Shivagange Hill: ಶಿವಗಂಗೆ ಗಿರಿಜಾ ಕಲ್ಯಾಣ ಮಹೋತ್ಸವದಲ್ಲಿ ಮಿಂದೆದ್ದ ಭಕ್ತ ಸಾಗರ
Shivagange Hill: ಶಿವಗಂಗೆಯ ಗಂಗಾಧರೇಶ್ವರ ದೇಗುಲದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಮಣದಂದು ಬೆಳಗಿನ ಜಾವ ಸಂಭ್ರಮದಿಂದ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು.
ನೆಲಮಂಗಲ: ತಾಲೂಕಿನ ಶಿವಗಂಗೆಯ ಗಂಗಾಧರೇಶ್ವರ ದೇಗುಲದಲ್ಲಿ ಪ್ರತಿ ವರ್ಷದಂತೆ ಮಕರ ಸಂಕ್ರಮಣದಂದು ಬೆಳಗಿನ ಜಾವ ಸಂಭ್ರಮದಿಂದ ಗಿರಿಜಾ ಕಲ್ಯಾಣ ಮಹೋತ್ಸವ ನೆರವೇರಿಸಲಾಯಿತು. ಮಧ್ಯಾಹ್ನ 3.30 ಗಂಟೆಯಿಂದ 04 ಗಂಟೆಯೊಳಗೆ ಸಲ್ಲುವ ಮಕರ ಲಗ್ನದಲ್ಲಿ ಸಂಪನ್ನವಾಯಿತು.
ಭೂ ಮಟ್ಟದಿಂದ 1600 ಮೀಟರ್ ಎತ್ತರ ಹಾಗೂ ಇಡೀ ಬೆಟ್ಟ 4567 ಅಡಿ ಎತ್ತರದ ಬೆಟ್ಟದ ತುತ್ತ ತುದಿಯಲ್ಲಿರುವ ತೀರ್ಥ ಕಂಬದಲ್ಲಿ ಮಂಗಳವಾರ ಮಧ್ಯಾಹ್ನ 02.39 ಕ್ಕೆ ಸರಿಯಾಗಿ ತೀಥೋದ್ಭವವಾಗಿದ್ದು, ಸಾಕಷ್ಟು ಹೇರಳ ಪ್ರಮಾಣದಲ್ಲಿ ಧಾರೆ ದೈವ ಜಲ ದೊರೆಯಿತು. ಈ ಜಲವನ್ನು ತಂದು ಶಿವ ಮತ್ತು ಗಿರಿಜಾ ಮಾತೆಗೆ ಧಾರೆ ಎರೆದು ನಂತರ ವಿವಾಹ ಮಹೋತ್ಸವ ಮಾಡಲಾಯಿತು.
ಈ ವೇಳೆ ಶಾಸಕ ಎನ್.ಶ್ರೀನಿವಾಸ್ ಮಾತನಾಡಿ, ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ದಿನ, ಶಿವಗಂಗೆಯಲ್ಲಿ ಹಗಲಿನಲ್ಲಿ ಗಿರಿಜಾ ಕಲ್ಯಾಣ ಮತ್ತು ಗಂಗೋತ್ಪತ್ತಿ ಚೆನ್ನಾಗಿ ಆಗಿರುವುದು ಸಂತಸ ತಂದಿದೆ. ಈ ವರ್ಷ ಮಳೆ-ಬೆಳೆ ಉತ್ತಮವಾಗಿ ಉಂಟಾಗಲಿ ರೈತರು ಸುಭೀಕ್ಷವಾಗಲಿ, ಶಾಸ್ತ್ರೋಕ್ತವಾಗಿ ಗಿರಿಜಾ ಕಲ್ಯಾಣ ನಡೆದಿದೆ. ಕ್ಷೇತ್ರದ ಜನತೆ ಸಂಕ್ರಾಂತಿ ಹಬ್ಬದ ಶುಭಾಶಯಗಳು. ಎರಡನೇ ಬಾರಿಗೆ ಶಿವಗಂಗೆ ಗಿರಿಜಾ ಕಲ್ಯಾಣ ವೀಕ್ಷಿಸಿದ್ದೇನೆ, ದಾಸೋಹಕ್ಕೆ ಆರ್ಥಿಕ ನೆರವು, ಉತ್ತಮ ರಾಸುಗಳಿಗೆ ಬಹುಮಾನವನ್ನು ವೈಯಕ್ತಿಕವಾಗಿ ಈ ವರ್ಷ ನೀಡಿ ಸಹಕರಿಸಿದ್ದೇನೆ. ಮುಂದಿನ ವರ್ಷದಲ್ಲಿ ಇನ್ನೂ ಹೆಚ್ಚಿನ ಸಹಕಾರ ವೈಯಕ್ತಿಕವಾಗಿ ನೀಡುತ್ತೇನೆ, ಕ್ಷೇತ್ರದ ಸೇವಕನಾಗಿ ಜನರ ಅಶೋತ್ತರಗಳಿಗೆ ಸ್ಪಂದಿಸುತ್ತೇನೆ, ಹೊನ್ನಾದೇವಿ ಯ ದರ್ಶನ ಮತ್ತು ದೇವಿ ಪ್ರಸಾದ ನೀಡಿದ್ದು ಸಂತಸವಾಗಿದೆ ಎಂದರು.
ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು
ಚಿಕ್ಕನಾಯಕನಹಳ್ಳಿ: ತಾಲೂಕಿನ ಬೆಳಗುಲಿ ಹೊನ್ನಮರಡಿ ಶ್ರೀ ರಂಗನಾಥ ಸ್ವಾಮಿಯ ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ (Honnamaradi Jatre) ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವೈಭವಯುತವಾಗಿ ನೆರವೇರಿತು.
ಶ್ರೀ ಹೊನ್ನಮರಡಿ ರಂಗನಾಥ ಸ್ವಾಮಿ ಬೆಟ್ಟದ ಮೇಲೆ ಶ್ರೀ ಉಡುಸಲಮ್ಮ ದೇವಿ ಆಗಮನದೊಂದಿಗೆ ನಡೆದ ಗಂಡುಗತ್ರಿ ಮುಳ್ಳಾವಿಗೆ ಉರುವತ್ತಿ ಮತ್ತು ದೊಡ್ಡ ಊಳಗ ಕಾರಣಿಕ, ಬಸವನ ಮೆರವಣಿಗೆಯನ್ನು ಭಕ್ತರು ಕಣ್ತುಂಬಿಕೊಂಡರು. ಜಾತ್ರೆ ಅಂಗವಾಗಿ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಯಿತು.