New Year Guidelines: ಕಲಬುರಗಿ: ಹೊಸ ವರ್ಷಾಚರಣೆಗೆ ಮಾರ್ಗಸೂಚಿ ಹೊರಡಿಸಿದ ನಗರ ಪೊಲೀಸ್ ಆಯುಕ್ತರ ಕಚೇರಿ
ಹೆಚ್ಚುವರಿಯಾಗಿ 250ಕ್ಕೂ ಹೆಚ್ಚು ಜನ ಹೋಮ್ ಗಾರ್ಡ ಅಲ್ಲದೇ ಕೆ.ಎಸ್.ಆರ್.ಪಿ ಹಾಗೂ ಸಿ.ಎ.ಆರ್ ತುಕಡಿ ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆ ಹೊರಡಿಸಿದೆ
Ashok Nayak
December 31, 2024
ಕಲಬುರಗಿ: ನಗರದಲ್ಲಿ ನೂತನ ವರ್ಷಾಚರಣೆಗೆ ಸಂಬಂಧಿಸಿದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳ ಲಾಗಿದ್ದು, ಇಬ್ಬರು 02 ಡಿ.ಸಿ.ಪಿ, 07 ಎ.ಸಿ.ಪಿ, 18 ಪಿ.ಐ, 24 ಪಿ.ಎಸ್.ಐ ಸೇರಿದಂತೆ 500 ಜನ ಪೊಲೀಸರನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.
ಹೆಚ್ಚುವರಿಯಾಗಿ 250ಕ್ಕೂ ಹೆಚ್ಚು ಜನ ಹೋಮ್ ಗಾರ್ಡ ಅಲ್ಲದೇ ಕೆ.ಎಸ್.ಆರ್.ಪಿ ಹಾಗೂ ಸಿ.ಎ.ಆರ್ ತುಕಡಿ ಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿರುತ್ತದೆ ಎಂದು ನಗರ ಪೊಲೀಸ್ ಆಯುಕ್ತಾಲಯ ಪ್ರಕಟಣೆ ಹೊರಡಿಸಿದೆ. ಅದರಂತೆ ಹೊಸ ವರ್ಷಾಚರಣೆಗೆ ಸಾರ್ವಜನಿಕರಿಗೆ ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ.
_ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಈ ಕೆಳಕಂಡಂತೆ ಇವೆ.
ಕಲಬುರಗಿ ನಗರದ ವಿವಿಧ ಸ್ಥಳಗಳಲ್ಲಿ ನಾಕಾಬಂಧಿಗಳನ್ನು ಸ್ಥಾಪಿಸಲಾಗಿದ್ದು, ವಾಹನಗಳ ಸೂಕ್ತ ತಪಾಸಣೆ ಮಾಡಲಾಗುವುದು ಹಾಗೂ ಕುಡಿದು ವಾಹನ ಚಲಾಯಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಸಾರ್ವಜನಿಕರು ಹೊಸ ವರ್ಷಾಚರಣೆಗೆ ಸಂದರ್ಭದಲ್ಲಿ ಧ್ವನಿವರ್ದಕಗಳನ್ನು ನ್ಯಾಯಾಲಯದ ಆದೇಶಾನು ಸಾರ ನಿಗದಿತ ಡೆಸಿಬಲ್ ಮಿತಿಯಲ್ಲಿ ಬಳಸುವುದು ಹಾಗೂ ನಿಗದಿತ ಸಮಯದೊಳಗಡೆ ದ್ವನಿವರ್ದಕಗಳನ್ನು ಬಂದ್ ಮಾಡುವುದು.
ಬಾರ್ ಆಂಡ್ ರೆಸ್ಟೋರೆಂಟ್‌ಗಳು ಹಾಗೂ ವೈನ್ ಶಾಪಗಳು ನಿಗದಿತ ಅವಧಿಯೊಳಗಡೆ ಬಂದ್ ಮಾಡುವುದು.
ಆಯೋಜಕರು ಯಾವುದೇ ರೀತಿಯ ಅನುಮತಿ ಪಡೆಯದೆ ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದಲ್ಲಿ ಅಂತಹವರ ವಿರುದ್ದ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವುದು.
ಹೊಸ ವರ್ಷದ ಆಚರಣೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವನೆ ಅಥವಾ ಮಾದಕ ವಸ್ತುಗಳ ಸೇವನೆಯನ್ನು ಮಾಡುವಂತಿಲ್ಲ, ಮಾಡಿದ್ದಲ್ಲಿ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು.
ಹೊಸ ವರ್ಷದ ಆಚರಣೆ ನೆಪದಲ್ಲಿ ಕುಡಿದು ವಾಹನ ಚಾಲನೆ ಮಾಡುವುದು ಅಥವಾ ವೀಲಿಂಗ್ ಮಾಡು ವುದು ಕಂಡು ಬಂದಲ್ಲಿ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು.
ಹೊಸ ವರ್ಷದ ಆಚರಣೆ ವೇಳೆ ಮಹಿಳೆಯರ ಜೊತೆ ಅಸಭ್ಯವಾಗಿ ನಡೆದುಕೊಳ್ಳುವುದು, ಚುಡಾಯಿಸುವುದು, ಬ್ಯಾಗಿಂಗ್ ಮಾಡುವುದು ಕಂಡು ಬಂದರೆ ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು.
ಹೊಸ ವರ್ಷದ ಮಧ್ಯ ರಾತ್ರಿ ರಸ್ತೆಯ ಬದಿಯಲ್ಲಿ ಮೋಜು-ಮಸ್ತಿ ಮಾಡುವುದು, ಮಧ್ಯ ಸೇವನೆ ಮಾಡುವುದು ಅಥವಾ ಮಾದಕ ವಸ್ತುಗಳ ಸೇವನೆ ಮಾಡುವುದು ಕಂಡು ಬಂದರೆ ಅವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುತ್ತದೆ.
ನಿಮ್ಮ ಸಂಭ್ರಮಾಚರಣೆಯು ಯಾವುದೇ ಸಾರ್ವಜನಿಕರಿಗೆ ತೊಂದರೆಯನ್ನು ಉಂಟು ಮಾಡದ ರೀತಿಯಲ್ಲಿ ಆಚರಿಸುವುದು.
ತುರ್ತು ಪರಿಸ್ಥಿತಿಯಲ್ಲಿ ಸಹಾಯವಾಣಿ 112 ಗೆ ಕರೆ ಮಾಡಿ ಎಂದು ನಗರ ಪೊಲೀಸ್ ಆಯುಕ್ತಾಲಯ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: #KalaburagiBreaking