Sunday, 8th September 2024

ನೀರಿನಲ್ಲಿ ಮುಳುಗುತ್ತಿದ್ದ ತಂಗಿಯನ್ನು ರಕ್ಷಿಸಿದ ಅಕ್ಕ

ತುಮಕೂರು: ಚೆಂಡು ​ ತೆಗೆಯಲು ಹೋಗಿ ಕಾಲು ಜಾರಿ ಆಕಸ್ಮಿಕವಾಗಿ ಬಾವಿಗೆ ಬಿದ್ದ 3 ವರ್ಷದ ಬಾಲಕಿಯನ್ನು ಆಕೆಯ ಸಹೋದರಿಯೇ ಕಾಪಾಡಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ  ಕುಚ್ಚಂಗಿ ಗ್ರಾಮದಲ್ಲಿ ನಡೆದಿದೆ.
ಕುಚ್ಚಂಗಿ ಗ್ರಾಮದ ಬಳಿ ತೋಟದ ಮನೆಯಲ್ಲಿ ಉತ್ತರ ಪ್ರದೇಶ‌ ಮೂಲದ ಜೀತೇಂದ್ರ, ರಾಜಕುಮಾರಿ  ದಂಪತಿ ಕೆಲಸಕ್ಕೆ ಇದ್ದಾರೆ. ಇವರಿಗೆ ಶಾಲೂ (8), ಹಿಮಾಂಶು (7), ರಾಶಿ (3), ಕಪಿಲ್ (2) ಎನ್ನುವ ನಾಲ್ವರು ಮಕ್ಕಳಿದ್ದಾರೆ. ಇವರಲ್ಲಿ ಹಿಮಾಂಶು ಹಾಗೂ ರಾಶಿ ತೋಟದಲ್ಲಿ ಆಟವಾಡುತ್ತಿದ್ದರು.
ಈ ವೇಳೆ ಚೆಂಡು ಬಾವಿಗೆ ಬಿದ್ದಿದೆ. ಇದನ್ನು ತೆಗೆಯಲೆಂದು ಹಿಮಾಂಶು, ರಾಶಿ ಬಾವಿಗೆ ಇಳಿದಿದ್ದಾರೆ. ಆಗ ಕಾಲು ಜಾರಿ ರಾಶಿ ನೀರಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸು ತ್ತಿದ್ದಳು. ಇದನ್ನು ಕಂಡ ಶಾಲೂ ಮನೆಯಲ್ಲಿದ್ದ ಲೈಫ್ ಜಾಕೆಟ್ ಧರಿಸಿ ನೀರಿಗೆ ಹಾರಿ ಸಹೋದರಿಯನ್ನು ರಕ್ಷಣೆ ಮಾಡಿದ್ದಾಳೆ.
ಈ ವೇಳೆ ಅಕ್ಕ ಪಕ್ಕದ ಜನರು ಕೂಡ ಶಾಲೂ ಸಹಾಯಕ್ಕೆ ಬಂದಿದ್ದು ಇಬ್ಬರನ್ನು ಬಾವಿಯಿಂದ ಮೇಲಕ್ಕೆ ಎಳೆದುಕೊಂಡಿದ್ದಾರೆ. ಸದ್ಯ ಇಬ್ಬರು ಆರೋಗ್ಯವ್ಯಾಗಿದ್ದಾರೆ . ಸದ್ಯ ಬಾಲಕಿಯ ಸಾಹಸಕ್ಕೆ  ಮೆಚ್ಚುಗೆ ವ್ಯಕ್ತವಾಗಿದೆ. ಶಾಲೂ ಪ್ರಸ್ತುತ ಈಜು ಕಲಿಯು ತ್ತಿದ್ದಳು. ಇದರಿಂದ ನೀರಿಗೆ ಯಾವುದೇ ಭಯವಿಲ್ಲದೇ ಲೈಫ್ ಜಾಕೆಟ್​ ಹಾಕಿಕೊಂಡು ನೀರಿಗೆ ಹಾರಿದ್ದಾಳೆ ಎಂದು ಆಕೆಯ ಪೋಷಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!