Saturday, 27th July 2024

ಲಸಿಕೆ ವಿತರಣೆಗೆ ಚಾಲನೆ

ಮಡಿಕೇರಿ: ಕೊಡಗು ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದದ ಲಸಿಕೆ ವಿತರಣೆಗೆ ಚಾಲನೆ ದೊರಕಿತು.

ಮಡಿಕೇರಿ ನಗರಸಭೆಯ ಡಿ. ಗ್ರೂಪ್ ಸಿಬ್ಬಂದಿ ಪೊನ್ಮಮ್ಮ ಅವರಿಗೆ ಮೊದಲ ಲಸಿಕೆ ನೀಡಲಾಯಿತು. ಈ ಸಂದಭ೯ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್. ಎಂ.ಎಲ್.ಸಿ. ಸುನೀಲ್ ಸುಬ್ರಹ್ಮಣಿ, ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಸೇರಿ ದಂತೆ ಪ್ರಮುಖರು ಹಾಜರಿದ್ದರು. ಕೊಡಗಿನ 5 ಸ್ಥಳಗಳಲ್ಲಿ ಲಸಿಕೆ ವಿತರಣಾ ಅಭಿಯಾನಕ್ಕೆ ಚಾಲನೆ ದೊರಕಿತು.

ಕೊಡಗು ಜಿಲ್ಲೆಗೆ ಈಗಾಗಲೇ 4 ಸಾವಿರ ಲಸಿಕೆಗಳು ತಲುಪಿದ್ದು, 5 ಕಡೆ ಲಸಿಕಾ ವಿತರಣಾ ಕೇಂದ್ರ ಪ್ರಾರಂಭಿಸಲಾಗಿದ್ದು ಇಂದು 474 ಮಂದಿಗೆ ಪ್ರಾರಂಭಿಕ ಹಂತದ ಲಸಿಕೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 6,560 ಕೋರೋನಾ ವಾರಿಯರ್ಸ್ ಗಳನ್ನು ಗುರುತಿಸ ಲಾಗಿದೆ ಎಂದು ಪ್ರಭಾರ ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಮಾಹಿತಿ ನೀಡಿದರು.

 

Leave a Reply

Your email address will not be published. Required fields are marked *

error: Content is protected !!