Saturday, 7th September 2024

ಮೊದಲ ಕಪ್ಪುವರ್ಣೀಯ ನಟ, ಆಸ್ಕರ್ ಪ್ರಶಸ್ತಿ ವಿಜೇತ ಸಿಡ್ನಿ ಪೊಯ್ಟಿಯರ್ ವಿಧಿವಶ

ಬೀಜಿಂಗ್: ಸಿನಿಮಾ ಜಗತ್ತಿನಲ್ಲಿ ಮೊದಲ ಕಪ್ಪುವರ್ಣೀಯ ನಟ ಆಸ್ಕರ್ ಪ್ರಶಸ್ತಿಯ ವಿಜೇತ 94 ವರ್ಷದ ಸಿಡ್ನಿ ಪೊಯ್ಟಿಯರ್ ವಿಧಿವಶರಾಗಿದ್ದಾರೆ.

ಇವರು ಬದುಕಿದ್ದಾಗ ವರ್ಣಭೇದ ನೀತಿಯ ವಿರುದ್ಧ ಮೆಟ್ಟಿ ನಿಂತು ಕಪ್ಪುಬಿಳುಪಿನ ಮಧ್ಯೆ ಹೋರಾಡಿ ಚಿತ್ರರಂಗಕ್ಕೆ ಬಂದoತವರು. ಲಿಲೀಸ್ ಆಫ್ ದಿ ಫೀಲ್ಡ್ ಚಿತ್ರದ ಪಾತ್ರದ ನಿರ್ವಹಣೆಗಾಗಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು.

ಜೊತೆಗೆ ಜನಾಂಗೀಯ ಅಡೆತಡೆಗಳನ್ನು ಮೆಟ್ಟಿ ನಿಂತು ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಕಪ್ಪುವರ್ಣೀಯ ಕಲಾವಿದ. ಜೊತೆಗೆ ನಾಗರಿಕ ಹಕ್ಕುಗಳ ಚಳುವಳಿಯ ಸಮಯದಲ್ಲಿ ಒಂದು ಪೀಳಿಗೆಗೆ ಸ್ಫೂರ್ತಿ ನೀಡಿದ ಕಲಾವಿದರೂ ಅವರಾಗಿದ್ದರು.

ಪೊಯ್ಟಿಯರ್ ಒಬ್ಬ ಐಕಾನ್, ಹೀರೋ ಮಾರ್ಗದರ್ಶಕ ,ಹೋರಾಟಗಾರ ಎಂದು ಬಹಮಿಯನ್ ಉಪಪ್ರಧಾನಿ ಚೆಸ್ಟರ್ ಕೂಪರ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಸಂತಾಪ ಸೂಚಿಸಿದ್ದಾರೆ. 

error: Content is protected !!