ಗೂಗಲ್ನಲ್ಲಿ ಸೀನಿಯರ್ ಮ್ಯಾನೇಜರ್ ಆಗಿದ್ದ ಹೆನ್ರಿ ಕಿರ್ಕ್ ಮುಂದಾಳತ್ವದಲ್ಲಿ ಒಟ್ಟು ಏಳು ಮಂದಿ ಸೇರಿ ಅಮೆರಿಕದ ನ್ಯೂಯಾರ್ಕ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಡಿಸೈನ್ ಮತ್ತು ಡೆವಲಪ್ಮೆಂಟ್ ಸ್ಟುಡಿಯೋ ಸ್ಥಾಪಿಸಿ ದ್ದಾರೆ.
ಗೂಗಲ್ ದಿಢೀರನೇ 12 ಸಾವಿರ ಮಂದಿ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದವರ ಲ್ಲಿ ಈ ಏಳು ಮಂದಿಯೂ ಇದ್ದಾರೆ. ಈ 12 ಸಾವಿರ ಮಂದಿಗೆ 60 ದಿನಗಳ ಕಾಲ ಸಮಯಾವಕಾಶ ಇದೆ. ಅಷ್ಟರೊಳಗೆ ಇವರು ಹೊಸ ಕೆಲಸ ಹುಡುಕಿಕೊಳ್ಳಬೇಕು ಇಲ್ಲಾ ಹೊಸ ಕಂಪನಿ ಸ್ಥಾಪನೆ ಮಾಡಬೇಕು. ಈ ಸಂದಿಗ್ಧ ಸಂದರ್ಭದಲ್ಲಿ ಹೆನ್ರಿ ಕಿರ್ಕ್ ಗೂಗಲ್ನ ಕೆಲ ಆಯ್ದ 6 ಟೆಕ್ಕಿಗಳನ್ನು ಜೊತೆಗೆ ಹಾಕಿಕೊಂಡು ಹೊಸ ಕಂಪನಿಯನ್ನೇ ಹುಟ್ಟು ಹಾಕಲು ನಿರ್ಧರಿಸಿದ್ದಾರೆ.
ಲಿಂಕ್ಡ್ ಇನ್ನಲ್ಲಿ ಇವರು ಒಂದು ಪೋಸ್ಟ್ ಹಾಕಿದ್ದು, ಅದರಲ್ಲಿ ತಾನು ಹೊಸ ಕಂಪನಿ ಸ್ಥಾಪಿಸಿರುವುದು, 60 ದಿನ ಕಾಲಾವಕಾಶ ಇರುವುದು ಇವೆಲ್ಲ ವನ್ನೂ ಪ್ರಸ್ತಾಪಿಸಿದ್ದಾರೆ. ಕುಟುಂಬದವರು 52 ದಿನ ಗಡುವು ಕೊಟ್ಟಿದ್ದಾರೆ. ಹೊಸ ಕಂಪನಿ ಯಶಸ್ವಿಯಾಗದೇ ಹೋದಲ್ಲಿ ಬೇರೆ ಕೆಲಸ ಹುಡುಕಿಕೊಳ್ಳ ಬೇಕಾಗುತ್ತದೆ.
ಇವರ ಹೊಸ ಕಂಪನಿಯು ಬೇರೆ ಕಂಪನಿಗಳ ಆಯಪ್ ಮತ್ತು ವೆಬ್ಸೈಟ್ಗಳಿಗೆ ಡಿಸೈನ್ ಮತ್ತು ರಿಸರ್ಚ್ ಟೂಲ್ಗಳನ್ನು ಒದಗಿಸುತ್ತದೆ. ಸಣ್ಣದಿಂದ ಹಿಡಿದು ದೊಡ್ಡದವರೆಗೆ, ಆರಂಭದಿಂದ ಹಿಡಿದು ಉನ್ನತದ ಹಂತದವರೆಗೆ ಎಂಥದ್ದೇ ಪ್ರಾಜೆಕ್ಟ್ಗಳಿಗೆ ವಿನ್ಯಾಸ, ಸಂಶೋಧನೆ ಮತ್ತು ಅಭಿವೃದ್ಧಿ ಮಾಡುವುದು ಈ ಮಾಜಿ ಗೂಗಲ್ ಉದ್ಯೋಗಿಗಳ ಕಾಯಕವಾಗಿದೆ.