ತಾರಿಹಾಳ ಅಗ್ನಿ ದುರಂತ: ಮೃತರ ಸಂಖ್ಯೆ 4ಕ್ಕೆ ಏರಿಕೆ
ತಾರಿಹಾಳ ಅಗ್ನಿ ದುರಂತ: ಮೃತರ ಸಂಖ್ಯೆ 4ಕ್ಕೆ ಏರಿಕೆ
Vishwavani News
July 29, 2022
ಹುಬ್ಬಳ್ಳಿ: ತಾರಿಹಾಳ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿದೆ.
ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಬಿಡ್ನಾಳ ನಿವಾಸಿ ಮಲ್ಲಿಕ್ ರೆಹಾನ್ ಬಾವರಸಾಬ ಕೊಪ್ಪದ(19) ಮೃತಪಟ್ಟಿ ದ್ದಾರೆ.
ಹುಬ್ಬಳ್ಳಿ ಹೊರವಲಯದ ತಾರಿಹಾಳ ಕೈಗಾರಿಕೆ ವಸಾಹತು ಪ್ರದೇಶದಲ್ಲಿ ಐ.ಸಿ.ಫ್ಲೇಮ್ ಸ್ಫಾರ್ಕಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 8 ಮಂದಿ ಗಂಭೀರ ಗಾಯಗೊಂಡಿದ್ದರು. ಇವರಲ್ಲಿ ಮೂವರು ಕಾಮಿರ್ಕರು ಮರುದಿನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದರು. ಇದೀಗ ಮತ್ತೊಬ್ಬ ಮೃತಪಟ್ಟಿದ್ದು, ಸಾವಿನ ಸಂಖ್ಯೆ 4ಕ್ಕೆ ಏರಿದೆ.
ವಿಜಯಲಕ್ಷ್ಮೀ ಯಚ್ಚನಾಗರ, ಗೌರವ್ವ ಹಿರೇಮಠ, ಮಾಳೇಶ ಹದ್ದನ್ನವರ ಮತ್ತು ಮಲ್ಲಿಕ್‌ರೆಹಾನ್ ಬಾವರಸಾಬ ಕೊಪ್ಪದ ಮೃತರು. 15- 20 ದಿನಗಳ ಹಿಂದೆ ಅನಧಿಕೃತವಾಗಿ ಪ್ರಾರಂಭವಾಗಿದ್ದ ಐ.ಸಿ.ಫ್ಲೇಮ್ ಸ್ಫಾರ್ಕಲ್ ಫ್ಯಾಕ್ಟರಿಯಲ್ಲಿ 11 ಕಾಮಿರ್ಕರು ಕೆಲಸ ಮಾಡುತ್ತಿದ್ದರು.