Yash birthday: ಬಳ್ಳಾರಿಯಲ್ಲಿ ಕನಕದುರ್ಗಮ್ಮಗೆ ಯಶ್ ಫ್ಯಾನ್ಸ್ ವಿಶೇಷ ಪೂಜೆ; 'ಟಾಕ್ಸಿಕ್' ಗ್ಲಿಂಪ್ಸ್ ನೋಡಿ ಸಂಭ್ರಮ
Yash birthday: ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಲ್ಲಿ ಟಾಕ್ಸಿಕ್ ಚಿತ್ರದ ಗ್ಲಿಂಪ್ಸ್ ನೋಡಿ ಯಶ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಇದೇ ವೇಳೆ ಕನಕದುರ್ಗಮ್ಮಗೆ ವಿಶೇಷ ಪೂಜೆ ಮಾಡಿಸಲಾಗಿದೆ.
Prabhakara R
January 8, 2025
ಬಳ್ಳಾರಿ: 39ನೇ ವರ್ಷದ ಜನ್ಮದಿನದ (Yash birthday) ಸಂಭ್ರಮದಲ್ಲಿರುವ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳ ಕಡೆಯಿಂದ ಶುಭಾಶಯಗಳ ಸುರಿಮಳೆಯಾಗುತ್ತಿದೆ. ಇನ್ನು ನೆಚ್ಚಿನ ನಟನ ಹುಟ್ಟುಹಬ್ಬದ ದಿನವೇ ಮುಂದಿನ ಚಿತ್ರ ʼಟಾಕ್ಸಿಕ್ʼ ಗ್ಲಿಂಪ್ಸ್ ರಿಲೀಸ್ ಆಗಿದ್ದರಿಂದ ಅಭಿಮಾನಿಗಳು ಖುಷಿಯಾಗಿದ್ದಾರೆ.
ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನದಲ್ಲಿ ಟಾಕ್ಸಿಕ್ ಚಿತ್ರದ ಗ್ಲಿಂಪ್ಸ್ ನೋಡಿ ಯಶ್ ಫ್ಯಾನ್ಸ್ ಸಂಭ್ರಮಿಸಿದ್ದಾರೆ. ಕನಕದುರ್ಗಮ್ಮಗೆ ವಿಶೇಷ ಪೂಜೆ ಮಾಡಿಸಿದ ಗಣೇಶ್ ಹಾಗೂ ತಂಡದ ಸದಸ್ಯರು ಟಾಕ್ಸಿಕ್ ಚಿತ್ರ ಪ್ರಪಂಚವೇ ತಿರುಗಿ ನೋಡೋ ಸಿನಿಮಾ ಆಗಲಿ ಎಂದು ಹೇಳಿದರು. ಇದೇ ವೇಳೆ ಯಶ್ ಪೋಟೋ ಹಿಡಿದು ʼಟಾಕ್ಸಿಕ್ʼ ಗ್ಲಿಂಪ್ಸ್ ನೋಡುತ್ತಾ ಸಂಭ್ರಮಿಸಿದರು.
ಯಶ್ ಬರ್ತ್‌ಡೇಗೆ 'ಟಾಕ್ಸಿಕ್' ಸರ್ಪ್ರೈಸ್ ಗಿಫ್ಟ್
ಸಿನಿ ಪ್ರಿಯರಿಗೆ ರಾಕಿಂಗ್ ಸ್ಟಾರ್ ಯಶ್(Actor Yash) ಸರ್ಪ್ರೈಸ್ ಗಿಫ್ಟ್ ಕೊಟ್ಟಿದ್ದು, ಪ್ರೇಕ್ಷಕರು ಕಾತರದಿಂದ ಕಾಯುತ್ತಿರುವ ಟಾಕ್ಸಿಕ್(Toxic Movie) ಚಿತ್ರದ ಟೀಸರ್ ಇಂದು ರಿಲೀಸ್ ಆಗಿದೆ. ಯಶ್ ಜನ್ಮದಿನಕ್ಕೆ 'ಟಾಕ್ಸಿಕ್' ಸರ್ಪ್ರೈಸ್ ಗಿಫ್ಟ್ ರಿವೀಲ್ ಆಗಿದ್ದು, 59ಸೆಕೆಂಡ್ ಟೀಸರ್‌ನಲ್ಲಿ ರಾಕಿಂಗ್ ಸ್ಟಾರ್ ಮ್ಯಾನರಿಸಂಗೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಟಾಕ್ಸಿಕ್'ನ 59ಸೆಕೆಂಡ್‌ನ ಗ್ಲಿಮ್ಸ್ ಔಟ್ ಆಗಿದ್ದು, ಡ್ರಗ್ಸ್ ಮಾಫಿಯಾ ಕುರಿತ ಗ್ಲೋಬಲ್ ಸಿನಿಮಾ ಇದಾಗಿದೆ ಎಂಬುದು ಸ್ಪಷ್ಟವಾಗಿದೆ. ಇನ್ನು ಸ್ಟೈಲಿಶ್ ವಾಕ್, ಹಾಟ್ ಮ್ಯಾನರಿಸಮ್ ಲುಕ್‌ನಲ್ಲಿ ಯಶ್ ಗಮನ ಸೆಳೆದಿದ್ದಾರೆ. ಯಶ್ ಅವರು ರೆಟ್ರೋ ಕಾರಲ್ಲಿ ಸ್ಟೈಲಿಶ್ ಆಗಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಒಳಗೆ ಬರುತ್ತಿರುವಾಗ ಅಲ್ಲಿ ಎಲ್ಲರೂ ಮೋಜಿನಲ್ಲಿ ತೇಲುತ್ತಾ ಇರುತ್ತಾರೆ. ಆಗ ಯಶ್ ಅವರು ಶರಾಬಿನ ಬಾಟಲಿ ತೆಗೆದುಕೊಂಡು ಅಲ್ಲಿದ್ದ ಮಹಿಳೆಯ ಮೇಲೆ ಅದನ್ನು ಸುರಿಯುತ್ತಾರೆ. ಮೇಕಿಂಗ್ ನೋಡಿದರೆ ಇದು ರೆಟ್ರೋ ಕಥೆಯ ರೀತಿ ಕಾಣುತ್ತದೆ. ಸಿಕ್ಕಾಪಟ್ಟೆ ಹೈಪ್ ಅನ್ನು ಈ ಒಂದು ಗ್ಲಿಂಪಸ್ ಕ್ರಿಯೇಟ್ ಮಾಡಿರೋದರಲ್ಲಿ ಅನುಮಾನವೇ ಇಲ್ಲ. ಈ ಗ್ಲಿಂಪ್ಸ್ ಸಿನಿಮಾದಲ್ಲಿ ಬರುವ ಒಂದು ಕ್ಲಿಪ್ ಎಂದು ಹೇಳಲಾಗುತ್ತಿದೆ.
'ಟಾಕ್ಸಿಕ್' ಯಶ್ ನಟನೆಯ 19ನೇ ಸಿನಿಮಾವಾಗಿದ್ದು, 2023ರ ಡಿಸೆಂಬರ್ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್ 8ರಂದು ಆರಂಭವಾಗಿತ್ತು. ಬೆಂಗಳೂರಿನ ಎಚ್‌ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ, ನಂತರ ಮುಂಬೈ, ಗೋವಾ, ಮಂಗಳೂರಿನಲ್ಲೂ ಚಿತ್ರೀಕರಣ ನಡೆಸಿದೆ. ಕೆವಿಎನ್ ಪ್ರೊಡಕ್ಷನ್ ಹಾಗೂ ಯಶ್ ಅವರ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ.
ರಾಕಿಂಗ್ ಸ್ಟಾರ್ ಯಶ್ (Yash) ಅವರಿಗೆ ಇಂದು (ಜನವರಿ 8) ಜನ್ಮದಿನದ ಸಂಭ್ರಮ(Yash Birthday). ಅವರಿಗೆ ಎಲ್ಲ ಕಡೆಗಳಿಂದ ವಿಶ್ಗಳು ಹರಿದು ಬರುತ್ತಿವೆ. ಯಶ್ಗೆ ಈಗ ಕೇವಲ ಕರ್ನಾಟಕ ಮಾತ್ರವಲ್ಲ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಎಲ್ಲರೂ ಯಶ್ಗೆ ಬರ್ತ್ಡೇ ಶುಭಾಶಯ ತಿಳಿಸುತ್ತಿದ್ದಾರೆ. ಅವರಿಗೆ ಮತ್ತಷ್ಟು ಗೆಲುವು ಸಿಗಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ. ಯಶ್ ಅವರು ಏಕಾಏಕಿ ದೊಡ್ಡ ಸ್ಟಾರ್ ಆದವರಲ್ಲ. ಬಣ್ಣದ ಲೋಕಕ್ಕೆ ಕಾಲಿಡುವಾಗ ಅವರಿಗೆ ಯಾವುದೇ ಹಿನ್ನೆಲೆ ಇರಲಿಲ್ಲ. ಧಾರಾವಾಹಿ ಮೂಲಕ ವೃತ್ತಿಜೀವನ ಆರಂಭಿಸಿದ ಯಶ್ ನಂತರ ಚಿತ್ರರಂಗಕ್ಕೆ ಕಾಲಿಟ್ಟರು. ಈಗ ತಮ್ಮ ಸಾಮ್ರಾಜ್ಯವನ್ನು ಪ್ಯಾನ್ ಇಂಡಿಯಾ ಮಟ್ಟಕ್ಕೆ ವಿಸ್ತರಿಸಿಕೊಂಡಿದ್ದಾರೆ.
ಈ ಸುದ್ದಿಯನ್ನೂ ಓದಿ | Kangana Ranaut: ಎಮರ್ಜೆನ್ಸಿ ಚಿತ್ರ ವೀಕ್ಷಿಸಲು ಪ್ರಿಯಾಂಕಾ ಗಾಂಧಿಗೆ ಕಂಗನಾ ಆಹ್ವಾನ