Karnataka Weather: ರಾಜ್ಯದಲ್ಲಿ ಮುಂದಿನ ಐದು ದಿನ ಒಣ ಹವೆ, ಮುಂಜಾನೆ ದಟ್ಟ ಮಂಜು

Karnataka Weather: ರಾಜ್ಯದ ಸಮತಟ್ಟಾದ ಪ್ರದೇಶಗಳ ಪೈಕಿ ಧಾರವಾಡದಲ್ಲಿ ಸೋಮವಾರ ಅತಿ ಕಡಿಮೆ ಉಷ್ಣಾಂಶ 12.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇನ್ನು ಜನವರಿ 1ರಿಂದ 6ವರೆಗೆ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ.

Profile Prabhakara R December 31, 2024
ಬೆಂಗಳೂರು: ರಾಜ್ಯದಲ್ಲಿ ಚಳಿಯ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆ ಇದೆ. ಇನ್ನು ಒಳನಾಡಿನಲ್ಲಿ ಮುಂಜಾನೆ ಸಮಯದಲ್ಲಿ ದಟ್ಟ ಮಂಜು ಆವರಿಸಲಿದೆ ಎಂದು ಹವಾಮಾನ ಇಲಾಖೆ (Karnataka Weather) ಮುನ್ಸೂಚನೆ ನೀಡಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಳ ಪೈಕಿ ಧಾರವಾಡದಲ್ಲಿ ಸೋಮವಾರ ಅತಿ ಕಡಿಮೆ ಉಷ್ಣಾಂಶ 12.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. ಇನ್ನು ಜನವರಿ 1ರಿಂದ 6ವರೆಗೆ ರಾಜ್ಯದಾದ್ಯಂತ ಒಣ ಹವೆ ಇರುವ ಸಾಧ್ಯತೆಯಿದೆ. ರಾಜ್ಯದ ಕನಿಷ್ಠ ತಾಪಮಾನದಲ್ಲಿ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದೆ. ಜ.2 ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ: ಮುಂದಿನ 24 ಗಂಟೆಗಳು ಕಾಲ ಮುಖ್ಯವಾಗಿ ಸ್ಪಷ್ಟ ಆಕಾಶ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು/ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°C ಮತ್ತು 16° C ಇರುವ ಸಾಧ್ಯತೆ ಇದೆ. ಮುಂದಿನ 48 ಗಂಟೆಗಳ ಕಾಲ ಮುಖ್ಯವಾಗಿ ಸ್ಪಷ್ಟ ಆಕಾಶ. ಕೆಲವು ಕಡೆಗಳಲ್ಲಿ ಬೆಳಗಿನ ಜಾವದಲ್ಲಿ ಮಂಜು/ದಟ್ಟ ಮಂಜು ಇರುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 29°C ಮತ್ತು 16° C ಇರುವ ಸಾಧ್ಯತೆ ಇದೆ. ಈ ಸುದ್ದಿಯನ್ನೂ ಓದಿ | Health Tips: ರಕ್ತದೊತ್ತಡ ನಿಯಂತ್ರಣಕ್ಕೆ ‘ಆರೋಗ್ಯಕರ ಜೀವನ ಶೈಲಿ’ಯೇ ರಾಮ ಬಾಣ – ಇಲ್ಲಿದೆ ಅಮೂಲ್ಯ ಟಿಪ್ಸ್ ನಿಯಮಿತವಾಗಿ ಮೊಸರು ಸೇವಿಸಿದ್ರೆ ಆರೋಗ್ಯ ಹಸುರು! ಏನೆಲ್ಲಾ ಪ್ರಯೋಜನಗಳಿವೆ? ಪ್ರತಿದಿನ ಮೊಸರು (Curd) ಸೇವನೆಯಿಂದ ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ (Health Tips). ಯಾಕಂದ್ರೆ ಅದರಲ್ಲಿ ಕ್ಯಾಲ್ಸಿಯಂ (Calcium), ವಿಟಮಿನ್ (Vitamin), ಕ್ಯಾಲೊರಿ (calorie) ಹಾಗೂ ಪ್ರೋಟೀನ್‍ಗಳು (Protein) ಇವೆ. ಇವು ದೇಹಕ್ಕೆ ಸೂಕ್ತವಾದ ಪೋಷಣೆಯನ್ನು ನೀಡುತ್ತವೆ. ಮೊಸರು ಒಂದು ಡೈರಿ ಉತ್ಪನ್ನವಾಗಿದೆ. ಇದು ಕ್ಯಾಲ್ಸಿಯಂ, ವಿಟಮಿನ್ ಬಿ -2, ವಿಟಮಿನ್ ಬಿ -12, ಪೊಟ್ಯಾಸಿಯಮ್ (Potassium) ಮತ್ತು ಮೆಗ್ನೀಸಿಯಮ್’ನಂತ (Magnesium) ಹಲವಾರು ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಮೊಸರಿನ ನಿಯಮಿತ ಸೇವನೆಯು ಕೊಲೆಸ್ಟ್ರಾಲ್ (Cholesterol) ಮಟ್ಟವನ್ನು ಕಡಿಮೆ ಮಾಡುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೇ  ದೇಹದ ರೋಗನಿರೋಧಕ ಶಕ್ತಿಯನ್ನು (Immune system) ಹೆಚ್ಚಿಸುತ್ತದೆ. ಚರ್ಮದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಹಾಗೂ ತಲೆಹೊಟ್ಟು ಸೇರಿ ಇತರ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ರಕ್ತದೊತ್ತಡ ಕಂಟ್ರೋಲ್ ಮಾಡುತ್ತೆ ಮೊಸರು ಅಧಿಕ ರಕ್ತದೊತ್ತಡವನ್ನು (Blood Pressure) ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಮೊಸರಿನಲ್ಲಿರುವ ಪೊಟ್ಯಾಷಿಯಮ್ ಮತ್ತು ಮೆಗ್ನೀಷಿಯಮ್’ಗಳೊಂದಿಗೆ ವಿಶೇಷ ಪ್ರೋಟೀನ್’ಗಳು ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗೆಯೇ  ಮೊಸರನ್ನು (Curd) ಸೇವಿಸುವುದರಿಂದ  ರಕ್ತದೊತ್ತಡವನ್ನು ಕಾಪಾಡಿಕೊಂಡು ಆರೋಗ್ಯಕರ ಹೃದಯವನ್ನು ಪಡೆಯಬಹುದು. ಸಂಶೋಧನೆಯ ಪ್ರಕಾರ, ಹೆಚ್ಚು  ಮೊಸರನ್ನು ಸೇವಿಸುವ ಜನರು, ಇತರರಿಗಿಂತ ಅಧಿಕ ರಕ್ತದೊತ್ತಡ ಸಮಸ್ಯೆಯನ್ನು ಅನುಭವಿಸುವ ಸಾಧ್ಯತೆ ಶೇ.31ರಷ್ಟು ಕಡಿಮೆ ಎಂದು  ಹೇಳಿದೆ. ಮೂಳೆಗಳ ಆರೋಗ್ಯ ವೃದ್ಧಿ: ಮೊಸರಿನಲ್ಲಿ ಕ್ಯಾಲ್ಸಿಯಂ ಅಂಶಗಳು ಆಧಿಕವಾಗಿದ್ದು, ಇದು ಮೂಳೆಗಳ (Bones) ಆರೋಗ್ಯವನ್ನು ಕಾಪಾಡುತ್ತದೆ. ಹೀಗಾಗಿ ಮೊಸರನ್ನು ದಿನನಿತ್ಯ ಸೇವನೆ ಮಾಡುವುದರಿಂದ ದೇಹಕ್ಕೆ ಅಧಿಕ ಪ್ರಮಾಣದಲ್ಲಿ ಖನಿಜ ಕ್ಯಾಲ್ಸಿಯಂ ಸಿಗುತ್ತದೆ. ಒಂದು ಕಪ್ ಮೊಸರು  ಸುಮಾರು 275 ಮಿ.ಗ್ರಾಂ ಕ್ಯಾಲ್ಸಿಯಂ (Calcium) ಅನ್ನು ಹೊಂದಿರುತ್ತದೆ. ಕ್ಯಾಲ್ಸಿಯಂನ ದೈನಂದಿನ ಡೋಸ್ ಮೂಳೆ ಸಾಂದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹಾಗೆ ಮೂಳೆಗಳನ್ನು ಬಲಪಡಿಸುತ್ತದೆ. ಅದಲ್ಲದೆ ಮೊಸರಿನಲ್ಲಿ ಕೊಬ್ಬು ಮತ್ತು ಕ್ಯಾಲೋರಿಗಳ ಪ್ರಮಾಣ ಕಡಿಮೆ ಇದೆ.  ಹೀಗಾಗಿ, ನಮ್ಮ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಮೃದುತ್ವ ತ್ವಚೆಗಾಗಿ: ಮೊಸರು ಸೇವನೆಯಿಂದ ತ್ವಚೆಯ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ.  ದಿನನಿತ್ಯ ಮೊಸರು(Curd) ಸೇವನೆಯಿಂದ ಒಣ ಚರ್ಮವು (Dry Skin) ಮೃದತ್ವವನ್ನು ಪಡೆದುಕೊಳ್ಳುತ್ತದೆ. ಜಠರದ ಸಮಸ್ಯೆಗಳಿಂದಾಗಿ ಬಹಳಷ್ಟು ಜನರು ಮೊಡವೆಗಳಿಂದ ಬಳಲುತ್ತಿದ್ದಾರೆ. ಅಂತವರು ಮೊಸರನ್ನು ಬಳಸುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಮೊಸರು ಕರುಳಿನ ಆರೋಗ್ಯವನ್ನು ಕಾಡುತ್ತದೆ.  ಅದಲ್ಲದೆ ಮೊಸರು ಆರೋಗ್ಯಕರ ಚರ್ಮಕ್ಕೆ ಕಾರಣವಾಗಿದ್ದು, ಫೇಸ್ ಪ್ಯಾಕ್’ಗಳಿಗೆ (Face pack) ಅತ್ಯುತ್ತಮವಾದ ಸೌಂದರ್ಯವರ್ಧಕ ಅಂಶವಾಗಿದೆ. ಏಕೆಂದರೆ ಇದು ಲ್ಯಾಕ್ಟಿಕ್ ಆಮ್ಲವನ್ನು ಹೊಂದಿದ್ದು ಅದು ಎಕ್ಸ್ಫೋಲಿಯೇಟರ್   ಆಗಿ ಕಾರ್ಯನಿರ್ವಹಿಸುತ್ತದೆ. ಎಲ್ಲಾ ಕಲೆಗಳನ್ನು  ಗುಣಪಡಿಸುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಮದ್ದು: ಮೊಸರು (Curd) ದೇಹದಲ್ಲಿ ರೋಗನಿರೋಧಕ ಶಕ್ತಿಯ ಪ್ರಮಾಣವನ್ನು ಹೆಚ್ಚಿಸುತ್ತದೆ .  ಇದು ಖನಿಜಗಳು ಮತ್ತು ವಿಟಮಿನ್ಗಳು ಸೇರಿದಂತೆ  ಹೆಚ್ಚು  ಪೋಷಕಾಂಶಗಳನ್ನು ಹೊಂದಿದೆ. ಈ ಪೋಷಕಾಂಶಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕಾರಣವಾಗಿವೆ. ಹಾಗೇ ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡುತ್ತವೆ ಮತ್ತು ನಿಮ್ಮ ಕರುಳು (Intestine)  ಮತ್ತು ಕರುಳಿನ ಪ್ರದೇಶವನ್ನು ರಕ್ಷಿಸುತ್ತವೆ. ಸುಮಾರು 200 ಗ್ರಾಂ ಮೊಸರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳಿಗೆ ಸಮ. ಮೊಸರಿನಲ್ಲಿನ  ಪ್ರೋಬಯಾಟಿಕ್ಗಳು ದೇಹವನ್ನು  ವಿವಿಧ ವೈರಲ್ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ವಿರುದ್ಧ ಹೋರಾಡಲು ಮತ್ತು  ಆರೋಗ್ಯವಾಗಿರಿಸಲು  ಸಹಾಯಮಾಡುತ್ತದೆ. ಹೀಗಾಗಿ, ಹೆಚ್ಚಿದ ರೋಗನಿರೋಧಕ ಶಕ್ತಿಯು ಸಾಮಾನ್ಯ ಶೀತ, ಜ್ವರ ಮತ್ತು ಇತರ ಸೋಂಕುಗಳ ವಿರುದ್ಧ ಹೋರಾಡಲು ದೇಹಕ್ಕೆ ಸಹಾಯ ಮಾಡುತ್ತದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ