ಕ್ವಾಗಡೊಗೌ: ಶಂಕಿತ ಜಿಹಾದಿಗಳು ಪಶ್ಚಿಮ ಆಫ್ರಿಕಾದ ರಾಷ್ಟ್ರ ಬುರ್ಕಿನೊ ಫಾಸೊದಲ್ಲಿ ನಡೆಸಿದ ಗುಂಡಿನ ದಾಳಿಯಲ್ಲಿ 30 ನಾಗರಿಕರೂ ಸೇರಿ, 47 ಮಂದಿ ಮೃತಪಟ್ಟಿದ್ದಾರೆ. ಮೃತರಲ್ಲಿ 14 ಮಂದಿ ಸೈನಿಕರು ಸೇರಿದ್ದಾರೆ.
ಭದ್ರತಾ ಪಡೆಗಳು ನಡೆಸಿದ ಗುಂಡಿನ ಚಕಮಕಿಯಲ್ಲಿ 58 ಉಗ್ರರು ಮೃತಪಟ್ಟಿದ್ದು, 19 ಜನರು ಗಾಯಗೊಂಡಿದ್ದಾರೆ. ಪರಿಹಾರ ಮತ್ತು ರಕ್ಷಣಾ ಚಟುವಟಿಕೆಗಳು ನಡೆದಿವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ. ಕಳೆದ ಎರಡು ವಾರಗಳಲ್ಲಿ ನಡೆದ ಮೂರನೇ ದಾಳಿ ಪ್ರಕರಣ ಇದಾಗಿದೆ.
ಆ.4ರಂದು ನಡೆದಿದ್ದ ಪ್ರಮುಖ ದಾಳಿಯಲ್ಲಿ 11 ನಾಗರಿಕರು ಸೇರಿ ಒಟ್ಟು 30 ಜನರು, ಜೂನ್ 4-5ರಂದು ಸೊಲ್ಹಾನ್ ಗ್ರಾಮದಲ್ಲಿ ನಡೆದಿದ್ದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 132 ಜನರು ಮೃತಪಟ್ಟಿದ್ದರು.