Saturday, 27th July 2024

ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ : ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಗೆ ರಾಜ್ಯ ಸರಕಾರ ಕೇಂದ್ರ ಸರಕಾರಕ್ಕೆ ಶಿಫಾರಸ್ಸು ಮಾಡಿರುವ ಹಿನ್ನಲೆಯಲ್ಲಿ ಕರ್ನಾಟಕ ಮೀಸಲಾತಿ ಸಂರಕ್ಷಣಾ ಒಕ್ಕೂಟದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕನ್ನಡ ಸಂಘದ ವೇದಿಕೆ ಮುಂಭಾಗದಲ್ಲಿ ಸಮಾವೇಶಗೊಂಡ ಲಂಬಾಣಿ, ಬೊವಿ, ಕೊರಮ, ಕೊರಚ ಸಮುದಾಯದವರು ಅಲ್ಲಿಂದ ಕಪ್ಪು ಪಟ್ಟಿ ಧರಿಸಿ ಸರಕಾರದ ವಿರುದ್ದ ದಿಕ್ಕಾರ ಕೂಗುತ್ತಾ ಮೆರವಣಿಗೆ ಹೊರಟು ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರು.

ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಅನಂತನಾಯ್ಕ ಪರಿಶಿಷ್ಟ ಜಾತಿ ಪಟ್ಟಿಗೆ ಯಾವುದೇ ತಿದ್ದುಪಡಿ, ಮಾರ್ಪಾಡು ಅಥವಾ ಬದಲಾವಣೆ ತರಬೇಕು ಎಂದರೆ ಆ ಅಧಿಕಾರ ಇರುವುದು ಸಂಸತ್ತಿಗಷ್ಟೇ. ಪರಿಶಿಷ್ಟ ಜಾತಿಗಳನ್ನು ಒಳ ವರ್ಗಿಕರಿಸಿ ಪ್ರತ್ಯೇಕ ಮೀಸಲಾತಿ ನೀಡಲು ಅವಕಾಶ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನಕ ಪೀಠ ಸ್ಪಷ್ಟವಾಗಿ ಹೇಳಿದೆ. ಪರಿಸ್ಥಿತಿ ಹೀಗಿ ದ್ದರೂ ಸರಕಾರ ಎ.ಜೆ. ಸದಾಶಿವ ಅವರ ಏಕ ವ್ಯಕ್ತಿ ಆಯೋಗವನ್ನು ರಚಿಸುತ್ತದೆ. ಶೈಕ್ಷಣಿಕ ಮತ್ತು ಆರ್ಥಿಕ ವಿಷಯಗಳಿಗೆ ಸಂಬ0ಧಿಸಿದ0ತೆ ಅಂಕಿ ಅಂಶ ಗಳನ್ನು ಆಯೋಗ ಪ್ರತ್ಯಕ್ಷವಾಗಿ ತೆರಳಿ ಸಮೀಕ್ಷೆ ನಡೆಸಿ ಸಂಗ್ರಹಿ ಸಿರುವುದಿಲ್ಲ. ಇದು ಮುಚ್ಚಿದ ವರದಿ ಲಕೋಟೆಯಾಗಿದ್ದರೂ ಕೇಂದ್ರ ಸಚಿವ ನಾರಾಯಣಸ್ವಾಮಿ ಮುಖಾಂತರ ಮಾಧ್ಯಮಗಳಿಗೆ ವರದಿ ಸೋರಿಕೆಯಾಗಿದೆ ಎಂದು ಟೀಕಿಸಿದರು.

ಅಲೆಮಾರಿ ಸಮುದಾಯದ ಕಿರಣ್ ಕೊತ್ತಗೆರೆ ಮಾತನಾಡಿ ಸಂಬAಧಿತ ೧೦೧ ಜಾತಿಗಳಿಗೆ ವರದಿಯ ಧೃಢಿಕೃತ ಪ್ರತಿ ನೀಡಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಸಾರ್ವಜನಿಕವಾಗಿ ಚರ್ಚಿಸಿ ವರದಿ ಪಡೆದು ಆ ನಂತರ ಸೂಕ್ತ ಅಧ್ಯಯನ ನಡೆಸಿ ಪರಿಶಿಷ್ಟ ಜಾತಿಗಳ ಜನಸಂಖ್ಯಾವಾರು ಮೀಸಲಾತಿಗೆ ಶಾಸನ ರೂಪಿಸಲಿ ಎಂಬುದು ನಮ್ಮ ಮನವಿಯಾಗಿದೆ ಎಂದರು.

ನ್ಯಾಯಾAಗ ನಿಂದನೆ ಅರ್ಜಿ ಸಲ್ಲಿಸಿ : ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವುದು ನ್ಯಾಯಾಲಯದ ತೀರ್ಪಿನ ಉಲ್ಲಂಘನೆ ಎಂದ ಮೇಲೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಬಹುದಲ್ಲ ಎಂದು ಪರ್ತಕತ್ರರು ಪ್ರಶ್ನಿಸಿದಾಗ ಸರಿ ದಾಖಲಿಸುತ್ತೇವೆಂದಷ್ಟೇ ಉತ್ತರಿಸಿದರು. ಉತ್ತರ ಭಾರತದಿಂದ ವಲಸೆ ಬಂದವರು ಮೀಸಲಾತಿ ಪಡೆಯುತ್ತಿದ್ದಾರೆಂದು ಲಂಬಾಣಿ, ಕೊರಮ, ಕೊರಚ ಸಮುದಾಯವನ್ನು ಗುರಿಯಾಗಿಸಿ ಸಂಸದ ಬಸವರಾಜು ಟೀಕಿಸಿದ್ದಾರೆ ಇದು ಅವರಿಗೆ ಶೋಭೆ ತರುವುದಿಲ್ಲ ಎಂದು ಎಚ್ಚರಿಸಿದರು.

ಮಾಧುಸ್ವಾಮಿಗೆ ನಮ್ಮ ಸಮುದಾಯದ ಮೇಲೆ ಹೊಟ್ಟೆಕಿಚ್ಚು !
ಸಚಿವ ಮಾಧುಸ್ವಾಮಿ ಅವರಿಗೆ ಲಂಬಾಣಿ, ಬೋವಿ, ಕೊರಮ, ಕೊರಚ ಸಮುದಾಯದ ಮೇಲೆ ಹೊಟ್ಟಿಕಿಚ್ಚು ಇದ್ದಂತಿದೆ. ಪರಿಶಿಷ್ಟರ ಏಕತೆಗೆ ಅಡ್ಡಿಯಾಗಬಹುದಾದ ಅನೇಕ ಅಂಶಗಳಿದ್ದರೂ ಏಕಮುಖವಾಗಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿ ಇಡೀ ಸಮುದಾಯಕ್ಕೆ ವಿಷ ಉಣಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ವಿಚಾರವಾಗಿ ಮನವಿ ಸಲ್ಲಿಸಲು ಅವರ ಮನೆಗೆ ತೆರಳಿದಾಗ ನಮ್ಮನ್ನು ಏಕವಚನದಲ್ಲಿ ಮಾತನಾಡಿಸಿದರು ಎಂದು ಒಕ್ಕೂಟದ ರಾಜ್ಯಧ್ಯಕ್ಷ ರವಿ ಮಾಕಳಿ ಬೇಸರ ವ್ಯಕ್ತಪಡಿಸಿದರು.

ಆದರ್ಶ ಯಲ್ಲಪ್ಪ, ರಾಜನಾಯ್ಕ, ಶ್ರೀನಿವಾಸ ಮೂರ್ತಿ, ಓಂಕಾರ, ಪ್ರಕಾಶ್, ಒಕ್ಕೂಟದ ಪಧಾಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

error: Content is protected !!