ಮನಸ್ಸು ಮಾಡಿದರೆ ಒಂದು ದಿನವಾದರೂ ಮುಖ್ಯಮಂತ್ರಿಯಾಗುವೆ: ಜನಾರ್ದನ ರೆಡ್ಡಿ
ಮನಸ್ಸು ಮಾಡಿದರೆ ಒಂದು ದಿನವಾದರೂ ಮುಖ್ಯಮಂತ್ರಿಯಾಗುವೆ: ಜನಾರ್ದನ ರೆಡ್ಡಿ
Vishwavani News
June 22, 2022
ಬಳ್ಳಾರಿ: ನಾನು ಮನಸ್ಸು ಮಾಡಿದರೆ ಒಂದು ದಿನವಾದರೂ ಮುಖ್ಯಮಂತ್ರಿಯಾಗುವೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಮತ್ತೆ ಸುದ್ದಿಯಾಗಿದ್ದಾರೆ.
ಬಳ್ಳಾರಿಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಹುಟ್ಟುಹಬ್ಬದ ಸಮಾರಂಭದಲ್ಲಿ ಮಾತ ನಾಡಿದ ಅವರು, ರೆಡ್ಡಿ, ರಾಮುಲು ಸಹೋದರರಿಗೆ ದುಡ್ಡಿನ ಅವಶ್ಯಕತೆ ಇಲ್ಲ. ನನಗೆ ಶಾಸಕ ಆಗಬೇಕು. ಮಂತ್ರಿ ಆಗಬೇಕು ಎಂದು ಆಸೆಯಿಲ್ಲ. ನಾನು ಮನಸ್ಸು ಮಾಡಿದರೆ ಇವತ್ತು ಒಂದು ದಿನ ಆದರೂ ಸಿಎಂ ಆಗುವೆ ಎಂದರು.
ಲೋಕಸಭಾ ಕ್ಷೇತ್ರದ ಕೊನೆಯ ಸದಸ್ಯರಾಗಿ ಕರುಣಾಕರ ರೆಡ್ಡಿ ಕೆಲಸ ಮಾಡಿದ್ದಾರೆ. ಸೋಮಶೇಖರ್ ರೆಡ್ಡಿ ಬಳ್ಳಾರಿ ನಗರಸಭೆ ಅಧ್ಯಕ್ಷರಿಂದ ಈಗ ಶಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ರಾಜಕೀಯದಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಇಷ್ಟಾದ್ರೂ ನಾನಿಂದು ನಿಮ್ಮ ಮುಂದೆ ಬಂದು ನಿಲ್ಲಲು ಬಳ್ಳಾರಿ ಕನಕದುರ್ಗಮ್ಮ ದೇವಿ ವಿಶೇಷ ಆಶೀರ್ವಾದ ಕಾರಣ ಎಂದು ದೇವರ ಮೇಲೆ ಭಕ್ತಿ ತೋರಿದರು.
ನನ್ನ ಜಾಗದಲ್ಲಿ ಬೇರೆ ಯಾರಾದರೂ ಇದ್ದಿದ್ದರೆ ಇಷ್ಟೊಂದು ಸಮಸ್ಯೆ ಎದುರಿಸಲಾಗು ತ್ತಿರಲಿಲ್ಲ. ಅಷ್ಟು ತೊಂದರೆ ನನಗೆ ನೀಡಿ ದ್ದಾರೆ. ರೆಡ್ಡಿಯವರೇ ನಿಮಗೆ ತೊಂದರೆ ಮಾಡಬೇಕೆಂದು ಮೇಲಿನವರ ಆದೇಶ ಇದೆ ಎಂದು ಸಿಬಿಐನವರೇ ನನಗೆ ಹೇಳಿದರು. ಆದರೆ ಬಳ್ಳಾರಿಯ ಜನರಿಗೆ ನಿಮ್ಮ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದು ಸಿಬಿಐನವರು ಹೇಳಿದ್ದರು ಎಂದು ಹೊಸ ಬಾಂಬ್ ಹಾಕಿದ್ದಾರೆ.