Winter Fashion 2025: ಚಳಿಗಾಲದ ಟಾಪ್ ಲಿಸ್ಟ್‌ಗೆ ಸೇರಿದ ಬ್ರೈಟ್ ಬಣ್ಣದ ಫ್ಯಾಷನ್‌ವೇರ್ಸ್!
ಈ ಬಾರಿಯ ಚಳಿಗಾಲದ ಸೀಸನ್ ಟಾಪ್‌ಲಿಸ್ಟ್‌ನಲ್ಲಿ ವಿಂಟರ್ ಬ್ರೈಟ್ ಕಲರ್‌ನ ಫ್ಯಾಷನ್ ಉಡುಪುಗಳು (Winter Fashion 2025) ಟ್ರೆಂಡಿಯಾಗಿವೆ. ಯಾವ್ಯಾವ ಶೈಲಿಯವು ಪ್ರಚಲಿತದಲ್ಲಿವೆ? ಈ ಕುರಿತಂತೆ ಇಲ್ಲಿದೆ ವಿವರ.
Vishwavani News
January 10, 2025
-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಚುಮು ಚುಮು ಚಳಿಯಲ್ಲಿ ಎದ್ದು ಕಾಣುವಂತಹ ಬ್ರೈಟ್ ಕಲರ್‌ನ ಫ್ಯಾಷನ್‌ವೇರ್‌ಗಳು (Winter Fashion 2025) ಫಂಕಿ ಫ್ಯಾಷನ್ ಪ್ರಿಯರನ್ನು ಆಕರ್ಷಿಸುತ್ತಿವೆ. ಹೌದು, ಕಣ್ಣಿಗೆ ಎದ್ದು ಕಾಣುವ ಬಣ್ಣ, ವಿನ್ಯಾಸದ ಉಡುಗೆಗಳು ಯುವಕ-ಯುವತಿಯರನ್ನು ಸೆಳೆದಿವೆ.
ಚಿತ್ರಗಳು: ಪಿಕ್ಸೆಲ್
ಟ್ರೆಂಡಿ ಫಂಕಿ ಬ್ರೈಟ್ಸ್
ನಿಯಾನ್, ಯೆಲ್ಲೋ, ಪಿಸ್ತಾ, ಎಲೆಕ್ಟ್ರಿಕ್ ಬ್ಲ್ಯೂ, ಸ್ಕಾರ್ಲೆಟ್, ಕೊಬಾಲ್ಟ್ ಬ್ಲೂ, ವೈನ್ ರೆಡ್, ಲೆಮೆನ್ ಯೆಲ್ಲೊ, ರೆಡಿಯಂಟ್ ಗ್ರೀನ್ ಹೀಗೆ ಲೆಕ್ಕವಿಲ್ಲದಷ್ಟು ಬ್ರೈಟ್ ವರ್ಣಗಳು ಈ ಬಾರಿಯ ವಿಂಟರ್ ಸೀಸನ್‌ನ ಫಂಕಿ ಫ್ಯಾಷನ್‌ಗೆ ಎಂಟ್ರಿ ನೀಡಿವೆ. ಇವು ನೋಡಲು ಯಂಗ್ ಲುಕ್ ನೀಡುತ್ತಿವೆ ಎನ್ನುತ್ತಾರೆ ಫ್ಯಾಷನಿಸ್ಟಾ ಜಾನ್.
ಯಂಗ್‌ಸ್ಟರ್ಸ್ ಚಾಯ್ಸ್
ಸ್ಟೈಲಿಸ್ಟ್ ರಿಯಾ ಪ್ರಕಾರ, ವಿಂಟರ್ ಬ್ರೈಟ್ಸ್ ಫ್ಯಾಷನ್ ಯಂಗ್‌ಸ್ಟರ್ಸ್ ಚಾಯ್ಸ್ ಆಗಿದೆ. ನೋಡಲು ಕಲರ್‌ಫುಲ್ ಆಗಿ, ಆಕರ್ಷಕವಾಗಿ ಬಿಂಬಿಸುತ್ತದೆ ಎನ್ನುತ್ತಾರೆ. ಇನ್ನು, ಹುಡುಗಿಯರು, ಹಾಟ್ ಪಿಂಕ್, ಟ್ರೂ ರೆಡ್, ರಾಯಲ್ ಬ್ಲ್ಯೂ, ಎಮರಾಲ್ಡ್ ಗ್ರೀನ್ ಶೇಡ್‌ಗಳತ್ತ ವಾಲಿದ್ದಾರೆ ಎನ್ನುವ ಅವರು, ಅವರವರ ಸ್ಕಿನ್ ಟೋನ್‌ಗೆ ತಕ್ಕಂತೆ ವರ್ಣಗಳನ್ನು ಸೆಲೆಕ್ಟ್ ಮಾಡುವುದು ಸೂಕ್ತ . ಇಲ್ಲವಾದಲ್ಲಿಅದು ಮ್ಯಾಚ್ ಆಗದೇ ನೋಡಲು ಅಭಾಸ ಉಂಟು ಮಾಡಬಹುದು ಎಂದು ಸಲಹೆ ನೀಡುತ್ತಾರೆ.
ಯಾರಿಗೆ ಯಾವುದು?
ಯಂಗ್ ಫ್ಯಾಷನಿಸ್ಟಾ ಕೌಶಲ್ ಪ್ರಕಾರ, ಹುಡುಗಿಯರಿಗಾದಲ್ಲಿ ಸ್ಟ್ರೈಟ್ ಲೈನ್ ಕಟ್ಸ್, ಮ್ಯಾಕ್ಸಿ ಸ್ಕರ್ಟ್ ಹಾಗೂ ವಿಂಟರ್ ಟೀ ಶರ್ಟ್ ಫಂಕಿ ವಿಂಟರ್ ಬ್ರೈಟ್ ಡ್ರೆಸ್ ಟ್ರೆಂಡ್ ಲಿಸ್ಟ್‌ನಲ್ಲಿವೆ.
ಸ್ಟೈಲಿಸ್ಟ್ ಜಿಯಾ ಹೇಳುವಂತೆ, ಬಗೆಬಗೆಯ ಬ್ರೈಟ್ ಬ್ಲ್ಯೂ, ಲೆಮೆನ್ ಯೆಲ್ಲೊ, ರೆಡಿಯಂಟ್ ಗ್ರೀನ್ ಟೀನೇಜ್ ಹುಡುಗಿಯರಿಗೆ ಆಕರ್ಷಕವಾಗಿ ಕಾಣಿಸುತ್ತವೆ. ಅದರಲ್ಲೂ ಲೈಟ್ ಪೀಚ್ ಹಾಗೂ ಬ್ಲಷ್ ಪಿಂಕ್ ಶೇಡ್‌ಗಳಂತೂ ಸೂಪರ್ಬ್ ಲುಕ್ ನೀಡುತ್ತವೆ. ಇನ್ನು, ಸಿಂಪಲ್ ಫ್ರಾಕ್‌ನಿಂದಿಡಿದು ಲೇಯರ್ ಲುಕ್ ನೀಡುವ ಕೋಟ್ ಹಾಗೂ ಜಾಕೆಟ್‌ಗಳಲ್ಲೂ ಇವು ಕಾಣಿಸಿಕೊಂಡಿವೆ ಎನ್ನುತ್ತಾರೆ ಮಾಡೆಲ್ ದೀಪ್ತಿ.
ಯುವಕರಾದಲ್ಲಿ ಹೀಗಿರಬೇಕು!
ಯುವಕರಾದಲ್ಲಿ ಆದಷ್ಟೂ ಲುಕ್‌ಗೆ ತಕ್ಕಂತೆ ಶೇಡ್ಸ್ ಆಯ್ಕೆ ಮಾಡಬೇಕು. ರಗ್ಡ್ ಲುಕ್‌ನಲ್ಲಿರುವವರಿಗಾದಲ್ಲಿಆದಷ್ಟೂ ಡಾರ್ಕ್ ಚಾಕೋಲೇಟ್‌ಗೆ ಹೊಂದುವಂತಹ ಲೈಟ್ ಸ್ಕಾರ್ಲೆಟ್, ಕೊಬಾಲ್ಟ್ ಬ್ಲ್ಯೂ ಹಾಗೂ ಲೈಟ್ ಬ್ಲಾಕ್ ಶೇಡ್ಸ್‌ನ ಔಟ್‌ಫಿಟ್‌ಗಳನ್ನು ಚೂಸ್ ಮಾಡಬೇಕು. ಸಾಫ್ಟ್ ಅಥವಾ ಚಾಕೋಲೇಟ್ ಫೇಸ್ಕಟ್ ಹೊಂದಿರುವ ಹುಡುಗರಾದಲ್ಲಿ, ಯಾವುದೇ ಬಣ್ಣವನ್ನು ಬೇಕಾದರೂ ಆಯ್ಕೆ ಮಾಡಬಹುದು. ಆದರೆ, ತಿಳಿ ವರ್ಣಗಳ ಆಯ್ಕೆ ಮಾಡುವಾಗ ಎಚ್ಚರವಹಿಸಬೇಕು, ಯಾಕೆಂದರೇ ಇವು ಫೆಮಿನೈನ್ ಲುಕ್ ನೀಡಬಹುದು ಎನ್ನುತ್ತಾರೆ ಫ್ಯಾಷನಿಸ್ಟಾಗಳು.
ಈ ಸುದ್ದಿಯನ್ನೂ ಓದಿ | Winter Mix Match Fashion 2025: ಬದಲಾಗಿದೆ 2025ರ ಚಳಿಗಾಲದ ಮಿಕ್ಸ್ ಮ್ಯಾಚ್ ಫ್ಯಾಷನ್
ಆಯ್ಕೆಗೆ ಸಿಂಪಲ್ ಟಿಪ್ಸ್
ಹುಡುಗರ ಲುಕ್‌ಗೆ ತಕ್ಕಂತೆ ಸೆಲೆಕ್ಷನ್ ಇರಲಿ.
ಹುಡುಗಿಯರ ಸ್ಕಿನ್‌ಟೋನ್‌ಗೆ ಮ್ಯಾಚ್ ಆಗುವಂತಿರಲಿ.
ಆಕ್ಸೆಸರೀಸ್ ಮ್ಯಾಚಿಂಗ್ ಸರಿಯಾಗಿರಬೇಕು.
(ಲೇಖಕಿ: ಫ್ಯಾಷನ್ ಪತ್ರಕರ್ತೆ)