Saturday, 14th December 2024

ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಶ್ರೀರಾಮ್‌’ಗೆ ರಾಜ್ಯಕ್ಕೆ ಎರಡನೇ ಸ್ಥಾನ

ಶಿರಸಿ: ೨೦೨೩-೨೪ ನೇ ಸಾಲಿನ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು, ಶಿರಸಿಯ ದರ್ಶನ, ಚಿನ್ಮಯ, ಶ್ರೀರಾಮ ೬೨೫/೬೨೪ ಅಂಕ ಪಡೆದಿದ್ದಾರೆ. ತಾಲೂಕಿನ ಬೈರುಂಬೆ ಆಂಗ್ಲಮಾಧ್ಯಮ ಶಾಲೆಯ ಶ್ರೀರಾಮ್ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ.

ಶಿರಸಿ ಶೇ.೮೪.೬೪, ಉತ್ತರಕನ್ನಡ ಜಿಲ್ಲೆ ಶೇ.೮೬.೫೪ ಫಲಿತಾಂಶ ಗಳಿಸಿದೆ. ಫಲಿತಾಂಶದಲ್ಲಿ ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳದ್ದೇ ಮೇಲುಗೈ ಆಗಿದೆ.

ಶಿರಸಿಯ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ದರ್ಶನ ಭಟ್ ಹಾಗು ಗೋಳಿ ಪ್ರೌಢಶಾಲೆಯ ಚಿನ್ಮಯಿ ಶ್ರೀಪಾದ ಹೆಗಡೆ ೬೨೫/೬೨೪ ಅಂಕ ಗಳಿಸಿದ್ದಾರೆ.

ಶಿರಸಿ ವಿದ್ಯಾರ್ಥಿಗಳ ಸಾಧನೆಗೆ ಶಾಸಕ ಭೀಮಣ್ಣ ನಾಯ್ಕ ಅಭಿನಂದನೆ ವ್ಯಕ್ತಪಡಿಸಿದ್ದಾರೆ.