ಬಾಳೆಹೊನ್ನೂರಿನಲ್ಲಿ ಬಂದ್‌ಗೆ ಕರೆ
ಬಾಳೆಹೊನ್ನೂರಿನಲ್ಲಿ ಬಂದ್‌ಗೆ ಕರೆ
Vishwavani News
July 29, 2022
ಚಿಕ್ಕಮಗಳೂರು: ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ಎನ್ ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬಂದ್‌ಗೆ ಕರೆ ನೀಡಿದ್ದಾರೆ.
ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಗೆ ಮಲೆನಾಡಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಹಿಂದೂಪರ ಸಂಘಟನೆಗಳು ಬಾಳೆಹೊನ್ನೂರು ಪಟ್ಟಣ ಬಂದ್‌ಗೆ ಕರೆ ನೀಡಿದ್ದಾರೆ. ಪ್ರವೀಣ್ ಹತ್ಯೆ ಖಂಡಿಸಿ ಸೂಕ್ತ ನ್ಯಾಯಕ್ಕಾಗಿ ಆಗ್ರಹಿಸಿ, ಬಾಳೆ ಹೊನ್ನೂರಿ ನಲ್ಲಿ ಬೆಳಗ್ಗೆ ಪ್ರತಿಭಟನೆ ಮೆರವಣಿಗೆ ನಡೆಸಲು ಮುಂದಾಗಿದ್ದಾರೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಒಂದೆಡೆ ರಾಜೀನಾಮೆಗಳ ಪರ್ವ ಆಗುತ್ತಿದ್ದರೆ, ಮತ್ತೊಂದೆಡೆ ಪ್ರವೀಣ್ ಹತ್ಯೆ ಖಂಡಿಸಿ ನಗರದ ಹಲವೆಡೆ ಬಂದ್‌ಗೆ ಕರೆ ಕೊಡುತ್ತಿದ್ದಾರೆ. ಹೀಗೆ ನಗರದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಹದಗೆಡುತ್ತಿದ್ದು, ಸರ್ಕಾರದ ವಿರುದ್ಧ ಆಕ್ರೋಶಗಳು ಭುಗಿಲೇಳುತ್ತಿವೆ.
ರಾಜ್ಯದ ಹಲವೆಡೆ ಸರ್ಕಾರದ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಪ್ರವೀಣ್ ಹತ್ಯೆಗೈದವರ ವಿರುದ್ಧ ಕಠಿಣ ಶಿಕ್ಷೆ ವಿಧಿಸ ಬೇಕು ಅನ್ನುವ ಕೂಗು ಜೋರಾಗಿಯೇ ಕೇಳಿ ಬರುತ್ತಿವೆ.
ಪ್ರವೀಣ್ ಹತ್ಯೆ ಬೆನ್ನಲ್ಲೇ ಮಂಗಳೂರಿನ ಹೊರವಲಯದ ಸುರತ್ಕಲ್ ಬಳಿ ಫಾಜೀಲ್ ಎಂಬವನ ಹತ್ಯೆಯಾಗಿದ್ದು, ಅಲ್ಲಿನ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ಹೋಗಿದೆ. ಆದ್ದರಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಿಷೇಧಾಜ್ಞೆ ಹೊರಡಿಸಿ ಶನಿವಾರ ಬೆಳಗ್ಗೆವರೆಗೆ ಅಲ್ಲಿನ ಶಾಲಾ-ಕಾಲೇಜಿಗಳಿಗೆ ರಜೆ ಘೋಷಿಸಿದ್ದಾರೆ.