ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

G Parameshwara: ಜಿ. ಪರಮೇಶ್ವರ್‌ ಮುಂದಿನ ಸಿಎಂ: ಹಾಗಂದ ಗೊರವಯ್ಯ ಯಾರು?

"ತುಮಕೂರಿನ ಪರಮೇಶ್ವರನು, ಮುಂದೊಂದು ದಿನ ಈ ರಾಜ್ಯ ಪರಮೇಶ್ವರನು (G Parameshwara) ಆಗುವನು" ಎಂದು ಗೊರವಯ್ಯಗಳ ತಂಡ ನುಡಿಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್‌ ವಕ್ತಾರ ನಿತೀಶ್‌ ರಾಜ್‌ ಮೌರ್ಯ ಅವರೇ ಗೊರವಯ್ಯಗಳ ತಂಡದ ಜೊತೆ ಸೇರಿ ಈ ನುಡಿಯನ್ನು ಆಡಿದ್ದಾರೆ.

ಜಿ. ಪರಮೇಶ್ವರ್‌ ಮುಂದಿನ ಸಿಎಂ: ಹಾಗಂದ ಗೊರವಯ್ಯ ಯಾರು?

ಹರೀಶ್‌ ಕೇರ ಹರೀಶ್‌ ಕೇರ May 3, 2025 12:42 PM

ತುಮಕೂರು: ಗೃಹ ಸಚಿವ ಡಾ.ಜಿ ಪರಮೇಶ್ವರ್ (Home minister G Parameshwara) ರಾಜ್ಯದ ಮುಂದಿನ ಮುಖ್ಯಮಂತ್ರಿ (Chief minister) ಆಗೋದು ನಿಶ್ಚಿತ ಅಂತ ಗೊರವಯ್ಯ ಭವಿಷ್ಯ ನುಡಿದಿರುವ ಘಟನೆ ನಡೆದಿದೆ. ಗೃಹ ಸಚಿವರು ತುಮಕೂರು (Tumkur news) ನಗರದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ಗೊರವಯ್ಯಗಳ ತಂಡವೊಂದು ಆಗಮಿಸಿ, ನಿಮಗೆ ಸಿಎಂ ಆಗುವ ಯೋಗವಿದೆ ಎಂದು ಭವಿಷ್ಯ ಹೇಳಿದ ಘಟನೆ ನಡೆದಿದೆ.

"ತುಮಕೂರಿನ ಪರಮೇಶ್ವರನು, ಮುಂದೊಂದು ದಿನ ಈ ರಾಜ್ಯ ಪರಮೇಶ್ವರನು ಆಗುವನು" ಎಂದು ಗೊರವಯ್ಯಗಳ ತಂಡ ನುಡಿಯಿತು. ಈ ಸಂದರ್ಭದಲ್ಲಿ ಅಲ್ಲಿದ್ದ ಕಾಂಗ್ರೆಸ್‌ ವಕ್ತಾರ ನಿತೀಶ್‌ ರಾಜ್‌ ಮೌರ್ಯ ಅವರೇ ಗೊರವಯ್ಯಗಳ ತಂಡದ ಜೊತೆ ಸೇರಿ ಈ ನುಡಿಯನ್ನು ಆಡಿದ್ದಾರೆ. ಸ್ವತಃ ಗೃಹ ಸಚಿವ ಪರಮೇಶ್ವರ್‌ ಅವರು ಇದನ್ನು ಆಲಿಸಿ ಖುಷಿಪಟ್ಟರು. ರಾಜ್ಯದಲ್ಲಿ ಮೊದಲ ದಲಿತ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಬಗ್ಗೆ ಹಲವು ದಿನಗಳಿಂದ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್‌ನಲ್ಲಿ ಹಿರಿಯ ನಾಯಕನಾಗಿರುವ ಪರಮೇಶ್ವರ್ ಸಿಎಂ ಪಟ್ಟಕ್ಕೆ ಅರ್ಹರಾಗಿದ್ದಾರೆ ಎಂದು ಹಿಂದುಳಿದ ವರ್ಗಗಳ ಪ್ರತಿನಿಧಿಗಳು ಹೇಳುತ್ತಿದ್ದಾರೆ.

ಪಾಕಿಸ್ತಾನಕ್ಕೆ ಆತ್ಮಹತ್ಯಾ ಬಾಂಬ್‌ ಕಟ್ಟಿಕೊಂಡು ಹೋಗುವೆ: ಸಚಿವ ಜಮೀರ್‌ ಅಹಮದ್

ಬೆಂಗಳೂರು: ಪಹಲ್ಗಾಮ್ ಭಯೋತ್ಪಾದಕ ದಾಳಿಯ (Pahalgam terror attack) ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಿದ ಹಿನ್ನೆಲೆಯಲ್ಲಿ, ಕರ್ನಾಟಕದ ವಸತಿ ಮತ್ತು ಅಲ್ಪಸಂಖ್ಯಾತ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ( Karnataka Housing and Minorities Minister BZ Zameer Ahmed Khan) ಆತ್ಮಹತ್ಯಾ ಬಾಂಬ್ (Suicide Bomb) ಹಿಡಿದು ಪಾಕಿಸ್ತಾನಕ್ಕೆ ಹೋಗಲು ಸ್ವಯಂಸೇವಕರಾಗಿ ಮುಂದೆ ಬಂದಿ‌ದ್ದಾರೆ! "ನನಗೆ ಆತ್ಮಹತ್ಯಾ ಬಾಂಬ್‌ ಕೊಡಿ, ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಿ ದಾಳಿ ಮಾಡುವೆ" ಎಂದು ಹೇಳಿರುವ ಮಾತು ಇದೀಗ ವೈರಲ್‌ ಆಗುತ್ತಿದೆ. ಪತ್ರಿಕಾಗೋಷ್ಠಿಯೊಂದರಲ್ಲಿ ಪಹಲ್ಗಾಂ ದಾಳಿಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ ಅವರು ಆಡಿದ ಮಾತು ಇದೀಗ ವೈರಲ್‌ ಆಗಿದೆ.

ಪಾಕಿಸ್ತಾನ ಯಾವಾಗಲೂ ಭಾರತದ ಶತ್ರುವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅವಕಾಶ ನೀಡಿದರೆ ತಾನು ಯುದ್ಧಕ್ಕೆ ಹೋಗಲು ಸಿದ್ಧ ಎಂದು ಜಮೀರ್‌ ಹೇಳಿದ್ದಾರೆ. "ನಾವು ಭಾರತೀಯರು, ನಾವು ಹಿಂದೂಸ್ತಾನಿಗಳು. ಪಾಕಿಸ್ತಾನ ನಮ್ಮೊಂದಿಗೆ ಎಂದಿಗೂ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ. ಪಾಕಿಸ್ತಾನ ಯಾವಾಗಲೂ ನಮ್ಮ ಶತ್ರು. ಮೋದಿ, ಅಮಿತ್ ಶಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಿದರೆ, ನಾನು ಪಾಕಿಸ್ತಾನಕ್ಕೆ ಯುದ್ಧಕ್ಕೆ ಹೋಗಲು ಸಿದ್ಧ" ಎಂದು ಅವರು ಹೇಳಿದರು.

"ನಾನು ಯುದ್ಧಕ್ಕಾಗಿ ಪಾಕಿಸ್ತಾನಕ್ಕೆ ಹೋಗುತ್ತೇನೆ. ಮೋದಿ, ಶಾ ನನಗೆ ಆತ್ಮಹತ್ಯಾ ಬಾಂಬ್ ನೀಡಲಿ. ನಾನು ಅದನ್ನು ನನ್ನ ದೇಹಕ್ಕೆ ಕಟ್ಟಿಕೊಂಡು ಪಾಕಿಸ್ತಾನಕ್ಕೆ ಹೋಗಿ ಅವರ ಮೇಲೆ ದಾಳಿ ಮಾಡುತ್ತೇನೆ" ಎಂದು ಅವರು ಹೇಳಿದರು.

ಇದನ್ನೂ ಓದಿ: CM Siddaramaiah: ಚಾಮರಾಜನಗರಕ್ಕೆ 20 ಸಾರಿ ಬಂದು, ಎರಡು ಬಾರಿ ಸಿಎಂ ಆಗಿದ್ದೇನೆ: ಸಿಎಂ: ಸಿದ್ದರಾಮಯ್ಯ