Emami: ಇಮಾಮಿಯಿಂದ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಬಿಡುಗಡೆ; ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬ್ರಾಂಡ್ ರಾಯಭಾರಿ
ಇಮಾಮಿ ಲಿಮಿಟೆಡ್ (Emami) ತನ್ನ ಪ್ರಮುಖ ಪುರುಷರ ಸೌಂದರ್ಯವರ್ಧನೆಯ ಬ್ರಾಂಡ್ ಫೇರ್ ಅಂಡ್ ಹ್ಯಾಂಡ್ಸಮ್ ಅನ್ನು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಎಂದು ರಿಬ್ರಾಂಡ್ ಮಾಡುತ್ತಿದ್ದು ಅದಕ್ಕೆ ಖ್ಯಾತ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬ್ರಾಂಡ್ ರಾಯಭಾರಿಯಾಗಿದ್ದಾರೆ. ಈ ಕುರಿತ ವಿವರ ಇಲ್ಲಿದೆ.
Vishwavani News
January 10, 2025
ಕೊಲ್ಕತಾ: ಇಮಾಮಿ ಲಿಮಿಟೆಡ್ (Emami) ತನ್ನ ಪ್ರಮುಖ ಪುರುಷರ ಸೌಂದರ್ಯವರ್ಧನೆಯ ಬ್ರಾಂಡ್ ಫೇರ್ ಅಂಡ್ ಹ್ಯಾಂಡ್ಸಮ್ ಅನ್ನು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಎಂದು ರಿಬ್ರಾಂಡ್ ಮಾಡುತ್ತಿದ್ದು ಅದಕ್ಕೆ ಖ್ಯಾತ ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಬ್ರಾಂಡ್ ರಾಯಭಾರಿಯಾಗಿದ್ದಾರೆ. ಈ ಗಮನಾರ್ಹ ಪರಿವರ್ತನೆಯು ದಿಟ್ಟ ಹೆಜ್ಜೆಯ ಗುರುತಾಗಿದ್ದು, ಸುಮಾರು ಎರಡು ದಶಕಗಳಿಂದ ಪುರುಷರ ಸೌಂದರ್ಯವರ್ಧಕ ಮಾರುಕಟ್ಟೆಯಲ್ಲಿ ಆಗಿರುವ ಗಮನಾರ್ಹ ಪರಿವರ್ತನೆಯನ್ನು ಬಿಂಬಿಸುತ್ತಿದೆ ಮತ್ತು ಸಮಗ್ರ ಸೌಂದರ್ಯ ವರ್ಧನೆಯ ನೀತಿಗಳಲ್ಲಿ ಸಾಂಸ್ಕೃತಿಕ ಪರಿವರ್ತನೆಯನ್ನು ತಂದಿದೆ. ಇಂದಿನ ಯುವಕರು ಚರ್ಮದ ಆರೋಗ್ಯ ಮತ್ತು ಒಟ್ಟಾರೆ ಸ್ವಾಸ್ಥ್ಯಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಅವರ ಈ ಎಲ್ಲ ಅಗತ್ಯಗಳನ್ನೂ ಪೂರೈಸುತ್ತದೆ ಎಂದು ತಿಳಿಸಿದೆ.
ಹೊಸ ಅಭಿಯಾನಕ್ಕೆ ʼಹರ್ ರೋಜ್ ಹ್ಯಾಂಡ್ಸಮ್ ಕೋಡ್ (ಪ್ರತಿದಿನವೂ ಹ್ಯಾಂಡ್ಸಮ್ ಕೋಡ್)ʼ ಎಂಬ ಧ್ಯೇಯವಾಕ್ಯ ಹೊಂದಿದ್ದು ಇದು ಪುರುಷರ ಸೌಂದರ್ಯವರ್ಧಕ ಪರಿಹಾರಗಳಿಗೆ ಬದ್ಧತೆಯನ್ನು ತೋರುತ್ತದೆ ಮತ್ತು ಅವರ ವಿಶ್ವಾಸ ಮತ್ತು ವ್ಯಕ್ತಿತ್ವವನ್ನು ಉನ್ನತೀಕರಿಸುತ್ತದೆ. ಚೆನ್ನಾಗಿ ಕಾಣುವುದು ಮಾತ್ರವಲ್ಲ ಪ್ರತಿನಿತ್ಯ ತಮ್ಮ ಚರ್ಮದ ಬಗ್ಗೆ ವಿಶ್ವಾಸದ ಭಾವನೆ ಹೊಂದುವುದೂ ಮುಖ್ಯವಾಗಿದೆ. ಈ ಹೊಸ ಗುರುತು ಪುರುಷರ ಸೌಂದರ್ಯ ವರ್ಧನೆಯಲ್ಲಿ ಈ ಬ್ರಾಂಡ್ ಹೊಂದಿರುವ ಸಮಗ್ರವಾದ ವಿಧಾನಕ್ಕೆ ಹೆಚ್ಚು ಒತ್ತು ನೀಡುತ್ತದೆ. ಅದು ಮುಖ, ಕೂದಲು ಮತ್ತು ಕೂದಲ ಆರೈಕೆಗೆ ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ. ಅಡೆತಡೆ ಇಲ್ಲದೆ ರಿಬ್ರಾಂಡಿಂಗ್ ಪರಿವರ್ತನೆಗೆ ಹೊಸ ಪ್ಯಾಕೇಜಿಂಗ್ ರೂಪಿಸಲಾಗಿದ್ದು ಅದು ʼಫೇರ್ ಅಂಡ್ ಹ್ಯಾಂಡ್ಸಮ್ ಈಗ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ʼ ಎಂಬ ಸಂದೇಶವನ್ನು ಪ್ರಮುಖವಾಗಿ ಬಿತ್ತರಿಸುವ ಮೂಲಕ ಗ್ರಾಹಕರಲ್ಲಿ ಅದರ ಚಿರಪರಿಚಿತತೆ ಮತ್ತು ವಿಶ್ವಾಸವನ್ನು ಮತ್ತೆ ದೃಢಪಡಿಸುತ್ತದೆ. ಬ್ರಾಂಡ್ ಪ್ರಯಾಣದಲ್ಲಿ ಈ ಮೈಲಿಗಲ್ಲಿನ ಹೆಜ್ಜೆಯನ್ನು ವಿಸ್ತರಿಸಲು ಜೆನ್-ಝಡ್ ಸೂಪರ್ ಸ್ಟಾರ್ ತಮ್ಮ ಯುವಶಕ್ತಿ, ಸ್ಟೈಲ್ ಮತ್ತು ಸಮ್ಮೋಹಕ ಶಕ್ತಿಗೆ ಖ್ಯಾತಿ ಪಡೆದ ಕಾರ್ತಿಕ್ ಆರ್ಯನ್ ಅವರನ್ನು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಬ್ರಾಂಡ್ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದ್ದು ಅವರು ಪುರುಷರು ಪ್ರತಿನಿತ್ಯ ತಮ್ಮ ಲುಕ್ ಮತ್ತು ಫೀಲ್ ನಲ್ಲಿ ಅತ್ಯುತ್ತಮ ರೀತಿಯಲ್ಲಿ ಕಾಣಬೇಕು ಎಂದು ಉತ್ತೇಜಿಸುವ ಬ್ರಾಂಡ್ ಸಿದ್ಧಾಂತಗಳನ್ನು ಸ್ವತಃ ಜೀವಿಸಿದ್ದಾರೆ. ಅವರ ಸಹಯೋಗವು ನಗರ ಮತ್ತು ಉದಯೋನ್ಮುಖ ಮಾರುಕಟ್ಟೆಗಳ ಯುವಕರಲ್ಲಿ ಬ್ರಾಂಡ್ ಸಂಪರ್ಕವನ್ನು ಶಕ್ತಿಗೊಳಿಸುವ ನಿರೀಕ್ಷೆ ಇದೆ.
ಈ ಸುದ್ದಿಯನ್ನೂ ಓದಿ | Winter Mix Match Fashion 2025: ಬದಲಾಗಿದೆ 2025ರ ಚಳಿಗಾಲದ ಮಿಕ್ಸ್ ಮ್ಯಾಚ್ ಫ್ಯಾಷನ್
ʼನಾವು ಇಂದಿನ ಡೈನಮಿಕ್ ಯುವಜನರ ಸೌಂದರ್ಯ ವರ್ಧನೆಯ ಅಗತ್ಯಗಳನ್ನು ಪೂರೈಸುವ ವಿಸ್ತಾರ ಕ್ಷೇತ್ರದಲ್ಲಿ ಅಪಾರ ಅವಕಾಶ ಕಾಣುತ್ತಿದ್ದೇವೆ. ಫೇರ್ ಅಂಡ್ ಹ್ಯಾಂಡ್ಸಮ್ ಅನ್ನು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿ ರಿಬ್ರಾಂಡ್ ಮಾಡುವುದು ಇಂದಿನ ಯುವಕರಲ್ಲಿ ನೈಸರ್ಗಿಕ ಚರ್ಮದ ಆರೋಗ್ಯಕ್ಕೆ ಆದ್ಯತೆ ನೀಡುವ ಅವರಲ್ಲಿ ವೈಯಕ್ತಿಕತೆ, ವೈವಿಧ್ಯತೆ ಮತ್ತು ವಿಶ್ವಾಸದತ್ತ ಪರಿವರ್ತನೆಯಾಗುತ್ತಿರುವ ಗ್ರಾಹಕ ಒಳನೋಟಗಳನ್ನು ಆಧರಿಸಿದೆ. ಗ್ರಾಹಕರು ಹೆಚ್ಚಾಗಿ ಹಲವು ಹೊಸ ಯುಗದ ಉತ್ಪನ್ನ ಮಾದರಿಗಳು ಮತ್ತು ಪರಿಹಾರಗಳಿಗೆ ತೆರೆದುಕೊಳ್ಳುತ್ತಿದ್ದು ಅದು ಅವರದೇ ಚರ್ಮದ ಅತ್ಯುತ್ತಮ ಆವೃತ್ತಿಗಳನ್ನು ಸಾಧಿಸಲು ನೆರವಾಗುತ್ತವೆ. ಹೊಸ ಉತ್ಪನ್ನದ ಬಿಡುಗಡೆ ಕುರಿತಾದ ಉತ್ಸಾಹ ಮತ್ತು ಕಾರ್ತಿಕ್ ಆರ್ಯನ್ ಬ್ರಾಂಡ್ ಹೊಸ ಮುಖವಾಗಿರುವುದರಿಂದ ನಾವು ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ನವೀಕೃತ ಗುರುತು ವಿಕಾಸಗೊಳ್ಳುತ್ತಿರುವ ಪುರುಷರ ಸೌಂದರ್ಯ ವರ್ಧನೆಯ ಮಾರುಕಟ್ಟೆಯಲ್ಲಿ ನಮ್ಮ ನಾಯಕತ್ವವನ್ನು ಮತ್ತಷ್ಟು ಸದೃಢಗೊಳಿಸಲಿದೆ ಎಂಬ ವಿಶ್ವಾಸ ನಮ್ಮದುʼ ಎಂದು ಇಮಾಮಿ ಲಿಮಿಟೆಡ್ ಉಪಾಧ್ಯಕ್ಷ ಮತ್ತು ಪೂರ್ಣಕಾಲಿಕ ನಿರ್ದೇಶಕ ಮೋಹನ್ ಗೋಯೆಂಕಾ ಹೇಳಿದರು.
ಕಾರ್ತಿಕ್ ಆರ್ಯನ್ ಈ ಸಹಯೋಗದ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸಿದ್ದು, ʼಇಮಾಮಿ ಕುಟುಂಬಕ್ಕೆ ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಪ್ರಚಾರ ರಾಯಭಾರಿಯಾಗಿ ಸೇರಿಕೊಳ್ಳುವುದು ನಿಜಕ್ಕೂ ಬಹಳ ಉತ್ಸಾಹ ತಂದಿದೆ. ಸೌಂದರ್ಯವರ್ಧನೆ ಎನ್ನುವುದು ಇಂದು ಹೊರನೋಟಕ್ಕಿಂತ ಹೆಚ್ಚಿನದಾಗಿದ್ದು ವಿಶ್ವಾಸ, ವೈಯಕ್ತಿಕತೆ ಮತ್ತು ಸ್ವಯಂ- ಅಭಿವ್ಯಕ್ತಿಯನ್ನು ಒಳಗೊಂಡಿದೆ. ಆಧುನಿಕ ಪುರುಷರಿಗೆ ಪರಿಣಾಮಕಾರಿ ಮತ್ತು ಸಕ್ರಿಯ ಪರಿಹಾರಗಳನ್ನು ಒದಗಿಸುವ ಮೂಲಕ ಅವರನ್ನು ಅತ್ಯುತ್ತಮವಾಗಿ ಕಾಣುವಂತೆ ಮಾಡುವ ಸಮಗ್ರ ಸೌಂದರ್ಯ ವರ್ಧನೆಯ ಬ್ರಾಂಡ್ ಧ್ಯೇಯೋದ್ದೇಶವು ನನ್ನಲ್ಲೂ ಆಳವಾಗಿ ಅನುಕರಣಿಸುತ್ತಿದೆ. ಈ ಉತ್ಸಾಹಕರ ಪ್ರಯಾಣದ ಭಾಗವಾಗಲು ನಾನು ಕಾತುರನಾಗಿದ್ದೇನೆʼ ಎಂದರು.
ರಿಬ್ರಾಂಡ್ ಮಾಡುವ ನಿರ್ಧಾರವು ಇಂದಿನ ಯುವಜನರು ಹೈಡ್ರೇಷನ್, ಜಿಡ್ಡು ನಿಯಂತ್ರಣ ಮತ್ತು ಒಟ್ಟಾರೆ ಚರ್ಮದ ಆರೋಗ್ಯ ಕುರಿತಾದ ಹಲವು ಬಗೆಯ ಸೌಂದರ್ಯವರ್ಧನೆಯ ಕಾಳಜಿಗಳನ್ನು ಹೊಂದಿದ್ದಾರೆ ಎಂಬ ವ್ಯಾಪಕ ಗ್ರಾಹಕ ಸಂಶೋಧನೆಯಿಂದ ಕೈಗೊಳ್ಳಲಾಯಿತು. ಭಾರತದ ಪುರುಷರ ಸೌಂದರ್ಯವರ್ಧನೆಯ ಮಾರುಕಟ್ಟೆಯು 2024ರಲ್ಲಿ ₹18,000 ಕೋಟಿ ರೂ. ಮೌಲ್ಯ ಹೊಂದಿರುತ್ತದೆ ಎಂದು ಅಂದಾಜಿಸಲಾಗಿದ್ದು ಈ ಬದಲಾವಣೆಯು ಪುರುಷರು ಅವರ ವಿಶ್ವಾಸ ಹೆಚ್ಚಿಸುವ ಉತ್ಪನ್ನಗಳಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿರುವ ಅವರ ಬದಲಾಗುತ್ತಿರುವ ವರ್ತನೆಯನ್ನು ಬಿಂಬಿಸುತ್ತದೆ.
ಈ ಸುದ್ದಿಯನ್ನೂ ಓದಿ | Sankranti Festival 2025: ಸಂಕ್ರಾಂತಿಗೆ ಎಳ್ಳು-ಬೆಲ್ಲ ಹಂಚಲು ಬಂತು ಬಗೆಬಗೆಯ ಡಿಸೈನರ್ ಬಾಕ್ಸ್!
ಕಾರ್ತಿಕ್ ಆರ್ಯನ್ ಅವರನ್ನು ಒಳಗೊಂಡಿರುವ ಈ ರಿಬ್ರಾಂಡಿಂಗ್ ಅಭಿಯಾನವು ಜನವರಿ ಮಧ್ಯದಲ್ಲಿ ಪ್ರಾರಂಭವಾಗಿದೆ ಮತ್ತು ಟೆಲಿವಿಷನ್, ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ. ಈ ವಿನೂತನ ಪ್ಯಾಕೇಜಿಂಗ್ ಗ್ರಾಹಕರು ಗುರುತಿಸಲು ಮತ್ತು ಈ ಉತ್ಸಾಹಕರ ಪರಿವರ್ತನೆಯ ನಡುವೆ ಸೇತುವೆಯಾಗಿ ಕೆಲಸ ಮಾಡಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.