ಕೊಪ್ಪಳ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಆಯ್ಕೆ ಕಾಂಗ್ರೆಸ್ ಗಿಂತ ಬಿಜೆಪಿಗೆ ಹೆಚ್ಚು ನಷ್ಟವಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದರು. ವೈಯಕ್ತಿಕವಾಗಿ ನಾನು ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕಾಂಗ್ರೆಸ್ ಈಗಾಗಲೇ 136 ಸ್ಥಾನ ಗೆದ್ದು ಸರಕಾರ ರಚನೆ ಮಾಡಿದೆ. ಹೀಗಾಗಿ ವಿಜಯೇಂದ್ರ ಆಯ್ಕೆಯಿಂದ ಕಾಂಗ್ರೆಸ್ ಸಮಸ್ಯೆ ಆಗುವ ಪ್ರಶ್ನೆಯೇ ಇಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷ ಎಂದು ಘೋಷಣೆ ಆಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆದ್ದಿದೆ. ಅವರ ಸಾಕಷ್ಟು ಹಿರಿಯ ನಾಯಕರು, ನಾನು ಪದಗ್ರಹ ಣಕ್ಕೆ ಹೋಗುವುದಿಲ್ಲ. ಹಾಗೆ ಹೀಗೆ ಅಂತಾ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಬಿವೈವಿ ಸುಭೀಕ್ಷೆಯಿಂದ ಅಧಿಕಾರ ನಡೆಸಲು ಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.
ಮೋದಿ, ಅಮಿತ್ ಶಾ ಕಾಂಗ್ರೆಸ್ ಬಗ್ಗೆ ಕುಟುಂಬ ರಾಜಕಾರಣ ಎಂದು ಮಾತನಾಡುತ್ತಿದ್ದರು. ಇದೀಗ ವಿಜಯೇಂದ್ರ ಆಯ್ಕೆಗೆ ಏನಂತಾರೆ? ಯಡಿಯೂ ರಪ್ಪ ಸದ್ಯ ಅಧಿಕಾರದಲ್ಲಿ ಇಲ್ಲ ಎಂಬುದು ನಾಚಿಕೆಗೇಡಿನ ಸಮರ್ಥನೆ. ಯಡಿಯೂರಪ್ಪ ಹೆಸರಿನಲ್ಲೇ ವಿಜಯೇಂದ್ರ ಹೆಜ್ಜೆ ಹಾಕುತ್ತಿದ್ದಾರೆ ಎಂದು ಟೀಕಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಲೋಕಸಭೆ ಚುನಾವಣೆ ವೇಳೆಗೆ 10 ರಿಂದ 15 ಶಾಸಕರು ಕಾಂಗ್ರೆಸ್ ಸೇರುತ್ತಾರೆ. ಹಾಗಂತ ಇದು ಆಪರೇಷನ್ ಹಸ್ತ ಅಲ್ಲ. ಅಭಿವೃದ್ಧಿ ಮೆಚ್ಚಿ ಬರುತ್ತಿದ್ದಾರೆ. ಆದರೆ, ಯಾರೆಲ್ಲ ಬರುತ್ತಾರೆ ಅಂತಾ ನನಗೆ ಗೊತ್ತಿಲ್ಲ. ಯಾರೂ ಕೂಡ ನನ್ನ ಸಂಪರ್ಕದಲ್ಲಿ ಇಲ್ಲ. ಪಕ್ಷ ಸೇರುವಾಗ ಹೈಕಮಾಂಡ್ ಹೆಸರು ಬಹಿರಂಗಪಡಿಸಲಿದೆ. ಜಗದ್ದೀಶ ಶೆಟ್ಟರ್ ಯಾವುದೇ ಕಾರಣಕ್ಕೆ ಬಿಜೆಪಿಗೆ ವಾಪಾಸ್ ಹೋಗುವ ಪ್ರಶ್ನೆ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿದ್ಯುತ್ ಕಳ್ಳತನ ಮಾಡಿದ್ದನ್ನು ಸ್ವತಃ ಎಚ್.ಡಿ.ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ. ಅದನ್ನೇ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್ ಅಂಟಿಸು ತ್ತಿದ್ದಾರೆ. ಅಂಟಿಸಲಿ ಬಿಡಿ ಎಂದು ಸಮರ್ಥಿಸಿಕೊಂಡರು.