Saturday, 7th September 2024

ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಡಾ. ನೀರಜ್ ಪಾಟೀಲ್ ಆಯ್ಕೆ

ಲಂಡನ್: ಮಾಜಿ ಮೇಯರ್​ ಡಾ. ನೀರಜ್ ಪಾಟೀಲ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಲಂಡನ್​ನ ಮಾಜಿ ಮೇಯರ್​ ಡಾ. ನೀರಜ್ ಪಾಟೀಲ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಬ್ರಿಟಿಷ್ ಲೇಬರ್ ಪಾರ್ಟಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.

ಈ ವಿಷಯವನ್ನು ಲೇಬರ್ ಪಾರ್ಟಿ ಪ್ರಧಾನ ಕಾರ್ಯದರ್ಶಿ ಡೇವಿಡ್ ಇವಾನ್ಸ್​ ತಿಳಿಸಿದ್ದಾರೆ.

ಜುಲೈ 15ರಂದು ಹೊರಡಿಸಿರುವ ಪತ್ರದಲ್ಲಿ ಅಪಘಾತ ಹಾಗೂ ತುರ್ತು ವೈದ್ಯಕೀಯ ಸಲಹೆಗಾರರಾದ ಡಾ. ನೀರಜ್ ಪಾಟೀಲ್ ಕಳೆದ 20 ವರ್ಷಗಳಿಂದ ಸಕ್ರಿಯವಾಗಿ ಕಾರ್ಮಿಕ ಪಕ್ಷದ ಸದಸ್ಯರಾಗಿದ್ದಾರೆ. ಸೇಂಟ್ ಥಾಮಸ್ ಆಸ್ಪತ್ರೆ ಕಿಂಗ್ಸ್​ ಕಾಲೇಜು ಆಸ್ಪತ್ರೆಯ ಫೌಂಡೇಷನ್ ಗವರ್ನರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ.

ಲಂಡನ್‌ ಥೇಮ್ಸ್‌ ನದಿ ದಡದಲ್ಲಿ ಬಸವೇಶ್ವರ ಪ್ರತಿಮೆಯನ್ನು ಸ್ಥಾಪಿಸಲು ನೀರಜ್‌ ಪಾಟೀಲ್‌ ಪ್ರಮುಖ ಕಾರಣವಾಗಿದ್ದರು. ಕೊರೊನಾ ಸೋಂಕು ತಗುಲಿದ ಮೇಲೆ ಭಾವನಾತ್ಮಕ ಪತ್ರ ಬರೆದು ಜಗತ್ತಿನ ಗಮನ ಸೆಳೆದಿದ್ದರು.

ಇಂಗ್ಲೆಂಡ್‌ನ ಲ್ಯಾಂಬೆತ್‌ ನಗರದಲ್ಲಿ ಮೇಯರ್‌ ಆಗಿ ನೀರಜ್‌ ಪಾಟೀಲ್‌ ಕಾರ್ಯನಿರ್ವಹಿಸಿದ್ದಾರೆ.
ನೀರಜ್ ಪಾಟೀಲ್ ಎಂಟು ವರ್ಷಗಳ ಕಾಲ ಲ್ಯಾಂಬೆತ್ ಕೌನ್ಸಿಲ್​ನಲ್ಲಿ ಸೇವೆ ಸಲ್ಲಿಸಿದ್ದರು, 2015ರಲ್ಲಿ ಬ್ರಿಟಿಷ್ ಸಂಸತ್ತಿನ ಎದುರು ಬಸವೇಶ್ವರ ಪ್ರತಿಮೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಈ ಪ್ರತಿಮೆಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!