ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Stars Travel Fashion: ಸ್ಟಾರ್‌ ಕಪಲ್‌ ಸಂಗೀತಾ-ಸುದರ್ಶನ್‌ ಟರ್ಕಿ ಟ್ರಾವೆಲ್‌ ಫ್ಯಾಷನ್‌

Stars Travel Fashion: ಸ್ಟಾರ್‌ ಕಪಲ್‌ ಆಗಿರುವ ನಟಿ ಸಂಗೀತಾ- ನಟ ಸುದರ್ಶನ್‌ ಅವರ ಟರ್ಕಿ ಟ್ರಾವೆಲ್‌ ಫ್ಯಾಷನ್‌ ನೋಡಲು ಆಕರ್ಷಕವಾಗಿತ್ತಲ್ಲದೇ, ಟ್ರಾವೆಲ್‌ ಫ್ಯಾಷನ್‌ ಪ್ರಿಯರಿಗೆ ಮಾದರಿಯಾಗುವಂತಿತ್ತು. ಈ ಕುರಿತಂತೆ ಖುದ್ದು ನಟಿ ಸಂಗೀತಾ ಭಟ್‌, ವಿಶ್ವವಾಣಿ ನ್ಯೂಸ್‌ಗೆ ಒಂದಿಷ್ಟು ವಿಷಯ ಹಂಚಿಕೊಂಡಿದ್ದಾರೆ . ಟ್ರಾವೆಲ್‌ ಪ್ರೇಮಿಗಳಿಗೆ ಟಿಪ್ಸ್ ಕೂಡ ನೀಡಿದ್ದಾರೆ.

Stars Travel Fashion: ಸ್ಟಾರ್‌ ಕಪಲ್‌ ಸಂಗೀತಾ-ಸುದರ್ಶನ್‌ ಟರ್ಕಿ ಟ್ರಾವೆಲ್‌ ಫ್ಯಾಷನ್‌

ಸ್ಟಾರ್‌ ಕಪಲ್‌ ಸಂಗೀತಾ-ಸುದರ್ಶನ್‌

Profile Siddalinga Swamy Jan 20, 2025 9:14 PM

| ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಟಾರ್‌ ಕಪಲ್‌ ನಟಿ ಸಂಗೀತಾ- ನಟ ಸುದರ್ಶನ್‌ ಟರ್ಕಿ –ಇಸ್ತಾನ್‌ಬುಲ್‌ ಟ್ರಾವೆಲ್‌ ಫ್ಯಾಷನ್‌ (Stars Travel Fashion), ಅಲ್ಲಿನ ಸೀಸನ್‌ಗೆ ತಕ್ಕಂತಿತ್ತಲ್ಲದೇ, ಟ್ರಾವೆಲ್‌ ಫ್ಯಾಷನ್‌ ಪ್ರಿಯರಿಗೂ ಮಾದರಿಯಾಗುವಂತಿತ್ತು. ಅವರಿಬ್ಬರ ಹಾಲಿಡೇ ಫ್ಯಾಷನ್‌ -ಸ್ಟೈಲ್‌ ಸ್ಟೇಟ್‌ಮೆಂಟ್‌ಗಳು ಹೇಗಿತ್ತು? ಅಲ್ಲಿಗೆ ಹಾಲಿಡೇಗೆಂದು ಹೋಗುವವರು ಏನೆಲ್ಲಾ ಕೊಂಡೊಯ್ಯಬೇಕು? ಎಂಬುದರ ಬಗ್ಗೆ ನಟಿ ಸಂಗೀತಾ ಭಟ್‌ ಒಂದಿಷ್ಟು ವಿಷಯಗಳನ್ನು ವಿಶ್ವವಾಣಿ ನ್ಯೂಸ್‌ಗೆ ತಿಳಿಸಿದ್ದಾರೆ.

11

ವಿಶ್ವವಾಣಿ ನ್ಯೂಸ್‌: ಸ್ಟಾರ್‌ ಕಪಲ್‌ ಟ್ರಾವೆಲ್‌ ಎಂದಾಕ್ಷಣ ಎಲ್ಲರೂ ಅವರ ಫ್ಯಾಷೆನಬಲ್‌ ಉಡುಪುಗಳನ್ನು ಗಮನಿಸುತ್ತಾರೆ! ಸೋ, ನಿಮ್ಮ ಟ್ರಾವೆಲ್‌ ಫ್ಯಾಷನ್‌ ಹೇಗಿತ್ತು?

ಸಂಗೀತಾ ಭಟ್‌: ಫ್ಯಾಷನ್‌ ಎನ್ನುವುದಕ್ಕಿಂತ ಮೊದಲು ನಾವು ಬೆಚ್ಚಗಿಡುವ ಉಡುಪು, ವಾರ್ಮರ್ಸ್ ಹಾಗೂ ಜಾಕೆಟ್‌ಗಳಿಗೆ ಪ್ರಾಮುಖ್ಯತೆ ನೀಡಿದ್ದೆವು. ಅವನ್ನೇ ಆಕರ್ಷಕವಾಗಿ ಧರಿಸಿದ್ದೆವು.

12

ವಿಶ್ವವಾಣಿ ನ್ಯೂಸ್‌: ಹಾಲಿಡೇ ಟ್ರಾವೆಲ್‌ ಫ್ಯಾಷನ್‌ಗಾಗಿ ಶಾಪಿಂಗ್‌ ಮಾಡಿದ್ದೀರಾ?

ಸಂಗೀತಾ ಭಟ್‌: ನಾವಿಬ್ಬರೂ ಬ್ರ್ಯಾಂಡ್‌ ಫ್ರೀಕ್‌ಗಳಲ್ಲ. ಕಂಫರ್ಟಬಲ್‌ ಉಡುಗೆಗಳಿಗೆ ಆದ್ಯತೆ ನೀಡುತ್ತೇವೆ. ಟರ್ಕಿ –ಇಸ್ತಾನ್‌ಬುಲ್‌ಗೆ ಭೇಟಿ ನೀಡುವ ಮುನ್ನ, ಎಲ್ಲೆಂದರಲ್ಲಿ ಸುಲಭವಾಗಿ ಕ್ಯಾರಿ ಮಾಡಬಹುದಾದ ಡಿಕ್ಯಾತ್ಲಾನ್‌ನಲ್ಲಿ ದೊರೆಯುವ ಫೋಲ್ಡೆಡ್‌ ಜಾಕೆಟ್‌ಗಳನ್ನು ಖರೀದಿಸಿದೆವು. ಬೆಚ್ಚಗಿಡುವ ಲೇಯರ್‌ ಲುಕ್‌ಗೆ ಅಗತ್ಯವಿರುವುದನ್ನು ಕೊಂಡೆವು.

ವಿಶ್ವವಾಣಿ ನ್ಯೂಸ್‌: ನಿಮ್ಮ ರೊಮ್ಯಾಂಟಿಕ್‌ ಟ್ರಾವೆಲ್‌ ಬಗ್ಗೆ ಹೇಳಿ?

ಸಂಗೀತಾ ಭಟ್‌: ಅತ್ಯಂತ ಪುರಾತನ ಮಣ್ಣಿನ ನಗರವಾದ ಕಪಡೋಸಿಯಾದಲ್ಲಿ, ನಾನು ಹಾಗೂ ಸುದರ್ಶನ್‌ ಲೇಯರ್‌ ಲುಕ್‌ನಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದೆವು. ಹವಾಮಾನ ವೈಪರೀತ್ಯದಿಂದಾಗಿ ಏರ್‌ ಬಲೂನ್‌ ಟ್ರಾವೆಲ್‌ ರೈಡ್‌ ಮಾಡಲು ಸಾಧ್ಯವೇ ಆಗಲಿಲ್ಲ!

13

ವಿಶ್ವವಾಣಿ ನ್ಯೂಸ್‌: ಟರ್ಕಿ ಹಾಗೂ ಇಸ್ತಾನ್‌ಬುಲ್‌ಗೆ ಪ್ರಯಾಣಿಸುವ ಟ್ರಾವೆಲ್‌ ಪ್ರಿಯರಿಗೆ ನೀವು ಹೇಳುವುದೇನು?

ಸಂಗೀತಾ ಭಟ್‌: ಅತಿ ಶೀತ ರಾಷ್ಟ್ರಗಳಲ್ಲಿ ಆದಷ್ಟೂ ಫ್ಯಾಷನ್‌ಗಿಂತ ನಿಮ್ಮ ದೇಹದ ಉಷ್ಣಾಂಶ ಕಾಪಾಡಬಲ್ಲ ಹಾಗೂ ಬೆಚ್ಚಗಿಡುವ ಔಟ್‌ಫಿಟ್‌ಗಳನ್ನು ಧರಿಸಿ.

ಈ ಸುದ್ದಿಯನ್ನೂ ಓದಿ | Makeup Kit Awareness 2025: ಸೌಂದರ್ಯವರ್ಧಕಗಳ ಬಾಳಿಕೆಗೆ ಈ 5 ಟಿಪ್ಸ್ ಫಾಲೋ ಮಾಡಿ

ವಿಶ್ವವಾಣಿ ನ್ಯೂಸ್‌: ಶೀತ ರಾಷ್ಟ್ರಗಳಿಗೆ ತೆರಳುವಾಗ ಟ್ರಾವೆಲ್‌ ಪ್ರಿಯರು ಅವಶ್ಯಕವಾಗಿ ಕೊಂಡೊಯ್ಯಬೇಕಾದ್ದೇನು?

ಸಂಗೀತಾ ಭಟ್:

* ಆರಾಮವಾಗಿ ವಾಕ್‌ ಮಾಡಬಹುದಾದ ಫ್ಲಾಟ್‌ ಶೋ-ಫ್ಲೀಸ್‌ ಸಾಕ್ಸ್, ಗ್ಲೋವ್ಸ್.

* ಕುತ್ತಿಗೆ, ಪಾದ ಬೆಚ್ಚಗಿಡುವಂತಹ ಆಕ್ಸೆಸರೀಸ್‌ಗಳು.

* ಜತೆಯಲ್ಲಿ ಕ್ಯಾರಿ ಮಾಡಬಹುದಾದ ವಾರ್ಮರ್‌.

* ಲೇಯರ್‌ ಲುಕ್‌ಗೆ ಸಾಥ್‌ ನೀಡುವ ಉಡುಗೆಗಳು.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)