Police Firing: ಪೊಲೀಸರಿಂದ ಶೂಟೌಟ್, ಅಂತಾರಾಜ್ಯ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ
Police Firing: ಪೊಲೀಸರಿಂದ ಶೂಟೌಟ್, ಅಂತಾರಾಜ್ಯ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ ಬಂಧನ
ಹರೀಶ್ ಕೇರ
December 28, 2024
ಧಾರವಾಡ: ಮನೆಗೆ ನುಗ್ಗಿ ವೃದ್ಧ ದಂಪತಿಯನ್ನು ಥಳಿಸಿ ದರೋಡೆ (Robbery Case) ಮಾಡಿದ್ದ ಆಂಧ್ರಪ್ರದೇಶ ಮೂಲದ ಕುಖ್ಯಾತ ದರೋಡೆಕೋರನ ಕಾಲಿಗೆ ಗುಂಡು ಹಾರಿಸಿ (Police Firing) ಧಾರವಾಡದ (Dharwad news) ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ನವಲೂರ ಬಳಿಯ ಮನೆಯೊಂದರಲ್ಲಿ ದಂಪತಿಗಳನ್ನು ಕಟ್ಟಿ ಹಾಕಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ಮೇಲೆ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿ ಬಂಧಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಧಾರವಾಡ ಮಧ್ಯೆ ಇರುವ ರಾಯಾಪುರದ ಬಳಿ ನಡೆದಿದೆ.
ಆಂಧ್ರಪ್ರದೇಶ ಮೂಲದ ಕುಖ್ಯಾತ ದರೋಡೆಕೋರ ವೆಂಕಟೇಶ್ವರ ಎಂಬಾತನ ಮೇಲೆ ಪಿಎಸ್ಐ ಪ್ರಮೋದ್ ಗುಂಡು ಹಾರಿಸಿದ್ದಾರೆ. ಇದಕ್ಕೂ ಮೊದಲು ಪಿಎಸ್ಐ ಹಾಗೂ ಪೊಲೀಸ್ ಮೇಲೆ ವೆಂಕಟೇಶ್ವರ ಹಲ್ಲೆ ಯತ್ನ ನಡೆಸಿದ್ದ. 5 ರಾಜ್ಯಗಳಿಗೆ ಬೇಕಾಗಿದ್ದ ನಟೋರಿಯಸ್ ದರೋಡೆಕೋರನ ಮೇಲೆ 80ಕ್ಕೂ ಹೆಚ್ಚು ಕಳ್ಳತನ, ದರೋಡೆ ಪ್ರಕರಣದಾಖಲಾಗಿತ್ತು.
ಆಂಧ್ರಪ್ರದೇಶದ ಕರ್ನೋದನವನಾದ ಪಾಲಾ ವೆಂಕಟೇಶ್ ಕಳೆದ 6 ತಿಂಗಳ ಹಿಂದೆ ನವಲೂರು ಹೊರವಲಯದಲ್ಲಿ ದರೋಡೆ ಮಾಡಿದ್ದ. 5 ರಾಜ್ಯಗಳ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಪಾಲಾ ವೆಂಕಟೇಶ್, ಹುಬ್ಬಳ್ಳಿ ಧಾರವಾಡ ಪೋಲಿಸರಿಗೆ ಸಿಕ್ಕು ಬಿದ್ದಿದ್ದ. ಆತನನ್ನು ದರೋಡೆ ನಡೆದ ಸ್ಥಳಕ್ಕೆ ಕರೆತರುವ ವೇಳೆ ಪಾಲಾ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು ಪಾಲಾ ವೆಂಕಟೇಶ್ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ಹಾರಿಸಿದ ಗುಂಡು, ಪಾಲಾನ ಎರಡು ಕಾಲಿಗೆ ಹೊಕ್ಕಿವೆ. ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಚಿಕೆತ್ಸೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದು ಆರೋಗ್ಯ ವಿಚಾರಿಸಿದರು.
ಇದನ್ನು ಓದಿ: Police Firing: ವ್ಯಕ್ತಿಯನ್ನು ಬೆತ್ತಲಾಗಿಸಿ ಬೀದಿಯಲ್ಲಿ ಓಡಿಸಿದ ರೌಡಿ ಕಾಲಿಗೆ ಗುಂಡು