Purasabhe Election: ಬಿಜೆಪಿಯ ಲಕ್ಷ್ಮೀ ಕಡಕೋಳ ಅಧ್ಯಕ್ಷ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
Purasabhe Election: ಬಿಜೆಪಿಯ ಲಕ್ಷ್ಮೀ ಕಡಕೋಳ ಅಧ್ಯಕ್ಷ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆ
ರಾಮದುರ್ಗ: ಸ್ಥಳೀಯ ಪುರಸಭೆಗೆ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಬಿಜೆಪಿಯ ಲಕ್ಷಿö್ಮÃ ಕಡಕೋಳ ಅಧ್ಯಕ್ಷರಾಗಿ, ಸವಿತಾ ಧೂತ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಬಹುಮತ ಹೊಂದಿದ್ದ ಬಿಜೆಪಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡಿದ್ದರೆ, ಬಹುಮತ ಇರದಿದ್ದರೂ ಅಧಿಕಾರಿ ಗದ್ದುಗೆಗೆ ಕಸರತ್ತು ನಡೆಸಿದ್ದ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.
ಸ್ಥಳೀಯ ಪುರಸಭೆಗೆ ೨೭ ಸದಸ್ಯರನ್ನು ಹೊಂದಿದ್ದು, ೧೬ ಬಿಜೆಪಿ, ೧೦ ಕಾಂಗ್ರೆಸ್ ಹಾಗೂ ಒಬ್ಬರು ಪಕ್ಷೇತರ ಅಭ್ಯರ್ಥಿ ಚುನಾಯಿತರಾಗಿದ್ದರು. ಸಂಪೂರ್ಣ ಬಹುಮತ ಹೊಂದಿರುವ ಬಿಜೆಪಿ ಮೊದಲ ಅವಧಿಯಲ್ಲಿ ಶಂಕ್ರಪ್ಪ ಬೆನ್ನೂರ, ರಾಘನಾಥ ರೇಣಕೆ ಅಧ್ಯಕ್ಷರಾಗಿದ್ದರು. ರಾಘುನಾಥ ರೇಣಕೆ ಅವರ ಅಧಿಕಾರ ಅವಧಿ ೨೬.೪.೨೦೨೩ಕ್ಕೆ ಮುಕ್ತಾಯ ವಾಗಿತ್ತು. ಎರಡೇ ಅವಧಿಗೆ ಮೀಸಲಾತಿ ವಿಷಯದಲ್ಲಿ ಸರಕಾರ ವಿಳಂಭ ಮಾಡಿತ್ತು. ಕೆಲವು ತಿಂಗಳ ನಂತರ ಸರಕಾರ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ಘೋಷಣೆ ಮಾಡಿತ್ತು. ಆದರೆ ಕಾಂಗ್ರೆಸ್ ಸದಸ್ಯರೊಬ್ಬರು ಮೀಸಲಾತು ಪ್ರಶ್ನಿಸಿ ಹೈಕೋರ್ಟಗೆ ಮೆಟ್ಟಿಲೇರಿದ್ದರು. ೨ನೇ ಅವಧಿಗೆ ಸರಕಾರ ಘೋಷಿಸಿದ ಮೀಸಲಾತಿಯಂತೆಯೇ ಚುನಾವಣೆ ನಡೆಸಬೇಕೆಂದು ಹೈಕೋರ್ಟ ಸೂಚನೆ ನೀಡಿದ್ದರಿಂದ ಸೋಮವಾರ ಚುನಾವಣೆ ನಡೆಯಿತು.
ಬಹುಮತ ಇರದಿದ್ದರೂ ಎರಡನೇ ಅವಧಿಗೆ ಅಧಿಕಾರ ಗದ್ದುಗೆ ಏರಲು ಕಾಂಗ್ರೆಸ್ ಕೆಲ ಮುಖಂಡರು ಬಿಜೆಪಿಯ ೫ ಸದಸ್ಯರನ್ನು ಮನವೊಲಿಸಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು. ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಶತಾಯಗತಾಯ ಪ್ರಯತ್ನ ನಡೆಸಿ ಕಾಂಗ್ರೆಸ್‌ನವರು ಕರೆದುಕೊಂಡು ಹೋಗಿದ್ದ ೫ ಜನ ಬಿಜೆಪಿ ಸದಸ್ಯರಲ್ಲಿ ೩ ಸದಸ್ಯರನ್ನು ವಾಪಸ್ ಕರೆತರುವಲ್ಲಿ ಯಶಸ್ವಿಯಾಗಿದ್ದರಿಂದ ಎರಡೇ ಅವಧಿಗೂ ಬಿಜೆಪಿ ಸದಸ್ಯರೇ ಅಧ್ಯಕ್ಷ-ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಆಪರೇಶನ್ ಹಸ್ತ ಮಾಡಿಕೊಂಡು ಅಧಿಕಾರಿ ಗದ್ದುಗೆಯ ಕನಸು ಕಾಣುತ್ತಿದ್ದ ಕಾಂಗ್ರೆಸ್‌ಗೆ ಒಂದೇ ರಾತ್ರಿಯಲ್ಲಿ ಚಿತ್ರಣವೇ ಬದಲಾಗಿದ್ದರಿಂದ ಬಹುಮತದ ಕೊರತೆಯಿಂದಾಗಿ ಕಾಂಗ್ರೆಸ್ ಯಾವೊಬ್ಬ ಸದಸ್ಯರು ಚುನಾವಣೆ ಪ್ರಕ್ರಿಯೇಯಲ್ಲಿ ಭಾಗವಹಿಸದೇ ದೂರ ಉಳಿದರು.
ಸೋಮವಾರ ಬೆಳಿಗ್ಗೆ ಕಾಂಗ್ರೆಸ್ ಸದಸ್ಯೆ ಪದ್ಮಾವತಿ ಸಿದ್ಲಿಂಗಪ್ಪನವರ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಹೋದಾಗ ಜಾತಿ ಪ್ರಮಾಣ ಪತ್ರ ಇರದ ಕಾರಣ ನಾಮಪತ್ರ ಸಲ್ಲಿಸಲಿಲ್ಲ. ಅವರ ಬದಲಿಗೆ ಕಾಂಗ್ರೆಸ್ ಮತ್ತೊಬ್ಬ ಸದಸ್ಯ ಶಂಕ್ರಪ್ಪ ಸೂಳಿಭಾವಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಲಕ್ಷ್ಮೀ ಕಡಕೋಳ, ಉಪಾಧ್ಯಕ್ಷ ಸ್ಥಾನಕ್ಕೆ ಸವಿತಾ ಧೂತ ನಾಮಪತ್ರ ಸಲ್ಲಿಸಿದ್ದರು.
ಕೊನೆಯ ಹಂತದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್‌ನ ಶಂಕ್ರಪ್ಪ ಸೂಳಿಭಾವಿ ನಾಮಪತ್ರ ವಾಪಸ್ ಪಡೆದುಕೊಂಡರು. ಚುನಾವಣೆ ಅಖಾಡದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯಿಂದ ಮಾತ್ರ ಒಂದೊಂದೆ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಚುನಾವಣಾಧಿಕಾರಿ ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ಇಬ್ಬರು ಬಿಜೆಪಿ ಅಭ್ಯರ್ಥಿಗಳು ಅಧ್ಯಕ್ಷ-ಉಪಾಧ್ಯಕ್ಷರಾಗಿ ಆವಿರೋಧ ಆಯ್ಕೆಯಾಗಿದ್ದಾರೆಂದು ಘೋಷಿಸಿದರು.
ವಿಜಯೋತ್ಸವ: ಪುರಸಭೆಯಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಂಡ ಬಿಜೆಪಿ ಸದಸ್ಯರು ಮಾಜಿ ಶಾಸಕ ಮಹಾದೇವಪ್ಪ ಯಾದವಾಡ, ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಹಾಗೂ ಇತರ ಮುಖಂಡರೊAದಿಗೆ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.