ಬೀದರ್‌ನಲ್ಲಿ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಬಿಸಿ
ಬೀದರ್‌ನಲ್ಲಿ ಎಸಿಬಿ ದಾಳಿ: ಭ್ರಷ್ಟ ಅಧಿಕಾರಿಗಳಿಗೆ ಬಿಸಿ
Vishwavani News
June 17, 2022
ಬೀದರ್ :ಬೀದರ್‌ನಲ್ಲಿ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಎಸಿಬಿ ದಾಳಿ ಮಾಡಿ ಶಾಕ್ ನೀಡಿದೆ. ಜಿಲ್ಲೆಯಲ್ಲಿ ನಾಲ್ಕು ಕಡೆ ದಾಳಿ ಮಾಡಿ ಎಸಿಬಿ ಪೊಲೀಸರು ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪಶು ವೈದ್ಯಕೀಯ ಹಾಗೂ ಪಶು ಮೀನುಗಾರಿಕೆ ವಿಶ್ವವಿದ್ಯಾಲಯದ ಹಣಕಾಸು ವಿಭಾಗದ ಅಧಿಕಾರಿ ಮೃತ್ಯುಂಜಯ ಕಿರಣ ನಿವಾಸದ ಮೇಲೆ ಎಸಿಬಿ ಪೊಲೀ ಸರ ತಂಡದಿಂದ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಬೀದರ್‌ನ ಗುಮ್ಮೆ ಕಾಲೋನಿಯಲ್ಲಿರುವ ನಿವಾಸ, ಪಶು ವಿವಿಯ ಕಚೇರಿ, ಭಾಲ್ಕಿ ತಾಲೂಕಿನ ಹಾಲಹಳ್ಳಿಯ ನಿವಾಸ ಹಾಗೂ ಕಲಬುರಗಿಯ ಮಹಾ ಗಾಂವ್‌ನ ನಿವಾಸದ ಮೇಲೂ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಎಸಿಬಿ ಪೊಲೀಸರು ಏಕಕಾಲಕ್ಕೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಡಿಪಿಓ ಕಚೇರಿ ಹಾಗೂ ಕಲಬುರಗಿಯ ನಿವಾಸದ ಮೇಲೂ ಎಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.
ಎಸಿಬಿ ಎಸ್ಪಿ ಅಮರನಾಥ್ ರೆಡ್ಡಿ ಮಾರ್ಗದರ್ಶನದಲ್ಲಿ ಬೀದರ್ ಎಸಿಬಿ ಪೊಲೀಸ್ ಅಧಿಕಾರಿ ಹಣಮಂತರಾಯ, ಶ್ರೀಕಾಂತ್ ಸೇರಿದಂತೆ ಹಲವು ಅಧಿಕಾರಿಗಳ ತಂಡದಿಂದ ದಾಳಿ ನಡೆಸಿ ತನಿಖೆ ಮಾಡಲಾಗಿದೆ.