆಯೇ ಪ್ಯಾರಾ ಗ್ಲೆöÊಡಿಂಗ್ ಮೂಲಕ ಹೂ ಮಳೆ ಸುರಿಸಲಾಗುವುದು. ಸುಮಾರು ೨೦೦ ಜೆಸಿಬಿ ಯಂತ್ರಗಳ ಮೂಲಕ ದಾರಿಯುದ್ದಕ್ಕೂ ಹೂ ಹಾಕಲು ಸಿದ್ಧತೆ ಮಾಡಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಇಲ್ಲಿಯವರೆಗೆ ಯಾರು ಹಾಕದಂತ ಹಾರಗಳನ್ನು ಹತ್ತಾರು ಕ್ರೆöÊನ್ ಗಳ ಮೂಲಕ ಹಾಕುವ ಮೂಲಕ ವಿಶೇಷವಾಗಿ ಹಾಗೂ ವಿಶಿಷ್ಠ ರೀತಿಯಲ್ಲಿ ಸ್ವಾಗತಿಸಲು ಸಜ್ಜಾಗಿದ್ದೇವೆ ಎಂದರು.
ಇಷ್ಟೇ ಅಲ್ಲದೆ ಬಲೂನ್ ಶೋ , ಅಂಬ್ರೆಲಾ ಶೋ ಆಯೋಜನೆ ಮಾಡಲಾಗಿದೆ. ಕೇರಳ , ಬೆಂಗಳೂರು, ತುಮಕೂರಿನ ಜನಪದ ಕಲಾ ತಂಡಗಳಿAದ ವಿವಿಧ ಕಾರ್ಯಕ್ರಮಗಳನ್ನು ಯಲ್ಲಾಪುರದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಪಂಚರತ್ನ ರಥ ಯಾತ್ರೆಯ ಅಂಶಗಳು, ಕುಮಾರಸ್ವಾಮಿ ಅವರ ಜೀವನ ಚರಿತ್ರೆ ಹಾಗೂ ಮಾಜಿ ಪ್ರಧಾನಿ ದೇವೇಗೌಡರ ಜೀವನ ಚರಿತ್ರೆ ಬಗ್ಗೆ ೨೦ ನಿಮಿಷಗಳ ಲೇಸರ್ ಶೋ ಏರ್ಪಡಿಸಲಾಗಿದೆ.
ಕುದುರೆಗಳನ್ನು ತರಿಸಲಾಗಿದ್ದು ಹೆಬ್ಬೂರಿನಿಂದ ಸುಮಾರು ೨ ಕಿ.ಮೀ ವರೆಗೆ ಯಾತ್ರೆಯಲ್ಲಿ ಕುದುರೆಗಳು ಹೆಜ್ಜೆ ಹಾಕಲಿದ್ದು ನಂತರ ಊರ್ಡಿಗೆರೆಯಿಂದ ಯಲ್ಲಾಪುರದವರೆಗೆ ಹೆಜ್ಜೆ ಹಾಕಲಿವೆ. ಲಕ್ಷ ದೀಪೋತ್ಸವ, ಅನುಪಮ ಭಟ್ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

Read E-Paper click here

error: Content is protected !!