ಅಕ್ಷರ ಇರುವ ಕಡೆ ಅಹಿತಕರ ಘಟನೆಗಳು ಕಡಿಮೆ

ಅಕ್ಷರ ಇರುವ ಕಡೆ ಅಹಿತಕರ ಘಟನೆಗಳು ಕಡಿಮೆ

image-0560f8aa-2e37-4436-8c8b-ce000c4eed98.jpg
Profile Vishwavani News July 3, 2022
image-cd5bdf41-6452-4e72-93c1-d1f8511dd640.jpg ಗಡಿ ಭಾಗದ ಬೀದರ ಜಿಯಲ್ಲಿ ಪತ್ರಿಕೆ ಓದುಗರ ಸಂಖ್ಯೆ ೭೫,೦೦೦ಕ್ಕೂ ಅಧಿಕವಿರುವುದು ಹೆಮ್ಮೆಯ ವಿಷಯ: ವಿಶ್ವೇಶ್ವರ ಬೀದರ: ಅಕ್ಷರ ಇರುವ ಕಡೆ ಅಹಿತಕರ ಘಟನೆಗಳು ಕಡಿಮೆ. ಈ ಕಾರಣಕ್ಕಾಗಿ ಪುಸ್ತಕಗಳ ಓದು ಅವಶ್ಯಕ ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಹೇಳಿದರು. ನಗರದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ನಟ ರಮೇಶ್ ಅರವಿಂದ, ಪತ್ರಕರ್ತರಾದ ವಿಶೇಶ್ವರ ಭಟ್, ಜೋಗಿ, ಗಣೇಶ ಕಾಸರಗೋಡು, ಲೇಖಕ ಕು.ವೀರಭದ್ರಪ್ಪ, ರಂಗಸ್ವಾಮಿ ಮೂಕನಹಳ್ಳಿ ಸೇರಿದಂತೆ ಅನೇಕ ಸಾಹಿತಿಗಳ ಹತ್ತು ಪುಸ್ತಕಗಳ ಮರು ಬಿಡುಗಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಅಕ್ಷರ ದಿಂದ ಕುಗ್ರಾಮವೊಂದು ಸರ್ವತೋಮುಖ ಅಭಿವೃದ್ಧಿ ಕಂಡ ನಿದರ್ಶನ ನೀಡಿದರು. ಲೇಖಕನ ಹತ್ತು ಹಲವಾರು ವರ್ಷಗಳ ಪರಿಶ್ರಮ ಕೃತಿ ಯನ್ನು ಆವರಿಸಿರುತ್ತದೆ. ಹಾಗಾಗಿ ಪುಸ್ತಕಗಳಿಗೆ ಮಹತ್ವ ಹೆಚ್ಚು ಎಂದರು. ಬೀದರನಲ್ಲಿ ೧೯೯೯ ರಲ್ಲಿ ೨೦೦ ಪತ್ರಿಕೆಗಳ ಪ್ರಸರಣ ಇತ್ತು. ಪ್ರಸ್ತುತ ಬೀದರ ಜಿಲ್ಲೆಗೆ ಬರುವ ಪತ್ರಿಕೆಗಳ ಸಂಖ್ಯೆ ೭೫ ಸಾವಿರಕ್ಕೂ ಅಧಿಕ. ನಿಜಕ್ಕೂ ಇದು ಹೆಮ್ಮೆಯ ವಿಷಯ. ವಿಜಯ ಕರ್ನಾಟಕ ಪತ್ರಿಕೆಯನ್ನು ಆರಂಭ ಮಾಡುವ ಸಂದರ್ಭದಲ್ಲಿ ಬಳ್ಳಾರಿ ಮತ್ತು ಹುಬ್ಬಳಿಯ ಹೊಕ್ರಂಡಿಗೆ ತೆರಳಿದ್ದೆ. ಅಲ್ಲಿನ ಜನರು ಇಲ್ಲಿ ಪತ್ರಿಕೆಯನ್ನು ಯಾರೂ ಓದುವುದಿಲ್ಲ ಎಂದರು. ನಾನು ಆ ಊರಿಗೆ ಮೊದಲ ಬಾರಿಗೆ ೫ ಪತ್ರಿಕೆಗಳನ್ನು ಕಳುಹಿಸಿದೆ. ಅದೇ ರೀತಿ ಮರುದಿನ ೧೦ ಪತ್ರಿಕೆಗಳನ್ನು ಕಳುಹಿಸಿದೆ. ಹೀಗೆ ಪತ್ರಿಕೆಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಬಂದಿತು. ಇದಕ್ಕೆ ಕಾರಣ ಆ ಒಂದು ಊರಿನಲ್ಲಿ ಓದುಗರ ಸಂಖ್ಯೆಯೂ ಹೆಚ್ಚಾಗಿತ್ತು ಎಂದರು. ಜಗತ್ತಿನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಸಿಗುವಂತಹ ವಸ್ತುವೆಂದರೆ ಪತ್ರಿಕೆ. ಪತ್ರಿಕೆ ಓದುವ ಮೂಲಕ ಇಡೀ ಜಗತ್ತಿನ ವಿಷಯ ವನ್ನು ತಿಳಿದುಕೊಳ್ಳಬಹುದು. ಎಲ್ಲ ಸಾಹಿತಿಗಳು ಅವರ ಅನುಭವವೆಲ್ಲವನ್ನೂ ಪುಸ್ತಕದಲ್ಲಿ ಧಾರೆ ಎರೆಯುವುದು ಎಲ್ಲರೂ ಅವರ ಅನುಭವಗಳನ್ನು ಅರಿತುಕೊಳ್ಳಲಿ ಎನ್ನುವ ಕಾರಣಕ್ಕೆ. ಪುಸ್ತಕ ಓದಿನಿಂದ ಹೆಚ್ಚಾಗುತ್ತದೆ, ಎಲ್ಲರೂ ಓದುವುದನ್ನು ರೂಢಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು. ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ರಜನೀಶ ವಾಲಿ, ಕನ್ನಡ ಸಾಹಿತ್ಯ ಪರಿಷ್ಯತ್ತಿನ ಅಧ್ಯಕ್ಷರಾದ ಸುರೇಶ ಚೆನ್ನಶೆಟ್ಟಿ, ಜಿ ನೌಕರರ ಸಂಘದ ಅಧ್ಯಕ್ಷರಾದ ರಾಜೇಂದ್ರ ಗಂದಗೆ ಮತ್ತಿತ ರರು ಉಪಸ್ಥಿತರಿದ್ದರು. ಬೀದರನಲ್ಲಿ ಪ್ರಸಿದ್ಧ ಲೇಖಕರ ಹತ್ತು ಪುಸ್ತಕಗಳನ್ನು ಮರುಬಿಡುಗಡೆ ಮಾಡಲಾಯಿತು. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್, ಪತ್ರಕರ್ತರಾದ ಜೋಗಿ, ಲೇಖಕ ರಂಗಸ್ವಾಮಿ ಮೂಕನಹಳ್ಳಿ, ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್ ಮತ್ತಿತರರು ಇದ್ದರು. *** ಮೊಟ್ಟ ಮೊದಲ ಕಾಲ್‌ಸೆಂಟರ್ ವೀರಲೋಕ ಬುಕ್ ಪ್ರೈ.ಲಿಯ ಸಂಸ್ಥಾಪಕರಾದ ವೀರಕಪುತ್ರ ಶ್ರೀನಿವಾಸ ಮಾತನಾಡಿ, ಪುಸ್ತಕಗಳು ಒಳ್ಳೆಯ ಗೆಳೆಯ. ಕನ್ನಡದ ಪುಸ್ತಗಳಿಗಾಗಿ ಮೊಟ್ಟ ಮೊದಲು ಕಾಲ್ ಸೆಂಟರ್ ಆರಂಭಿಸಲಾಗಿದೆ. ಕಾಲ್ ಸೆಂಟರ್‌ ನಲ್ಲಿರುವವರು ಪ್ರತಿದಿನ ಕಾಲ್ ಮಾಡಿ ನೀವು ಕನ್ನಡವನ್ನು ಓದುತ್ತಿರಾ ಎಂದು ಪ್ರಶ್ನಿಸುತ್ತಾರೆ. ನಿಮಗೆ ಬೇಕಾದ ಯಾವುದೇ ಕನ್ನಡ ಪುಸ್ತಕಗಳ ಮಾಹಿತಿ ಬೇಕಾದಲ್ಲಿ ಹಲೋ ವೀರಲೋಕ 7022122121ಮೊಬೈಲ್ ಸಂಖ್ಯೆೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ