Sirsi News: ಅಪಘಾತ: 10 ಮಂದಿ ಸಾವು, 12 ಜನರಿಗೆ ಗಂಭೀರ ಗಾಯ
ಹಾವೇರಿ ಜಿಲ್ಲೆಯ ಸವಣೂರಿನವರು ಕುಮಟಾ ಮಾರುಕಟ್ಟೆಗೆ ಲಾರಿಯಲ್ಲಿ ತರಕಾರಿ ಸಾಗಿಸುವ ಸಂದರ್ಭದಲ್ಲಿ ಅರಬೈಲ್ ಘಟ್ಟದಲ್ಲಿ ಲಾರಿ ಮಗುಚಿ ಬಿದ್ದು ಈ ಘಟನೆ ಸಂಭವಿಸಿದೆ. ಸಂಬಂಧಿ ಕರ, ಪಾಲಕರು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ
Source : Sirsi Reporter
ಶಿರಸಿ: ಯಲ್ಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿ, 11 ಮಂದಿ ದಾರುಣವಾಗಿ ಮೃತ ಪಟ್ಟಿದ್ದಾರೆ. 12 ಜನರಿಗೆ ಗಂಭೀರ ಗಾಯಗಳಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಗೆ ಸಾಗಿಸಲಾಗಿದೆ.
ಸ್ಥಳಕ್ಕೆ ಎಸ್ ಪಿ, ಶಾಸಕ ಶಿವರಾಮ ಹೆಬ್ಬಾರ, ಶಿಂಗ್ಗಾವಿ ಶಾಸಕ ಯಾಸಿರ್ ಖಾನ್ ಪಠಾಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ, ಮುಂದಿನ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹಿರೇ ಕೆರೂರು ಶಾಸಕ ಪಠಾಣ ಮಾಧ್ಯಮಕ್ಕೆ ಹೇಳಿಕೆ ನೀಡಿದರು.
ಮೃತರು ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದವರು
ಫಯಾಜ್ ಜಮಖಂಡಿ 45 ವರ್ಷ,
ವಾಸೀಂ ಮುಡಗೇರಿ 35 ವರ್ಷ,
ಇಜಾಜ್ ಮುಲ್ಲಾ 20 ವರ್ಷ.
ಸಾದೀಕ್ ಭಾಷ್ 30 ವರ್ಷ,
ಗುಲಾಮ್ ಹುಷೇನ್ ಜವಳಿ 40 ವರ್ಷ.
ಇಮ್ತಿಯಾಜ್ ಮುಳಕೇರಿ 36 ವರ್ಷ.
ಅಲ್ಪಾಜ್ ಜಾಫರ್ ಮಂಡಕ್ಕಿ 25 ವರ್ಷ
ಜೀಲಾನಿ ಅಬ್ದುಲ್ ಜಖಾತಿ 25 ವರ್ಷ
ಅಸ್ಲಂ ಬಾಬುಲಿ ಬೆಣ್ಣಿ 24 ವರ್ಷ ಮೃತರು ಗುರುತಿಸಲಾಗಿದೆ.
ಹಾವೇರಿ ಜಿಲ್ಲೆಯ ಸವಣೂರಿನವರು ಕುಮಟಾ ಮಾರುಕಟ್ಟೆಗೆ ಲಾರಿಯಲ್ಲಿ ತರಕಾರಿ ಸಾಗಿಸುವ ಸಂದರ್ಭದಲ್ಲಿ ಅರಬೈಲ್ ಘಟ್ಟದಲ್ಲಿ ಲಾರಿ ಮಗುಚಿ ಬಿದ್ದು ಈ ಘಟನೆ ಸಂಭವಿಸಿದೆ. ಸಂಬಂಧಿ ಕರ, ಪಾಲಕರು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಇದನ್ನೂ ಓದಿ: Sirsi News: ಉತ್ತರಕನ್ನಡ ಜಿಲ್ಲಾ 24 ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ