2ಎ ಮೀಸಲಾತಿ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ: ವೀಣಾ
2ಎ ಮೀಸಲಾತಿ ಕಲ್ಪಿಸದಿದ್ದರೆ ಚುನಾವಣೆ ಬಹಿಷ್ಕಾರ: ವೀಣಾ
Vishwavani News
July 4, 2022
ಗದಗ: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸಬೇಕೆಂದು ಕಳೆದ ವರ್ಷ ಕೂಡಲಸಂಗಮ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ನಡೆಯುತ್ತ ಬಂದಿದೆ. ಬಿ ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಸಮುದಾಯಕ್ಕೆ 2ಎ ಮೀಸಲಾತಿ ಕಲ್ಪಿಸುವ ಭರವಸೆ ನೀಡಿದ್ದರು.
ಈಗ ಸಿಎಂ ಬೊಮ್ಮಾಯಿ ಆಗಸ್ಟ್ 22ರವರೆಗೆ ಸಮಯ ಪಡೆದಿದ್ದು, ಮೀಸಲಾತಿ ಕಲ್ಪಿಸ ದಿದ್ದರೆ ಮುಂಬರುವ ಚುನಾವಣೆಗಳನ್ನು ಪಂಚಮಸಾಲಿ ಸಮುದಾಯ ಬಹಿಷ್ಕರಿಸು ತ್ತದೆ ಎಂದು ಸಮಾಜದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕಾಶಪ್ಪನವರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಬೊಮ್ಮಾಯಿಯವರು ಕೂಡಾ ಮೂಗಿಗೆ ತುಪ್ಪ ವರಿಸಿ ದರು. ಆಗಸ್ಟ್ 22 ಸರ್ಕಾರಕ್ಕೆ ಅಂತಿಮ ಗಡುವು ನೀಡಲಾಗಿದೆ. ಮೀಸಲಾತಿ ನೀಡದಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಉಪಚುನಾವಣೆ ಹಾಗೂ ಪರಿಷತ್ ಚುನಾವಣೆ ಕೇವಲ ನಿದರ್ಶನ. ಮೀಸಲಾತಿ ಘೋಷಿ ಸದಿದ್ದರೆ ಮುಂದಿನ ದಿನಗಳಲ್ಲಿ ಬಿಸಿತುಪ್ಪವಾಗಿ ಸರ್ಕಾರಕ್ಕೆ ಪರಿಣಮಿಸಲಿದೆ. ಮಸ್ಕಿ ಹಾಗೂ ಬೆಳಗಾವಿ ಚುನಾವಣೆಯ ಫಲಿತಾಂಶ ನೋಡಿದ್ದೀರಿ.
ಚುನಾವಣೆಯಲ್ಲಿ ಮಹಿಳಾ ಮತದಾರರೂ ನಿರ್ಣಾಯಕ. ಮೀಸಲಾತಿಗಾಗಿ ಮಹಿಳಾ ಘಟಕ ಹೋರಾಟ ಮಾಡಿದೆ. ಚೆನ್ನಮ್ಮನ ಒನಕೆ ಪ್ರದರ್ಶನ ಮಾಡುವ ಮೂಲಕ ಮೀಸಲಾತಿ ಹೋರಾಟ ಮಾಡಲಾಗಿದೆ. ಸಿಎಮ್ ಮನೆ ಮುತ್ತಿಗೆ ಹಾಕಿ ಸರ್ಕಾರವನ್ನ ಎಚ್ಚರಿಸಲಾಗಿದೆ. ಮಹಿಳಾ ಘಟಕದಿಂದ ಮುಂದಿನ ಹೋರಾಟ ಮತ್ತಷ್ಟು ಉಗ್ರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೀಸಲಾತಿ ಕೊಡುತ್ತಾರೋ ಇಲ್ಲವೋ ಸ್ಪಷ್ಟಪಡಿಸಲಿ: ಹಾಲು ಮತ, ವಾಲ್ಮೀಕಿ ಸಮಾಜ ಸೇರಿದಂತೆ ಕೆಲ ಸಮಾಜಗಳು ಮೀಸ ಲಾತಿ ಕೇಳುತ್ತಿವೆ. ನಾವೂ ಮೀಸಲಾತಿ ಕೇಳಿದ್ದೇವೆ. ಮೀಸಲಾತಿ ವಿಷಯದಲ್ಲಿ ಸರ್ಕಾರ ಸ್ಪಷ್ಟ ಪಡಿಸಬೇಕು. ಮೂರು ತಿಂಗಳು, ಆರು ತಿಂಗಳು ಗಡುವು ತೆಗೆದುಕೊಂಡು ಸರ್ಕಾರ ಮೂಗಿಗೆ ತುಪ್ಪ ವರೆಸುವ ಕೆಲಸ ಮಾಡುತ್ತಿದೆ ಎಂದು ಗುಡುಗಿದರು.
ಶ್ರಾವಣ ಮಾಸದಿಂದ ಮಹಿಳಾ ಸಂಘಟನೆಗಾಗಿ ಉಡಿ ತುಂಬುವ ಕಾರ್ಯಕ್ರಮ: ಪಂಚಮಸಾಲಿ ಸಮುದಾಯದ ಒಕ್ಕೂಡಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ ಸಂಚರಿಸಿ ಉಡಿ ತುಂಬುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.. 32 ಜಿಲ್ಲೆಯಲ್ಲಿ ಸಂಚರಿಸಿ ಸಂಘಟನೆ ಮಾಡಲಿದ್ದೇವೆ. ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷರು ಕಾರ್ಯಕ್ರಮ ನಿರ್ವಹಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿ ಬ್ಯಾಂಕ್ ಸ್ಥಾಪಿಸುವ ಗುರಿ ಇದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸ್ವಾತಿ ಅಕಿ, ವೀರಮ್ಮ ತಾಳಿಕೋಟಿ, ಶಶಿಕಲಾ ಮಾಲಿಪಾಟೀಲ್, ಚೈತ್ರಾ ಉಪ್ಥಿತರಿದ್ದರು.