Friday, 18th October 2024

ಉನ್ನತ ಶಿಕ್ಷಣ ವರ್ತಮಾನದ ಸವಾಲು: ಪ್ರೊ.ಎಸ್.ಎನ್.ಹೆಗ್ಡೆ

ತುಮಕೂರು: ಸಧೃಡ ಭಾರತ ನಿರ್ಮಾಣವಾಗಬೇಕಾದರೆ ದೇಶವು ಸರ್ವತೋಮುಖ ಬೆಳವಣಿಗೆ ಸಾಧಿಸಬೇಕು. ಇದಕ್ಕೆ ಉನ್ನತ ಶಿಕ್ಷಣ ಮೂಲಾಧಾರವಾಗಿದೆ. ಆದರೆ ಅದು ಸವಾಲುಗಳ ಮಧ್ಯೆ ಬಳಲುತ್ತಿದೆ ಎಂದು ಮೈಸೂರು ವಿವಿಯ ವಿಶ್ರಾಂತ ಕುಲಪತಿ ಪ್ರೊ. ಎಸ್. ಎನ್. ಹೆಗ್ಡೆ ಅಭಿಪ್ರಾಯಪಟ್ಟರು.
ತುಮಕೂರು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 77ನೇ ಸ್ವಾತಂತ್ರ್ಯ ಮಹೋ ತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವವಿದ್ಯಾನಿಲಯಗಳು ಸರ್ಕಾರದ ಅನುದಾನವನ್ನು ಕಾಯುವ ಬದಲು ಸಂಸ್ಥೆಯಲ್ಲೇ ಆರ್ಥಿಕವಾಗಿ ಸಬಲವಾಗು ವಂತಹ, ಸಂಪನ್ಮೂಲಗಳನ್ನು ಸೃಷ್ಟಿಸುವಂತಹ ಜ್ಞಾನಾಧಾರಿತ, ಉದ್ಯೋಗಾಧಾರಿತ ಶಿಕ್ಷಣ ವನ್ನು ವಿದ್ಯಾರ್ಥಿಗಳಿಗೆ ನೀಡಿದರೆ ಸ್ವಯಂ ಅಭಿವೃದ್ಧಿ ಸಾಧಿಸಬಹುದು ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸಮಾಜದಲ್ಲಿ ಹಲವಾರು ಬದಲಾವಣೆಗಳನ್ನು ಕಂಡಿದ್ದೇವೆ. ಇಂದು ಭಾರತ ಅಭಿವೃದ್ಧಿಯ ಪಥ ದಲ್ಲಿದೆ. ಸಮಾಜದಲ್ಲಿ ಹಲವಾರು ಸುಧಾರಣೆಗಳನ್ನು ತಂದಿದ್ದೇವೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಅವಶ್ಯವಿರುವ ಹೊಸ ಬದಲಾ ವಣೆಯನ್ನು ತರುವಲ್ಲಿ ಮೊದಲ ವಿವಿ ನಮ್ಮದೇ ಆಗಲಿ ಎಂಬ ಕನಸು ಹೊತ್ತಿದ್ದೇವೆ ಎಂದು ತಿಳಿಸಿದರು.
ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ಭವ್ಯ ಭಾರತದ ಸ್ವಾತಂತ್ರ ಕಗಿ ಹೋರಾಡಿದ ಎಲ್ಲ್ಲಾ ವೀರರನ್ನು ಸ್ಮರಿಸುವ ದಿನವಿದು. ದೇಶದ ಗಡಿ ಕಾಯುವ, ಅನ್ನ ನೀಡುವ ರೈತನೇ ನಿಜವಾದ ದೇಶ ಭಕ್ತ. ನಾವೆಲ್ಲರೂ ಜಾತಿ ಮತ ಪಗಂಡ ಧರ್ಮವೆಂಬ ಮೌಢ್ಯ ಆಚರಣೆಗಳ ಮನಸ್ತಾಪದಲ್ಲೇ ಬದುಕಿನ ಅಮೂಲ್ಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದೀವಿ. ಇವೆಲ್ಲವನ್ನೂ ಮೆಟ್ಟಿ ನಿಲ್ಲಬೇಕು. ಆಗಷ್ಟೇ ಭಾರತ ನಿರ್ಭರವಾಗುವುದು ಎಂದರು.
ವಿವಿ ವಿಜ್ಞಾನ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ಸ್ವಾಗತಿಸಿ, ನಿರೂಪಿಸಿದರು. ವಿಶ್ವವಿದ್ಯಾ ನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ನಿರ್ದೇಶಕ ಡಾ. ಎ. ಎಂ. ಮಂಜುನಾಥ ವಂದಿಸಿದರು.