Saturday, 27th July 2024

ನೇಪಾಳದಲ್ಲೂ ಎವರೆಸ್ಟ್, ಎಂಡಿಹೆಚ್ ಮಾರಾಟ, ಬಳಕೆ, ಆಮದಿಗೆ ನಿಷೇಧ

ಖಾಠ್ಮಂಡು: ನೇಪಾಳ ದೇಶ ಎರಡು ಭಾರತೀಯ ಮಸಾಲೆ ಬ್ರಾಂಡ್‌ಗಳಾದ ಎವರೆಸ್ಟ್ ಮತ್ತು ಎಂಡಿಹೆಚ್ ಮಾರಾಟ, ಬಳಕೆ ಮತ್ತು ಆಮದನ್ನು ನಿಷೇಧಿಸಿದೆ.

ಎವರೆಸ್ಟ್ ಮತ್ತು ಎಂಡಿಎಚ್ ಬ್ರಾಂಡ್ ಮಸಾಲೆಗಳ ಆಮದನ್ನು ನಿಷೇಧಿಸಲಾಗಿದೆ ಎಂದು ನೇಪಾಳದ ಆಹಾರ ತಂತ್ರಜ್ಞಾನ ಇಲಾಖೆ ವಕ್ತಾರ ಮೋಹನ್ ಕೃಷ್ಣ ಮಹಾರಾಜನ್ ಹೇಳಿದ್ದಾರೆ.

ನಾವು ಮಾರುಕಟ್ಟೆಯಲ್ಲಿ ಈ ಮಸಾಲೆಗಳ ಮಾರಾಟವನ್ನು ಸಹ ನಿಷೇಧಿಸಿದ್ದೇವೆ. ಈ ಎರಡೂ ಮಸಾಲೆಗಳಲ್ಲಿ ಅಪಾಯಕಾರಿ ರಾಸಾಯನಿಕಗಳಿರುವ ಬಗ್ಗೆ ತನಿಖೆ ನಡೆಯುತ್ತಿದೆ. ಅದರ ತನಿಖಾ ವರದಿ ಬರುವವರೆಗೆ ನಿಷೇಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.

ಮಸಾಲೆ ಪದಾರ್ಥಗಳಾದ MDH ಮತ್ತು ಎವರೆಸ್ಟ್‌ಗಳ ಹೆಸರುಗಳು ದಶಕಗಳಿಂದ ಮನೆಮಾತಾಗಿದೆ. ಈ ಬ್ರಾಂಡ್‌ಗಳ ಮಸಾಲೆಗಳನ್ನು ಮಧ್ಯಪ್ರಾಚ್ಯ ಸೇರಿದಂತೆ ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಎಮ್‌ಡಿಹೆಚ್ ಮತ್ತು ಎವರೆಸ್ಟ್ ಮಸಾಲೆಗಳ ತನಿಖೆಯು ಬ್ರಿಟನ್, ನ್ಯೂಜಿಲೆಂಡ್, ಅಮೆರಿಕ ಮತ್ತು ಆಸ್ಟ್ರೇಲಿಯಾದಲ್ಲಿಯೂ ಪ್ರಾರಂಭವಾಗಬಹುದು ಎಂಬ ಮುನ್ಸೂಚನೆ ಸಿಕ್ಕಿದೆ.

ಬ್ರಿಟನ್‌ನ ಆಹಾರ ಸುರಕ್ಷತಾ ಸಂಸ್ಥೆ (ಎಫ್‌ಎಸ್‌ಎ) ಭಾರತದಿಂದ ಬರುವ ಎಲ್ಲಾ ಮಸಾಲೆಗಳ ಮೇಲೆ ವಿಷಕಾರಿ ಕೀಟನಾಶಕಗಳ ಪರೀಕ್ಷೆಯನ್ನು ಬಿಗಿಗೊಳಿಸುತ್ತಿದೆ ಎಂದು ಹೇಳಿದೆ.

ಮೊದಲು ಹಾಂಗ್ ಕಾಂಗ್ ನಿಷೇಧಿಸಿದ ನಂತರ, ಸಿಂಗಾಪುರದ ಆಹಾರ ಸಂಸ್ಥೆ (ಎಸ್‌ಎಫ್‌ಎ) ಕೂಡ ಎವರೆಸ್ಟ್‌ನ ಫಿಶ್ ಕರಿ ಮಸಾಲಾವನ್ನು ಇತ್ತೀಚೆಗೆ ನಿಷೇಧಿಸಿತ್ತು.

ಎಥಿಲೀನ್ ಆಕ್ಸೈಡ್ ಬಣ್ಣರಹಿತ ಅನಿಲವಾಗಿದೆ. ಕೋಣೆಯ ಉಷ್ಣಾಂಶದಲ್ಲಿ ಇರಿಸಿದಾಗ ಇದು ಸಿಹಿ ವಾಸನೆಯನ್ನು ನೀಡುತ್ತದೆ.

Leave a Reply

Your email address will not be published. Required fields are marked *

error: Content is protected !!