Sunday, 19th May 2024

ಕೋವಿಡ್ ಮಹಾಮಾರಿ ತಡೆಯಲು ವೈದ್ಯರಷ್ಟೇ ಪೌರಕಾರ್ಮಿಕರು ಮುಖ್ಯ

ತುಮಕೂರು: ಕೋವಿಡ್ ಮಹಾಮಾರಿಯಿಂದ ಜನತೆ ಮುಕ್ತರಾಗಬೇಕಾದರೆ ವೈದ್ಯರಷ್ಟೇ, ಪೌರಕಾರ್ಮಿಕರ ಪಾತ್ರವೂ ಮಹತ್ವ ದ್ದಾಗಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ.
ನಗರದ ಟೌನ್‌ಹಾಲ್ ಮುಂಭಾಗದಲ್ಲಿ ವಿವಿಧ ಧಾನಿಗಳ ಸಹಕಾರದಿಂದ 15ನೇ ವಾರ್ಡಿನಲ್ಲಿ ಕೆಲಸ ಮಾಡುವ ಪೌರ ಕಾರ್ಮಿಕ ರಿಗೆ ವಾರ್ಡಿನ ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಹಮ್ಮಿಕೊಂಡಿದ್ದ ದಿನಸಿ, ತರಕಾರಿ, ಹಣ್ಣುಗಳ ವಿತರಣೆಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ನಗರದ ಸ್ವಚ್ಚತೆಯನ್ನು ಹಗಲಿರುಳೆನ್ನದೆ ನಗುನಗುತಾ ನಿರ್ವಹಿಸುತ್ತಿರುವ ಪೌರಕಾರ್ಮಿಕರ ಮೊಗದಲ್ಲಿ ನಗು ತರುವಂತಹ ಕೆಲಸವನ್ನು ಇಂದು ೧೫ನೇ ವಾರ್ಡಿನ ಸದಸ್ಯರಾದ ಶ್ರೀಮತಿ ಗಿರಿಜಾ ಧನಿಯ ಕುಮಾರ್ ಮಾಡಿದ್ದಾರೆ. ಅವರ ಕಾರ್ಯ ಶ್ಲಾಘನೀಯ ಎಂದರು.
ಇಂದು ನಗರ ಸ್ವಚ್ಚವಾಗಿದೆ ಎಂದರೆ ಅದಕ್ಕೆ ಪೌರಕಾರ್ಮಿಕ ನಗುಮೊಗದೆ, ಅವಿರತ ಶ್ರಮವೇ ಕಾರಣ,ವಾರ್ಡಿನ ಕೌನ್ಸಿರ‍್ಸ್, ಅಧಿಕಾರಿಗಳು ಹೇಳಿದಂತೆ ಎಲ್ಲಾ ಕೆಲಸಗಳನ್ನು ಚಾಚು ತಪ್ಪದೆ ಮಾಡುತ್ತಿದ್ದಾರೆ.ಹಾಗಾಗಿ ಅವರ ಆರೋಗ್ಯ ರಕ್ಷಣೆಜೊತೆಗೆ ಅವರ ಕುಟುಂಬದ ಹೊರೆಯನ್ನು ಹೊರುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಬೇಕಾಗಿದೆ.ಈ ನಿಟ್ಟಿನಲ್ಲಿ ಚಲನಚಿತ್ರನಟ ದರ್ಶನ್,ಉದ್ಯಮಿ ಚಂದ್ರಮೌಳಿ,ತರಕಾರಿ ವ್ಯಾಪಾರಸ್ಥರಾದ ವಾಸುದೇವ್ ಅವರ ಸೇವೆಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸ್ವಾಮೀಜಿ ನುಡಿದರು.
ತುಮಕೂರು ನಗರ ಶಾಸಕ ಜೋತಿಗಣೇಶ್ ಮಾತನಾಡಿ, ಕೌನ್ಸಿಲರ್ ಶ್ರೀಮತಿ ಗಿರಿಜಾ ಧನಿಯಕುಮಾರ್ ಧಾನಿಗಳ ಸಹಕಾರ ದಿಂದ ತಮ್ಮ ವಾರ್ಡಿನ ಎಲ್ಲಾ ಪೌರಕಾರ್ಮಿಕರು, ನೀರುಗಂಟಿಗಳು,ಕಸ ಎತ್ತುವ ಆಟೋ ಚಾಲಕರುಗಳಿಗೆ ಒಂದು ತಿಂಗಳಿಗೆ ಆಗುವಷ್ಟು ಅಕ್ಕಿ,ಬೆಳೆ ಸೇರಿದಂತೆ ದಿನಸಿ ವಸ್ತುಗಳು,ಹಣ್ಣು,ತರಕಾರಿಯನ್ನು ನೀಡಿದ್ದಾರೆ.ಇವರ ಮಾದರಿ ಯಲ್ಲಿಯೇ ಅನೇಕ ಕೌನ್ಸಿಲರ್‌ಗಳು ಕಾರ್ಯನಿರ್ವಹಿಸುವ ಮೂಲಕ ಪೌರಕಾರ್ಮಿಕರು ಮತ್ತಷ್ಟು ಉಮ್ಮಸ್ಸಿನಿಂದ ಕೆಲಸ ಮಾಡಲು ಸಹಕರಿಸಿ ದ್ದಾರೆ. ಅವರಿಗೆ ಮತ್ತಷ್ಟು ಇಂತಹ ಕಾರ್ಯಗಳನ್ನು ಮಾಡುವ ಶಕ್ತಿ ತುಂಬಲಿ ಎಂದು ಹಾರೈಸಿದರು.
15ನೇ ವಾರ್ಡಿನ ಸದಸ್ಯೆ ಶ್ರೀಮತಿ ಗಿರಿಜಾ ಧನಿಯಕುಮಾರ್ ಮಾತನಾಡಿ, ಚಲನಚಿತ್ರ ನಟ ದರ್ಶನ್, ಉದ್ಯಮಿ ಚಂದ್ರಮೌಳಿ ಹಾಗೂ ತರಕಾರಿ ಸಗಟು ವ್ಯಾಪಾರಿಗಳಾದ ವಾಸುದೇವ್ ಅವರ ಸಹಕಾರದಿಂದ ನಮ್ಮ ವಾರ್ಡಿನಲ್ಲಿ ಕೆಲಸ ಮಾಡುವ ಎಲ್ಲಾ ಪೌರಕಾರ್ಮಿಕರು,ನೀರುಗಂಟಿಗಳು,ಆಟೋ ಚಾಲಕರಿಗೆ ದಿನಸಿ ಜೊತೆಗೆ,ಹಣ್ಣು,ತರಕಾರಿ ನೀಡಲಾಗಿದೆ.ಈ ಹಿಂದೆಯೇ ಅವರಿಗೆ ಅಗತ್ಯವಿರುವ ಮಾಸ್ಕ್,ಸ್ಯಾನಿಟೈಜರ್,ಗ್ಲೌಸ್,ಪೇಸ್ ಸೀಲ್ಡ್ ಸೇರಿದಂತೆ ಅಗತ್ಯ ಮುಂಜಾಗ್ರತಾ ಪರಿಕರ ನೀಡಿದ್ದೇವೆ. ಕೋರೋನ ಮಹಾಮಾರಿ ಸಂದರ್ಭದಲ್ಲಿ ಮುಂದೆ ನಿಂತು ಕೆಲಸ ಮಾಡುತ್ತಿರುವ ಇವರ ಸೇವೆ ಶ್ಲಾಘನೀಯ ಎಂದರು.
ಇದೇ ವೇಳೆ ಮೇಯರ್ ಬಿ.ಜಿ.ಕೃಷ್ಣಪ್ಪ,ಆಯುಕ್ತರಾದ ಶ್ರೀಮತಿ ರೇಣುಕಾ, ಪಾಲಿಕೆ ವೈದ್ಯಾಧಿಕಾರಿ ಡಾ.ರಕ್ಷಿತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!