ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರ್ನಾಟಕ ಪಂಚಾಯತ್ ಐಕಾನ್ ಪುರಸ್ಕಾರಕ್ಕೆ ಗಂಗಾಧರ್ ಆಯ್ಕೆ

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಲ್ಲಿಸಿ ರುವ ಗಣನೀಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೊಡಮಾಡುವ ಕರ್ನಾಟಕ ಪಂಚಾಯತ್ ಐಕಾನ್ ಪ್ರಶಸ್ತಿಗೆ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ನಾಯಕ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಪಂಚಾಯತ್ ಐಕಾನ್ ಪುರಸ್ಕಾರಕ್ಕೆ ಗಂಗಾಧರ್ ಆಯ್ಕೆ

Profile Ashok Nayak Apr 24, 2025 9:32 AM

ಚಿಕ್ಕನಾಯಕನಹಳ್ಳಿ : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಸಲ್ಲಿಸಿ ರುವ ಗಣನೀಯ ಸೇವೆಯನ್ನು ಪರಿಗಣಿಸಿ ಕರ್ನಾಟಕ ಪ್ರೆಸ್ ಕ್ಲಬ್ ಕೊಡಮಾಡುವ ಕರ್ನಾಟಕ ಪಂಚಾಯತ್ ಐಕಾನ್ ಪ್ರಶಸ್ತಿಗೆ ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ್ ನಾಯಕ್ ಆಯ್ಕೆಯಾಗಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಡಾ. ಅರುಂಧತಿ, ಗೌರವಾನ್ವಿತ ನ್ಯಾಯಾಧೀಶರು ಪದ್ಮರಾಜ್ ನೇಮಿಚಂದ್ರ ದೇಸಾಯಿ, ವಿವಿಧ ಕ್ಷೇತ್ರಗಳ ಗಣ್ಯರು ಹಾಗು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಸಹಕಾರದಲ್ಲಿ ಏ.24 ರಂದು ಸಂಜೆ 3 ಗಂಟೆಗೆ ಬೆಂಗಳೂರಿನ ಸಂಪಗಿರಾಮನಗರ ನಯನ ಸಭಾಂಗಣದಲ್ಲಿ ವಿತರಣೆ ಮಾಡುವರು. ಶ್ರೀ ಕ್ಷೇತ್ರ ಪಾಲನಹಳ್ಳಿ ಮಠದ ಡಾ. ಸಿದ್ದರಾಜು ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸುವರು.

ಇದನ್ನೂ ಓದಿ: Tumkur (Chikkanayakahalli) News: ಮದ್ಯ ಅಕ್ರಮ ಮಾರಾಟಕ್ಕೆ ಅಬಕಾರಿ ಅಧಿಕಾರಿಗಳೇ ಸಾಥ್: ಮಹಿಳೆಯರ ಆರೋಪ

ಆಡಳಿತದಲ್ಲಿ ಜನರಿಗೆ ಒದಗಿಸಿರುವ ಮೂಲ ಸೌಕರ್ಯಗಳು ಹಾಗು ಸೇವೆಗಳ ಜೊತೆಗೆ ಉತ್ತಮ ಆಡಳಿತ ನೀಡುವುದನ್ನು ಸಹ ಆಯ್ಕೆಗೆ ಪರಿಗಣಿಸಲಾಗಿದ್ದು, ಜನರ ಗುಣಮಟ್ಟ ಸುಧಾರಣೆ, ಬೀದಿದೀಪಗಳ ನಿರ್ವಹಣೆ, ಸಂಪನ್ಮೂಲ ಕ್ರೋಢಿಕರಣ, ನೈರ್ಮಲ್ಯ, ಕುಡಿಯುವ ನೀರು, ಶೌಚಾ ಲಯ, ಕಾಮಾಗಾರಿಗಳ ಗುಣಮಟ್ಟ ಪರಿಶೀಲನೆ, ನಿರಂತರ ಗ್ರಾಮಸಭೆಗಳು, ವಾರ್ಡ್ಸಭೆಗಳಲ್ಲಿ ಫಲಾನುಭವಿಗಳ ಆಯ್ಕೆ, ನರೇಗ ಹಾಗು ಸೇವೆಗಳ ಬಳಕೆ ಮಾಡಿಕೊಳ್ಳಲು ನೀಡುತ್ತಿರುವ ಮಾರ್ಗದರ್ಶನ ಹಾಗು ಕೈಗೊಂಡಿರುವ ಕ್ರಮಗಳು ಸಹ ಪುರಸ್ಕಾರಕ್ಕೆ ಪರಿಗಣಿಸುವಲ್ಲಿ ಮಾರ್ಗ ಸೂಚಿಗಳಾಗಿದೆ.

ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ನೀಡಿ ಗೌರವಿಸಲಾಗುತ್ತಿದೆ ಎಂದು ಅಧ್ಯಕ್ಷ ಗಂಗಾಧರ್ ನಾಯಕ್ ಮಾಹಿತಿ ನೀಡಿದರು