Sunday, 23rd June 2024

ಸಿ.ರವಿಕುಮಾರ್‌ಗೆ ಪಿಹೆಚ್‌ಡಿ

ಚಿಕ್ಕನಾಯಕನಹಳ್ಳಿ : ಪಟ್ಟಣದ ನವೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸು ತ್ತಿರುವ ಸಿ.ರವಿಕುಮಾರ್ ಅವರಿಗೆ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗಿದೆ.

ಡಾ.ಡಿ.ವಿ.ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರಕ್ಕೆ ಸಲ್ಲಿಸಿದ ಕನ್ನಡದ ಸಮಚಿತ್ತ ವಿಮರ್ಶಕ ನರಹಳ್ಳಿ ಬಾಲಸುಬ್ರಮಣ್ಯ ಅವರ ಸಾಹಿತ್ಯ ಕುರಿತ ನರಹಳ್ಳಿ ಸಾಹಿತ್ಯದಲ್ಲಿ ಸಂಸ್ಕೃತಿ ಚಿಂತನೆ ಸ್ವರೂಪ ಮಹಾ ಪ್ರಬಂದಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ.

ಇವರು ತುಮಕೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಸ್. ಶಿವಣ್ಣ ಬೆಳವಾಡಿ ಮಾರ್ಗದರ್ಶನದಲ್ಲಿ ತನ್ನ ಸಂಶೋಧನ ಕಾರ್ಯ ಮುಗಿಸಿರುತ್ತಾರೆ.

error: Content is protected !!