Friday, 2nd June 2023

ಬಾಲಕಿ ಮೇಲೆ ನಾಯಿಗಳ ಹಿಂಡು ದಾಳಿ

ಬೆಂಗಳೂರು ಗ್ರಾಮಾಂತರ: ಹೊಸಕೋಟೆಯ ವಿವಿಧ ಬಡಾವಣೆಯಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು, ಕೆಲವು ದಿನಗಳ ಹಿಂದೆ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿ ಮೇಲೆ ನಾಯಿಗಳ ಹಿಂಡು ಬಾಲಕಿ ಮೇಲೆ ದಾಳಿ ಮಾಡಿದ್ದ ಘಟನೆ ನಡೆದಿದೆ.

ಜಿಲ್ಲೆಯ ಹೊಸಕೋಟೆಯಲ್ಲಿ ಬೀದಿ ನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದಾರಿಯಲ್ಲಿ ನಾಗರೀಕರು ಓಡಾಡಲು ಕೂಡ ಹೆದರಿಕೊಂಡು ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ ಎನ್ನಲಾಗಿದೆ.

ದಿನದಿಂದ ದಿನಕ್ಕೆ ನಾಯಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅವುಗಳಿಗೆ ಸಂತಾನ ಹರಣ ಅಪರೇಶನ್‌ ಮಾಡಬೇಕು, ನಾಯಿಗಳು ಜನತೆ ಮೇಲೆ ಹಲ್ಲೆ ಮಾಡಿ ಪ್ರಾಣವನ್ನು ಕೂಡ ಕಳೆಯುವ ದಿನವನ್ನು ನಾವು ಕಾಣಬಹುದಾಗಿದೆ ಅಂತ ಜನತೆ ಆಕ್ರೋಶ ವ್ಯಕ್ತಪಡಿಸು ತ್ತಿದ್ದಾರೆ.

error: Content is protected !!