Thursday, 19th September 2024

ನಾವಿಕ ಸಂಸ್ಥೆಯಿಂದ ಕರ್ನಾಟಕದ ಮಕ್ಕಳಿಗೆ ಜ್ಞಾನ-ದೀವಿಗೆ ಯೋಜನೆ

ಬೆಂಕಿ ಬಸಣ್ಣ ನ್ಯೂಯಾರ್ಕ್

ಸರಕಾರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಪೂರ್ವ ಅವಳಡಿಸಿದ ಟ್ಯಾಬ್‌ಗಳ ವಿತರಣೆ

ಅಮೆರಿಕದಲ್ಲಿರುವ ನಾವು ವಿಶ್ವ ಕನ್ನಡಿಗರು (ನಾವಿಕ) ಸಂಸ್ಥೆೆಯು ಹೊಸ ವರ್ಷದ ಶುಭದಿನದಂದು ಕಡಲಾಚೆಯಿಂದ ನಿಮ್ಮ ಅಂಗಳಕ್ಕೆ ಹಚ್ಚೇವು ಜ್ಞಾನ ದೀವಿಗೆ ಎಂಬ ಹೊಸ ಯೋಜನೆಯನ್ನು ಪ್ರಕಟಿಸಿತು.

ಇದು ಕರ್ನಾಟಕದ ಗ್ರಾಮೀಣ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪಠ್ಯಗಳನ್ನು ಪೂರ್ವ ಅವಳಡಿಸಿದ ಟ್ಯಾಬ್ಗಳನ್ನು ಉಚಿತವಾಗಿ ಒದಗಿಸುವ ಯೋಜನೆ. ನಾವಿಕ ಸಂಸ್ಥೆಯ ಅಧ್ಯಕ್ಷರಾದ ವಲ್ಲೀಶ ಶಾಸ್ತ್ರಿಯವರು ಈ ಜ್ಞಾನ ದೀವಿಗೆ ಯೋಜನೆಯನ್ನು ರೋಟರಿ ಕ್ಲಬ್, ಪಬ್ಲಿಕ್ ಟಿವಿ ಮತ್ತು ಕರ್ನಾಟಕ ಸರಕಾರಗಳ ಸಹಯೋಗದೊಂದಿಗೆ ಮಾಡುತ್ತೇವೆ ಮತ್ತುಈ ಟ್ಯಾಬ್‌ಗಳ ಮೇಲೆ ದಾನಿಗಳ ಹೆಸರನ್ನು ಮುದ್ರಿಸಿ ದಾನಿಗಳು ಆಯ್ಕೆ ಮಾಡಿದ ಶಾಲೆಗಳಿಗೆ ಕೊಡುತ್ತೇವೆ ಎಂದು ತಿಳಿಸಿದರು.

ನಾವಿಕ ಸಂಸ್ಥೆಯ ಜ್ಞಾನ ದೀವಿಗೆ ಕೋರ್ ಕಮಿಟಿಗೆ ಡಾ.ದೇವಾಂಗ ಶ್ರೀಕಾಂತ್ ಅವರು ಅಧ್ಯಕ್ಷರಾಗಿದ್ದು, ಕಮಿಟಿಯ ಸದಸ್ಯರಾಗಿ
ಸುಧೀಂದ್ರ ವರದರಾಜ್, ಬೆಂಕಿ ಬಸಣ್ಣ, ಪುಷ್ಪಲತಾ ನವೀನ್, ರಜನಿ ಮಹೇಶ್, ಡಾ.ಕೃಷ್ಣಮೂರ್ತಿ ಜೋಯಿಸ್, ಶಿವಕುಮಾರ್,
ಧ್ರುವ ಮುಂತಾದವರು ಇದ್ದಾರೆ. ನಾವಿಕ ಸಂಸ್ಥೆೆಯು ಅಮೆರಿಕದಲ್ಲಿರುವ ಎಲ್ಲಾ ಕನ್ನಡ ಸಂಘಗಳು ಮತ್ತು ಹೊರದೇಶಗಳಲ್ಲಿ ರುವ ವಿವಿಧ ಕನ್ನಡ ಸಂಘಗಳೊಂದಿಗೆ ಕೈಜೋಡಿಸಿ ಜ್ಞಾನ ದೀವಿಗೆ ಕಾರ್ಯಕ್ರಮದ ಯಶಸ್ಸಿಗೆ ಪ್ರಯತ್ನಿಸಲಿದೆ.

ಅನಿವಾಸಿ ಕನ್ನಡಿಗರು www.navika.org ವೆಬ್‌ಸೈಟ್‌ನಲ್ಲಿ ಟ್ಯಾಬ್‌ಗಳನ್ನು ದಾನ ಮಾಡಬಹುದು. ಗ್ರಾಮೀಣ ವಿದ್ಯಾರ್ಥಿಗಳೇ ಗುರಿ: ಕರೋನಾದಿಂದ ಕರ್ನಾಟಕದ ಬಹುತೇಕ ಗ್ರಾಮೀಣ ಪ್ರದೇಶದ ಪ್ರೌೌಢಶಾಲೆಗಳು, ಅನೇಕ ತಿಂಗಳುಗಳ ಕಾಲ ಮುಚ್ಚಿದ್ದು, ಅಲ್ಲಿಯ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ.

ಎಸ್‌ಎಸ್ ಎಲ್‌ಸಿ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಒಂದು ಮಹತ್ವದ ಘಟ್ಟವಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ, ಆ ವಿದ್ಯಾರ್ಥಿಗಳಿಗೆ, ಪಠ್ಯಗಳನ್ನು ಪೂರ್ವ ಅಳವಡಿಸಿದ (preloaded with subjects) ಟ್ಯಾಬ್ಲೆಟ್‌ಗಳನ್ನು ಉಚಿತವಾಗಿ ಕೊಟ್ಟು
ಇನ್ನು ಮೂರು ತಿಂಗಳಲ್ಲಿ ಬರುವ ಪರೀಕ್ಷೆಗಳನ್ನು ಎದುರಿಸಲು ಸಹಾಯ ಮಾಡುವ ಸದುದ್ದೇಶದ ಯೋಜನೆ ಹೊಂದಿದೆ.

ಈ ಟ್ಯಾಬ್‌ಗಳಲ್ಲಿ ಗಣಿತ, ವಿಜ್ಞಾನ, ಸಮಾಜಶಾಸ್ತ್ರ, ಇಂಗ್ಲಿಷ್ ಹೀಗೆ ಮುಂತಾದ ವಿಷಯಗಳನ್ನು ಅಳವಡಿಸಲಾಗಿದ್ದು, ವಿಡಿಯೊ
ಮತ್ತು ಇಂಟರ್ಯಾಕ್ಟೀವ್ ಲೆಸೆನ್ಸ್ ಮೂಲಕ ವಿದ್ಯಾರ್ಥಿಗಳು ಯಾರ ಸಹಾಯವೂ ಬೇಕಿಲ್ಲದೆ ಸ್ವತಃ ಕಲಿಯಬಹುದು. ಈ
ಟ್ಯಾಬ್‌ಗಳಲ್ಲಿ ಬೇರೆ ಯಾವುದೇ ವಿಡಿಯೊ ಗೇಮ್ಸ್ ಮತ್ತು ಬೇರೆ ಸಾಫ್ಟ್‌

‌‌ವೇರ್ ಡೌನ್ ಲೋಡ್ ಮಾಡದಂತೆ, ಸಿಮ್ ಕಾರ್ಡ್ ಹಾಕದಂತೆ ಸೆಕ್ಯೂರಿಟಿ ಹಾಕಲಾಗಿದ್ದು, ಯಾವುದೇ ರೀತಿಯ ದುರುಪಯೋಗ ವಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಈ ಟ್ಯಾಬ್‌ಗಳನ್ನು ಹೈಸ್ಕೂಲಿನ ಹೆಡ್‌ಮಾಸ್ಟರ್ ಮೂಲಕ ವಿತರಿಸಲಾಗುವುದು ಮತ್ತು ಮುಂದಿನ ವರ್ಷದ ವಿದ್ಯಾರ್ಥಿಗಳಿಗೂ ಈ ಟ್ಯಾಬ್ ಗಳನ್ನು ಮರು ಉಪಯೋಗಿಸಲಾಗುವುದು.

ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಜ್ಞಾನ-ದೀವಿಗೆ ಅಭಿಯಾನಕ್ಕೆ ನ.08ರಂದು
ಚಾಲನೆ ನೀಡಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸರಕಾರದೊಂದಿಗೆ ವಿವಿಧ ಸಂಘ-ಸಂಸ್ಥೆಗಳು ಕೈಜೋಡಿಸಿ, ಹೆಚ್ಚು
ಪರಿಣಾಮಕಾರಿಯಾಗಿ ಮಾಡಬೇಕೆಂದು ವಿನಂತಿಸಿಕೊಂಡಿದ್ದರು. ಅವರ ಕರೆಯ ಮೇರೆಗೆ ಈಗ ನಾವಿಕ ಸಂಸ್ಥೆಯು ಜ್ಞಾನದೀವಿಗೆ ಅಭಿಯಾನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೈಜೋಡಿಸಿದೆ.

ಈ ಜ್ಞಾನ ದೀವಿಗೆ ಯೋಜನೆಯು ಕರ್ನಾಟಕ ರಾಜ್ಯದ 30 ಜಿಲ್ಲೆಗಳ 2,68,0000 ವಿದ್ಯಾರ್ಥಿಗಳಿಗೆ ಟ್ಯಾಬ್‌ಗಳನ್ನು ಒದಗಿಸುವ
ಮಹತ್ವಾಕಾಂಕ್ಷೆಯನ್ನು ಹೊಂದಿದೆ.

Leave a Reply

Your email address will not be published. Required fields are marked *