ಲಾರಿಗೆ ಬೈಕ್ ಡಿಕ್ಕಿ: ಹುಡಾ ಮಾಜಿ ಅಧ್ಯಕ್ಷರ ಪುತ್ರನ ಸಾವು
ಲಾರಿಗೆ ಬೈಕ್ ಡಿಕ್ಕಿ: ಹುಡಾ ಮಾಜಿ ಅಧ್ಯಕ್ಷರ ಪುತ್ರನ ಸಾವು
Vishwavani News
August 15, 2022
ಹುಬ್ಬಳ್ಳಿ: ತಾರಿಹಾಳ ಬೈಪಾಸ್ ಬಳಿ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ರಸ್ತೆ ಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾದ ಪರಿಣಾಮ ಹುಡಾ ಮಾಜಿ ಅಧ್ಯಕ್ಷ ನಾಗೇಶ್ ಕಲಬುರ್ಗಿ ಪುತ್ರ ಮೃತಪಟ್ಟಿದ್ದಾರೆ.
ತಿಲಕ್ ಕಲಬುರ್ಗಿ ಮೃತ ದುರ್ದೈವಿ. ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾದ ರಭಸಕ್ಕೆ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.