ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Shubhanshu Shukla: 2 ತಿಂಗಳ ನಂತರ ಪತ್ನಿ, ಮಗನ ಭೇಟಿಯಾದ ಶುಕ್ಲಾ; ಅವರಿಗೋಸ್ಕರ ಮನೆಯೂಟ ರೆಡಿ ಆಗಿದೆ ಎಂದ ಮಡದಿ

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಐತಿಹಾಸಿಕ ಕಾರ್ಯಾಚರಣೆಯ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಬುಧವಾರ ತಮ್ಮ ಕುಟುಂಬವನ್ನು ಭೇಟಿಯಾಗಿದ್ದಾರೆ. ಹೂಸ್ಟನ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಮತ್ತು ಅವರ ಆರು ವರ್ಷದ ಮಗ ಕಿಯಾಶ್ ಅವರನ್ನು ಭೇಟಿಯಾಗಿದ್ದಾರೆ.

2 ತಿಂಗಳ ನಂತರ ಪತ್ನಿ, ಮಗನ ಭೇಟಿಯಾದ ಶುಕ್ಲಾ

Profile Vishakha Bhat Jul 17, 2025 10:58 AM

ವಾಷಿಂಗ್ಟನ್‌: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 18 ದಿನಗಳ ಐತಿಹಾಸಿಕ ಕಾರ್ಯಾಚರಣೆಯ ನಂತರ, ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ (Shubhanshu Shukla) ಬುಧವಾರ ತಮ್ಮ ಕುಟುಂಬವನ್ನು ಭೇಟಿಯಾಗಿದ್ದಾರೆ. ಹೂಸ್ಟನ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ತಮ್ಮ ಪತ್ನಿ ಕಾಮ್ನಾ ಶುಕ್ಲಾ ಮತ್ತು ಅವರ ಆರು ವರ್ಷದ ಮಗ ಕಿಯಾಶ್ ಅವರನ್ನು ಅಪ್ಪಿಕೊಳ್ಳುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಶುಭಾಂಶು ಶುಕ್ಲಾ ಬರೋಬ್ಬರಿ ಎರಡು ತಿಂಗಳುಗಳ ಬಳಿಕ ತಮ್ಮ ಕುಟುಂಬವನ್ನು ಭೇಟಿ ಮಾಡಿದ್ದಾರೆ.

ತಮ್ಮ ಅಧಿಕೃತ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಪೋಸ್ಟ್‌ ಮಾಡಿರುವ ಶುಭಾಂಶು ಶುಕ್ಲಾ, "ಭೂಮಿಗೆ ಹಿಂತಿರುಗಿ ನನ್ನ ಕುಟುಂಬವನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಳ್ಳುವುದು ಮನೆಯಂತೆ ಭಾಸವಾಯಿತು" ಎಂದು ಭಾವುಕರಾದ ಬರಹವನ್ನು ಬರೆದಿದ್ದಾರೆ. ಮಾನವ ಬಾಹ್ಯಾಕಾಶ ಹಾರಾಟದ ಕಾರ್ಯಾಚರಣೆಗಳು ಮಾಂತ್ರಿಕವಾಗಿವೆ ಆದರೆ ಅವುಗಳನ್ನು ಮನುಷ್ಯರು ಮಾಂತ್ರಿಕವಾಗಿ ಮಾಡುತ್ತಾರೆ ಎಂದು ಶುಕ್ಲಾ ಹೇಳಿದ್ದಾರೆ.

"ಬಾಹ್ಯಾಕಾಶ ಹಾರಾಟ ಅದ್ಭುತ ಆದರೆ ಬಹಳ ದಿನಗಳ ನಂತರ ನಿಮ್ಮ ಪ್ರೀತಿಪಾತ್ರರನ್ನು ನೋಡುವುದು ಅಷ್ಟೇ ಅದ್ಭುತ. ನಾನು ಕ್ವಾರಂಟೈನ್‌ಗೆ ಹೋಗಿ 2 ತಿಂಗಳುಗಳಾಗಿವೆ. ಕ್ವಾರಂಟೈನ್ ಕುಟುಂಬ ಭೇಟಿಗಳ ಸಮಯದಲ್ಲಿ ನಾವು 8 ಮೀ ಅಂತರದಲ್ಲಿ ಇರಬೇಕಾಗಿತ್ತು. ನನ್ನ ಪುಟ್ಟ ಮಗುವಿಗೆ ತನ್ನ ಕೈಯಲ್ಲಿ ಸೂಕ್ಷ್ಮಜೀವಿಗಳಿವೆ ಎಂದು ಹೇಳಬೇಕಾಗಿತ್ತು ಮತ್ತು ಅದಕ್ಕಾಗಿಯೇ ಅವನು ತನ್ನ ತಂದೆಯನ್ನು ಮುಟ್ಟಲು ಸಾಧ್ಯವಾಗಲಿಲ್ಲ. ಅವನು ಪ್ರತಿ ಬಾರಿ ಭೇಟಿಗೆ ಬಂದಾಗಲೆಲ್ಲಾ ಅವನು ತನ್ನ ತಾಯಿಯನ್ನು ಕೇಳುತ್ತಿದ್ದನು: 'ನಾನು ನನ್ನ ಕೈಗಳನ್ನು ತೊಳೆಯಬಹುದೇ?' ಎಂದು ಕೇಳುತ್ತಿದ್ದ. ಅವನ ಪ್ರಶ್ನೆಗೆ ಉತ್ತರಿಸುವುದೇ ಸವಾಲಿನ ಕೆಲಸವಾಗಿತ್ತು ಎಂದು ಶುಕ್ಲಾ ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Shubhanshu Shukla: ನಭದಿಂದ ಭೂಮಿಗಿಳಿದ ಶುಭಾಂಶು ಶುಕ್ಲಾ & ಟೀಮ್‌- ನಾಲ್ವರು ಗಗನಯಾತ್ರಿಗಳು ಸೇಫ್‌ ಲ್ಯಾಂಡಿಂಗ್‌

ಪತ್ನಿ ಹೇಳಿದ್ದೇನು?

ಶುಭಾಂಶು ಅವರು ಬಾಹ್ಯಾಕಾಶ ಪ್ರವಾಸ ಮುಗಿಸಿ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಶುಭಾಂಶು ಶುಕ್ಲಾ ಪತ್ನಿ ಕಾಮ್ನಾ ಶುಕ್ಲಾ, "ಶುಭಾಂಶು ಈಗ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ನಮ್ಮ ತಕ್ಷಣದ ಗಮನವು ಅವರು ಭೂಮಿಯ ಮೇಲಿನ ಜೀವನಕ್ಕೆ ಸರಾಗವಾಗಿ ಹೊಂದಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುವುದರ ಮೇಲೆ ಇರುತ್ತದೆ" ಎಂದು ಹೇಳಿದ್ದಾರೆ. "ನಮಗೆ, ಈ ಅದ್ಭುತ ಪ್ರಯಾಣದ ನಂತರ ಮತ್ತೆ ಒಂದಾಗುತ್ತಿರುವುದು ಅದ್ಭುತ ಆಚರಣೆಯಂತೆ ಭಾಸವಾಗುತ್ತಿದೆ. ಶುಭಾಂಶು ಶುಕ್ಲಾ ಅವರ ಬಾಹ್ಯಾಕಾಶ ಸಾಧನೆ ನಮಗೆಲ್ಲರಿಗೂ ಸ್ಪೂರ್ತಿ ಎಂದು ಅವರು ಹೇಳಿದ್ದಾರೆ. ʼಶುಭಾಂಶು ಶುಕ್ಲಾ ತಮ್ಮ ಬಾಹ್ಯಾಕಾಶದಲ್ಲಿ ಮನೆಯೂಟವನ್ನು ಮಿಸ್‌ ಮಾಡಿಕೊಂಡಿರುತ್ತಾರೆ.ನಾನು ಅವರಿಗೆ ಇಷ್ಟವಾದ ಭೋಜನ ಮಾಡುವುದರಲ್ಲಿ ತಲ್ಲೀನಳಾಗಿದ್ದೇನೆ ಎಂದು ಕಾಮ್ನಾ ಹೇಳಿದ್ದಾರೆ.