ಜನಾರ್ಧನರೆಡ್ಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲು 108 ತೆಂಗಿನಕಾಯಿ ಸಮರ್ಪಣೆ
ಜನಾರ್ಧನರೆಡ್ಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳಲು 108 ತೆಂಗಿನಕಾಯಿ ಸಮರ್ಪಣೆ
Vishwavani News
December 23, 2022
ಬಳ್ಳಾರಿ: ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳ ಬೇಕು ಎಂದು ಹರಕೆ ಹೊತ್ತು ಅವರ ಅಭಿಮಾನಿ ಗಳು 108 ತೆಂಗಿನಕಾಯಿ ಸಮರ್ಪಣೆ ಮಾಡಿದರು.
ರೆಡ್ಡಿ ಅಭಿಮಾನಿ ಶ್ಯಾಮಸುಂದರ್ ಮತ್ತು ಅವರ ಬಳಗದವರು ಕನಕ ದುರ್ಗಮ್ಮ ದೇವಸ್ಥಾನದಲ್ಲಿ 108 ತೆಂಗಿನಕಾಯಿ ಸಮರ್ಪಿಸಿದರು.
ಇದೇ ಸಂದರ್ಭ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಮೇಲೆ ಎತ್ತುವುದರಲ್ಲಿ ಮಾಜಿ ಸಚಿವ ಜನಾ ರ್ಧನರೆಡ್ಡಿ ಅವರ ಪ್ರಮುಖ ಪಾತ್ರವಿದೆ. ಅಲ್ಲದೆ ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮ ಗಳನ್ನು ಕೈಗೊಂಡಿದ್ದಾರೆ. ಬೆಂಗಳೂರಿನ ರೀತಿಯಲ್ಲಿ ಬಳ್ಳಾರಿ ನಗರವನ್ನು ಡಬಲ್ ರಸ್ತೆ ಮತ್ತು ಬೀದಿ ದೀಪ ವ್ಯವಸ್ಥೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅಂದು ಕೈಗೊಂಡಿದ್ದರು ಎಂದರು.
ಪ್ರವಾಸೋದ್ಯಮ ಇಲಾಖೆ ಸಚಿವರಾಗಿದ್ದಾಗ ಹಂಪಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದರು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೂ ಕನಸು ಕಂಡಿದ್ದರು. ಅಂತಹವರು ಪಕ್ಷಕ್ಕೆ ಅವಶ್ಯ ಇದೆ ಎಂದರು.
Read E-Paper click here