ಕಾನ್ಸ್ಟೇಬಲ್ ಅನಿಲ್’ಗೆ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ
ಕಾನ್ಸ್ಟೇಬಲ್ ಅನಿಲ್’ಗೆ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ
Vishwavani News
July 26, 2022
ಬಾಗಲಕೋಟೆ: ಚಿತ್ತೂರು ಬಳಿ ಅಪಘಾತದಲ್ಲಿ ಕಾನ್ಸ್ಟೇಬಲ್ ಅನಿಲ್ ಮೃತಪಟ್ಟಿದ್ದು, ಜಮಖಂಡಿಯ ಚಿಕ್ಕಲಕಿಯಲ್ಲಿ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ ಮಾಡಲಾಗಿದೆ.
ಬಾಗಲಕೋಟೆಯ ಜನರು ಕಾನ್ಸ್ಟೇಬಲ್ ಬೀಳ್ಕೊಟ್ಟರು.
ಮಂಗಳವಾರ ಗ್ರಾಮಕ್ಕೆ ಅನಿಲ್ ಮುಳಿಕ್ ಮೃತದೇಹ ತರಲಾಗಿತ್ತು. ಹುಟ್ಟೂರು ಚಿಕ್ಕಲಕಿಯಲ್ಲಿ ಅನಿಲ್ ಅಂತ್ಯಸಂಸ್ಕಾರ ಮಾಡಿದ್ದು, ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸ್ ಗೌರವ ಸಲ್ಲಿಸಿದೆ. ಬಾಗಲಕೋಟೆ SP ಜಯಪ್ರಕಾಶ್ ಜಮಖಂಡಿ, DySP ಪಾಂಡುರಂಗಯ್ಯ, ಸಿಪಿಐ ಗುರುನಾಥ ಚೌಹಾಣ್ ಸೇರಿ ಹಲವರು ಭಾಗಿಯಾಗಿದ್ದರು. ಅನಿಲ್ ಗ್ರಾಮದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.