Karnataka Bandh: ಮರಾಠಿಗರ ದಬ್ಬಾಳಿಕೆಗೆ ಖಂಡನೆ; ಮಾ. 22ರಂದು ಕರ್ನಾಟಕ ಬಂದ್
ಬೆಳಗಾವಿ, ಮರಾಠಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ವಿವಿಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಮಾ. 3ರಂದು ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಹಾಗೂ ಮಾ. 22ರಂದು ಅಖಂಡ ಕರ್ನಾಟಕ ಬಂದ್ ಮಾಡುವುದಾಗಿ ಘೋಷಿಸಿದ್ದಾರೆ.

ವಾಟಾಳ್ ನಾಗರಾಜ್.

ಬೆಂಗಳೂರು: ಬೆಳಗಾವಿ, ಮರಾಠಿ ವಿಚಾರಕ್ಕೆ ಸಂಬಂಧಿಸಿದಂತೆ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ (Vatal Nagaraj) ಅವರು ವಿವಿಧ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಮಾ. 3ರಂದು ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಹಾಗೂ ಮಾ. 22ರಂದು ಅಖಂಡ ಕರ್ನಾಟಕ ಬಂದ್ (Karnataka Bandh) ಮಾಡುವುದಾಗಿ ಘೋಷಿಸಿದ್ದಾರೆ. ಆ ಮೂಲಕ ಕನ್ನಡಪರ ಹೋರಾಟಗಾರರು ರಾಜ್ಯದಲ್ಲಿ ನಡೆಯುತ್ತಿರುವ ಮರಾಠಿಗರ ದೌರ್ಜನ್ಯಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಲು ಮುಂದಾಗಿದ್ದಾರೆ. ಶುಕ್ರವಾರ (ಫೆ. 28) ಬೆಂಗಳೂರಿನಲ್ಲಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ನಡೆದ ಕನ್ನಡಪರ ಸಂಘಟನೆಗಳ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ.
ಮಾ. 7ರಂದು ಬೆಳಗಾವಿ ಚಲೋ
ಮಾ. 3ರಂದು ರಾಜಭವನಕ್ಕೆ ಮುತ್ತಿಗೆ, ಮಾ. 22ರಂದು ಅಖಂಡ ಕರ್ನಾಟಕ ಬಂದ್ ಮಾತ್ರವಲ್ಲದೆ ಮಾ. 7ರಂದು ಬೆಳಗಾವಿ ಚಲೋಗೆ ಕರೆ ನೀಡಲಾಗಿದೆ. ಇದಕ್ಕೆ ವಿವಿಧ ಕನ್ನಡಪರ ಸಂಘಟನೆಗಳು ಬೆಂಬಲ ಸೂಚಿಸಿವೆ. ಅಲ್ಲದೆ ಮಾ. 11ರಂದು ಮೇಕೆದಾಟು ಯೋಜನೆ ಆಗ್ರಹಿಸಿ ಅತ್ತಿಬೆಲೆ ತಮಿಳುನಾಡು ಗಡಿ ಬಂದ್, ಮಾ. 14ರಂದು ರಾಮನಗರ ಮಂಡ್ಯ ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ಮತ್ತು ಮಾ.17ರಂದು ಹೊಸಕೋಟೆ – ಚೆನ್ನೈ ಹೆದ್ದಾರಿ ಬಂದ್ ಮಾಡಲು ನಿರ್ಧರಿಸಲಾಗಿದೆ.
ಸಾರಾ ಗೋವಿಂದು, ಕರವೇ ಪ್ರವೀಣ್ ಶೆಟ್ಟಿ, ಕನ್ನಡ ಕುಮಾರ್, ಜಯ ಕರ್ನಾಟಕ ರಾಜ್ಯಾಧ್ಯಕ್ಷ ಜಗದೀಶ್, ಗಿರೀಶ್ ಗೌಡ, ರೂಪೇಶ್ ರಾಜಣ್ಣ ಸೇರಿ ಅನೇಕ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.
ಈ ಸುದ್ದಿಯನ್ನೂ ಓದಿ: ಮಹಾರಾಷ್ಟ್ರ ಪುಂಡರಿಂದ ಮತ್ತೆ ಮೊಂಡಾಟ; ಕರ್ನಾಟಕದ ಬಸ್, ಚಾಲಕನ ಮುಖಕ್ಕೆ ಕಪ್ಪು ಮಸಿ ಬಳಿದು ದರ್ಪ
ಮಿತಿ ಮೀರಿದ ಹಾವಳಿ
ಇತ್ತೀಚೆಗೆ ಕರ್ನಾಟಕದಲ್ಲಿ ಮರಾಠಿಗರು ವಿಸೇಷವಾಗಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದೆ. ಬೆಳಗಾವಿ ಸೇರಿದಂತೆ ವಿವಿಧ ಕಡೆಗಳಲ್ಲಿ ಕನ್ನಡಿಗರ ವಿರುದ್ಧ ದೌರ್ಜನ್ಯ ನಡೆಸುತ್ತಿದ್ದಾರೆ. ಇತ್ತೀಚೆಗೆ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ಚಾಲಕ, ನಿರ್ವಾಹಕರ ಮೇಲೆ ಮರಾಠಿಗಳು ಹಲ್ಲೆ ನಡೆಸಿದ್ದರು.
ಅಲ್ಲದೆ ಕರ್ನಾಟಕದ ಗಡಿ ಅಂಚಿನ ಮಹಾರಾಷ್ಟ್ರದ ಪುಣೆಯಲ್ಲಿ ಸ್ವಾರಗೇಟದ ಓವರ್ ಬ್ರೀಜ್ ದಾಟುವ ಸಂದರ್ಭದಲ್ಲಿ ಆಳಂದ-ಸೋಲಾಪೂರ-ಪುಣೆ ಬಸ್ ಹಾಗೂ ಚಾಲಕ ಮುಖಕ್ಕೆ ಮರಾಠಿ ಪುಂಡರು ಕಪ್ಪು ಮಸಿ ಬಳಿ ಉದ್ದಟತನ ಮೆರೆದಿದ್ದರು.
ಸ್ವಾರಗೇಟ ಬ್ರೀಜ್ ದಾಟುವಾಗ ಬಸ್ಸನ್ನು ನಿಲ್ಲಿಸಿ ಚಾಲಕನನ್ನು ಕೆಳಗೆ ಇಳಿಸಿದ್ದರು. ಬಸ್ಸಿಗೆ ಹಾಗೂ ಡ್ರೈವರ್ ಮುಖ ಮತ್ತು ಕೈಗೆ ಕಪ್ಪು ಮಸಿ ಬಳಿದು ಬಸ್ಸಿನ ಮೇಲೆ ಜೈ ಮಹಾರಾಷ್ಟ್ರ, ಜೈ ಮರಾಠಿ ಬರೆದಿದ್ದರು. ʼʼನೀವು (ಕರ್ನಾಟಕದವರು) ಮರಾಠಿಗಳನ್ನು ಕೆಣಕಬೇಡಿ. ನಾವು ಪುಂಡರು, ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ. ನಮ್ಮವರನ್ನು (ಮರಾಠಿಗರನ್ನು) ಕರ್ನಾಟಕದಲ್ಲಿ ಏನಾದರೂ ಮಾಡಿದರೆ ನಿಮಗೆ ಇಲ್ಲಿ ಬರಲು ಬಿಡುವುದಿಲ್ಲ. ನಿಮ್ಮ ಸರ್ಕಾರಕ್ಕೆ ಹೇಳಿ ಬೇಷರತ್ತಾಗಿ ಮರಾಠಿಗರ ಬಳಿ ಕ್ಷಮೆ ಕೇಳಿʼʼ ಎಂದು ಬಸ್ ಚಾಲಕ ಸಾದೀಕ ಮುಲಗೆ ಪಡಸಾವಳಿ ಅವರಿಗೆ ಧಮಕಿ ಹಾಕಿದ್ದರು. ಚಾಲಕ ಮತ್ತು ನಿರ್ವಾಹಕ ಸಮಯ ಪ್ರಜ್ಞೆ, ತಾಳ್ಮೆಯಿಂದ 40 ಜನ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆ ತಂದಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಕಾರಣಗಳಿಂದ ಕನ್ನಡಪರ ಹೋರಾಟಗಾರರು ತೀವ್ರ ಪ್ರತಿಭಟನೆಗೆ ಮುಂದಾಗಿದ್ದಾರೆ.