EBIDTA: ಬೇಯರ್ ಎಜಿಯಿಂದ ಎಥಾಕ್ಸಿಸಲ್ಫ್ಯೂರಾನ್ ಸ್ವತ್ತುಗಳ ಸ್ವಾಧೀನ
EBIDTA: ಬೇಯರ್ ಎಜಿಯಿಂದ ಎಥಾಕ್ಸಿಸಲ್ಫ್ಯೂರಾನ್ ಸ್ವತ್ತುಗಳ ಸ್ವಾಧೀನ
Ashok Nayak
January 9, 2025
ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್ ಎನ್ನುವುದು ಬೇಯರ್ ಎಜಿಯಿಂದ ಎಥಾಕ್ಸಿಸಲ್ಫ್ಯೂರಾನ್ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳುವುದರೊಂದಿಗೆ ಭತ್ತದ ಕಳೆನಾಶಕಗಳಲ್ಲಿ ನಾಯಕತ್ವ ಬಲಪಡಿಸಲಿದ್ದು, EBIDTA ಅನ್ನು 20% ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಬೆಂಗಳೂರು, ಜನವರಿ 6, 2025: ಕೃಷಿ ಆವಿಷ್ಕಾರಗಳಲ್ಲಿ ಪ್ರವರ್ತಕ ಎನಿಸಿರುವ ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್ ಲಿಮಿಟೆಡ್, ಕೆಲವು ಏಷ್ಯನ್ ರಾಷ್ಟ್ರಗಳಲ್ಲಿ ಮಾರಾಟಕ್ಕಾಗಿ ಬೇಯರ್ ಎಜಿಯಿಂದ ಸಕ್ರಿಯ ಪದಾರ್ಥ ಎಥಾಕ್ಸಿಸಲ್ಪ್ಯೂರಾನ್ ನ ಜಾಗತಿಕ ಸ್ವಾಧೀನವನ್ನು ಪ್ರಕಟಿಸಿದೆ. ಈ ಸ್ವಾಧೀನವು, ಕ್ರಿಸ್ಟಲ್ ನ 13ನೇ ವ್ಯೂಹಾತ್ಮಕ ವಹಿವಾಟು ಮತ್ತು 2021 ರಲ್ಲಿ ಭಾರತೀಯ ಹತ್ತಿ, ಸಜ್ಜೆ ಸಿರಿಧಾನ್ಯ ಮತ್ತು ಸಾಸಿವೆ ಕಾಳಿನ ಪೋರ್ಟ್ ಫೋಲಿಯೋದ ಸ್ವಾಧೀನದ ನಂತರ ಬೇಯರ್ ನಿಂದ ಎರಡನೇ ಸ್ವಾಧೀನವಾಗಿದೆ.
ಅಂತಾರಾಷ್ಟ್ರೀಯ ಹಣಕಾಸು ನಿಗಮ (ಐಎಫ್ ಸಿ) ನಿಂದ ಬೆಂಬಲಿತವಾಗಿರುವ ಕ್ರಿಸ್ಟಲ್ ಕ್ರಾಪ್ ಒಂದು ಆರ್ ಮತ್ತು ಡಿ – ಆಧರಿತ ಬೆಳೆ ಪರಿಹಾರ ಕಂಪೆನಿಯಾಗಿದ್ದು, ಸುಧಾರಿತ, ರೈತ-ಕೇಂದ್ರಿತ ಪರಿಹಾರಗಳನ್ನು ಸುಮಾರು 4 ದಶಕಗಳಿಂದ ಪೂರೈಸುತ್ತಾ ಬಂದಿದೆ. ಇದು ಕ್ರಿಸ್ಟಲ್ ನ ಅತಿದೊಡ್ಡ ಸ್ವಾಧೀನಗಳಲ್ಲಿ ಒಂದಾಗಿದ್ದು, ಭತ್ತ ಕಳೆನಾಶಕ ಮಾರುಕಟ್ಟೆಯಲ್ಲಿ ತನ್ನ ನಾಯಕತ್ವವನ್ನು ಹೆಚ್ಚಿಸುತ್ತಾ 20% ರಷ್ಟು ತನ್ನ EBITDA ಹೆಚ್ಚಿಸಲಿದೆ.
ವಿಶ್ವಾಸಾರ್ಹ ಸನ್ ರೈಸ್ ಟ್ರೇಡ್ ಮಾರ್ಕ್ ಮತ್ತು ಎಲ್ಲಾ ನೋಂದಣಿಗಳೊಂದಿಗೆ ಎಥಾಕ್ಸಿಸಲ್ಫ್ಯೂರಾನ್ ಒಳ ಗೊಂಡಿರುವ ಮಿಶ್ರ ಉತ್ಪನ್ನವನ್ನು ವಹಿವಾಟು ತರುತ್ತದೆ. ಎಥಾಕ್ಸಿಸಲ್ಫ್ಯೂರಾನ್ ಎನ್ನುವುದು ಭತ್ತ ಮತ್ತು ಬೇಳೆಕಾಳುಗಳ ಬೆಳೆಯಲ್ಲಿ ಕಂಡುಬರುವ ಅಗಲ-ಎಲೆಯ ಕಳೆಗಳು ಮತ್ತು ಜೊಂಡುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಹೆಸರುವಾಸಿಯಾಗಿದ್ದು, ಕ್ರಿಸ್ಟಲ್ ನ ಪೊರ್ಟ್ ಫೋಲಿಯೋಗೆ ಒಂದು ಪ್ರಮುಖ ಸೇರ್ಪಡೆಯಾಗಿದೆ. ಸ್ಥಳೀಯವಾಗಿ ಉತ್ಪನ್ನವನ್ನು ತಯಾರಿಸುತ್ತಾ, ವೆಚ್ಚ-ಪರಿಣಾಮಕಾರಿ, ಸುಸ್ಥಿರ ಪರಿಹಾರಗಳನ್ನು ಒದಗಿಸುವ ಕ್ರಿಸ್ಟಲ್ ನ ಧ್ಯೇಯದೊಂದಿಗೆ ಸ್ವಾಧೀನ ಹೊಂದಾಣಿಕೆಯಾಗುತ್ತಿದ್ದು, ಭಾರತ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ (ವಿಯೆಟ್ನಾಂ, ಬಾಂಗ್ಲಾದೇಶ, ಥೈಲ್ಯಾಂಡ್ ಮತ್ತು ಪಾಕಿಸ್ತಾನ ಸೇರಿದಂತೆ) ರೈತರಿಗೆ ವರ್ಧಿತ ವೆಚ್ಚ ಸಿನರ್ಜಿಗಳು ಮತ್ತು ಅವಕಾಶಕ್ಕೆ ಕಾರಣವಾಗುತ್ತದೆ.
ಸ್ವಾಧೀನ ಕುರಿತಂತೆ ಮಾತನಾಡಿದ, ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ವಾಹಕ ಶ್ರೀ ಅಂಕುರ್ ಅಗರ್ವಾಲ್ ಹೀಗೆಂದಿದ್ದಾರೆ: "ರೈತರ ಜೀವನದಲ್ಲಿ ನಿಜವಾದ ಬದಲಾವಣೆ ತರುವ ಪರಿಹಾರಗಳೊಂದಿಗೆ ನಮ್ಮ ಪೋರ್ಟ್ ಫೋಲಿಯೋ ಬಲಪಡಿಸುವ ಮೇಲಿನ ನಮ್ಮ ಗಮನಕ್ಕೆ ಈ ಸ್ವಾಧೀನ ಒಂದು ರುಜುವಾತು ಎನಿಸಿದೆ. ಈ ವಹಿವಾಟಿನೊಂದಿಗೆ, ನಾವು ಸುಧಾರಿತ ಕಳೆ ನಿರ್ವಹಣೆ ಪರಿಹಾರಗಳೊಂದಿಗೆ ರೈತರನ್ನು ಸಬಲೀ ಕರಣಗೊಳಿಸುವಲ್ಲಿ ಮತ್ತೊಂದು ಹೆಜ್ಜೆ ಮುಂದಿಡುತ್ತಿದ್ದೇವೆ. ನಮ್ಮ ಬಲಿಷ್ಠ ವಿತರಣಾ ಜಾಲ ಮತ್ತು ಉತ್ಪಾದನಾ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ, ಈ ಪರಿಹಾರಗಳು ಭಾರತ, ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ್ಯಂತ ರೈತರಿಗೆ ಪರಿಣಾಮಕಾರಿಯಾಗಿ ತಲುಪುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ"
ಭತ್ತದ ಪರಿಸರವ್ಯವಸ್ಥೆ ಕುರಿತಂತೆ ಕ್ರಿಸ್ಟಲ್ ನ ತಿಳುವಳಿಕೆಯು ಈ ಸ್ವಾಧೀನವನ್ನು ಸಹಜವಾಗಿ ಹೊಂದಿಕೊಳ್ಳು ವಂತೆ ಮಾಡುತ್ತದೆ, ಬೀಜದಿಂದ ಹಿಡಿದು ಕೊಯ್ಲಿನವರೆಗೂ ಸಮಗ್ರ ಪರಿಹಾರಗಳೊಂದಿಗೆ ರೈತರನ್ನು ಬೆಂಬಲಿಸುವ ತನ್ನ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ತನ್ನ ಪಾಲುದಾರಿಕೆಗಳು ಮತ್ತು ಸ್ವಾಧೀನಗಳ ಮೂಲಕ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದಲ್ಲಿ ಕಂಪೆನಿಯ ಬೆಳವಣಿಗೆಯ ಸ್ಥಿತಿಯು, ಕೃಷಿ ಪರಿಹಾರಗಳ ಮಾರುಕಟ್ಟೆಯಲ್ಲಿ ಅದರ ಮುಖಂಡನ ಸ್ಥಾನವನ್ನು ಬಲಪಡಿಸುತ್ತದೆ.
ಕಾರ್ಯತಂತ್ರದ ಸ್ವಾಧೀನಗಳ ಮೂಲಕ ಅಜೈವಿಕ ಬೆಳವಣಿಗೆಗೆ ಉತ್ತೇಜನ ನೀಡುವ ಖ್ಯಾತಿಯನ್ನು ಕ್ರಿಸ್ಟಲ್ ಕ್ರಾಪ್ ಪ್ರೊಟೆಕ್ಷನ್ ತನ್ನದಾಗಿಸಿಕೊಂಡಿದೆ. 2024 ರಲ್ಲಿ ಐ ಅಂಡ್ ಬಿ ಬೀಜಗಳ ಸ್ವಾಧೀನದ ನಂತರ ಈ ವಹಿವಾಟು ನಡೆದಿದ್ದು, ಬೆಳೆ ರಕ್ಷಣೆ, ಬೀಜಗಳು ಮತ್ತು ಕೃಷಿ ಯಾಂತ್ರೀಕರಣದಲ್ಲಿ ಅದರ ಕೊಡುಗೆಗಳನ್ನು ವೈವಿಧ್ಯಗೊಳಿಸಲು ಮತ್ತು ವಿಸ್ತರಿಸಲು ತನ್ನ ನಿರಂತರ ಪ್ರಯತ್ನಗಳನ್ನು ಗುರುತಿಸುತ್ತದೆ. ವರ್ಷಗಳಿಂದೀಚೆಗೆ Syngenta, FMC, Bayer, BASF ಮತ್ತು Dow-Corteva ನಂತಹ ಪ್ರಮುಖ ಜಾಗತಿಕ ಕಂಪೆನಿಗಳಿಂದ ಕ್ರಿಸ್ಟಲ್ ಬ್ರ್ಯಾಂಡ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು, ನಿರಂತರವಾಗಿ ಉದ್ಯಮದ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುತ್ತಾ ಬಂದಿದೆ.