Harshika Poonacha: ಹರ್ಷಿಕಾ- ಭುವನ್ ಮಗಳಿಗೆ ನಾಮಕರಣ ಸಂಭ್ರಮ, ಹೆಸರೇನು ಗೊತ್ತಾ?
ಅಕ್ಟೋಬರ್‌ನಲ್ಲಿ ಇವರಿಗೆ ಮಗಳು ಹುಟ್ಟಿದ್ದಳು. ಹರ್ಷಿಕಾ ಮತ್ತು ಭುವನ್ ಮಗಳ ನಾಮಕರಣದಲ್ಲಿ ಕುಟುಂಬ ಬಂಧುಗಳು, ಸಿನಿಮಾ ಕಲಾವಿದರು, ಸ್ನೇಹಿತರು ಭಾಗಿ ಆಗುತ್ತಿದ್ದಾರೆ. ಈ ಹೆಸರನ್ನು ಆರಿಸಿಕೊಂಡದ್ದು ಯಾಕೆ ಎಂದು ಹರ್ಷಿಕಾ (Harshika Poonacha) ಇನ್‌ಸ್ಟಗ್ರಾಂ ಅಕೌಂಟ್‌ನಲ್ಲಿ ವಿವರಿಸಿದ್ದಾರೆ.

ಮಗಳ ಜೊತೆ ಹರ್ಷಿಕಾ- ಭುವನ್ ದಂಪತಿ

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಹರ್ಷಿಕಾ ಪೂಣಚ್ಚ (Harshika Poonacha) ಹಾಗೂ ನಟ ಭುವನ್ (Bhuvan) ತಮ್ಮ ಮಗಳ ನಾಮಕರಣ ಸಂಭ್ರಮದಲ್ಲಿದ್ದು, ಮಗುವಿಗೆ ಸುಂದರ ಹೆಸರಿಟ್ಟಿದ್ದಾರೆ. ಮಗಳಿಗೆ ಇಟ್ಟಿರುವ ಹೆಸರು ಏನು ಎಂಬುದನ್ನು ಸೋಶಿಯಲ್ ಮೀಡಿಯಾ ಮೂಲಕವೇ ರಿವೀಲ್ ಮಾಡಿದ್ದಾರೆ. ವಿರಾಜಪೇಟೆಯಲ್ಲಿ (Virajpet) ನಾಮಕರಣ ಕಾರ್ಯಕ್ರಮ (Naming Ceremony) ನಡೆಯಲಿದ್ದು, ಈ ಸಂಭ್ರಮದಲ್ಲಿ ಸಿನಿಮಾರಂಗದ ಕೆಲವು ಕಲಾವಿದರು ಸಹ ಭಾಗಿ ಆಗಲಿದ್ದಾರೆ.
ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂಬ ಹೆಸರನ್ನು ಹರ್ಷಿಕಾ ಭುವನ್ ದಂಪತಿ ಆಯ್ಕೆ ಮಾಡಿದ್ದಾರೆ. ಪೊನ್ನಕ್ಕ ಎಂಬುದು ಟ್ರೆಡಿಷನಲ್ ಕೊಡವ ಹೆಸರು ಆಗಿದ್ದು, ತ್ರಿದೇವಿ ಮಾಡರ್ನ್ ಆಗಿದೆ. ಹೀಗೆ ಏಕಕಾಲಕ್ಕೆ ಹೆಸರು ಸಾಂಪ್ರದಾಯಿಕ ಹಾಗೂ ಕಂಟೆಂಪರರಿಯಾಗಿದೆ.
ಹರ್ಷಿಕಾ ಹಾಗೂ ಭುವನ್ ಮಗಳ ನಾಮಕರಣವನ್ನು ಅದ್ಧೂರಿಯಾಗಿ ಮೇ 3ರಂದು ವಿರಾಜಪೇಟೆಯಲ್ಲಿ ನೆರವೇರಿಸುತ್ತಿದ್ದಾರೆ. ನಾಮಕರಣದ ಕಾರ್ಯಕ್ರಮ ಪ್ಲಾನ್ ಮಾಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಇವರಿಗೆ ಮಗಳು ಹುಟ್ಟಿದ್ದಳು. ಹರ್ಷಿಕಾ ಮತ್ತು ಭುವನ್ ಮಗಳ ನಾಮಕರಣದಲ್ಲಿ ಕುಟುಂಬ ಬಂಧುಗಳು, ಸಿನಿಮಾ ಕಲಾವಿದರು, ಸ್ನೇಹಿತರು ಭಾಗಿ ಆಗುತ್ತಿದ್ದಾರೆ.
ಈ ಹೆಸರನ್ನು ಆರಿಸಿಕೊಂಡದ್ದು ಯಾಕೆ ಎಂದು ಹರ್ಷಿಕಾ ಇನ್‌ಸ್ಟಗ್ರಾಂ ಅಕೌಂಟ್‌ನಲ್ಲಿ ವಿವರಿಸಿದ್ದಾರೆ.
"ಇಂದು ಅವಳ ವಿಶೇಷ ದಿನ (ನಾಮಕರಣ ಸಮಾರಂಭ), ಆಕೆ ಜಗತ್ತಿಗೆ ಸೇವೆ ಸಲ್ಲಿಸುವ ಅತ್ಯುತ್ತಮ ಮನುಷ್ಯಳಾಗಲು ಅವಳಿಗೆ ನಿಮ್ಮೆಲ್ಲರ ಶುಭಾಶಯಗಳು ಮತ್ತು ಆಶೀರ್ವಾದಗಳು ಬೇಕು.
ಈ ಹೆಸರನ್ನು ಏಕೆ ಆರಿಸಿಕೊಂಡೆವು ಎಂದು ನೀವು ನಮ್ಮನ್ನು ಕೇಳಿದರೆ ವಿವರಣೆ ಇಲ್ಲಿದೆ. ಹಿಂದೂ ಧರ್ಮದಲ್ಲಿ, "ತ್ರಿದೇವಿ" ಎಂದರೆ ಮೂರು ಪ್ರಮುಖ ದೇವತೆಗಳಾದ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಅವರನ್ನು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರೆಂದು ಪರಿಗಣಿಸಲಾಗುತ್ತದೆ ಮತ್ತು ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತಾರೆ.
ತ್ರಿದೇವಿ = "ತ್ರಿ" ಏಕೆಂದರೆ ಅವಳು ತನ್ನ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ಆಕೆಯ ಅದೃಷ್ಟ ಸಂಖ್ಯೆ 3. "ದೇವಿ" ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು. ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಬಂದಿದ್ದಾಳೆ.
ಪೊನ್ನಕ್ಕ = ಇದು ಅವರ ಪೋಷಕರಿಬ್ಬರ ಹೆಸರುಗಳ ಸಂಯೋಜನೆಯಾಗಿದೆ. ಪೊನ್ನಣ್ಣ + ಹರ್ಷಿಕಾ = "ಪೊನ್ನಕ್ಕ". ನೀವು ಎಲ್ಲಿದ್ದರೂ ನಮ್ಮ ಪುಟ್ಟ ಮಗುವನ್ನು ಆಶೀರ್ವದಿಸಿ"
ಇದನ್ನೂ ಓದಿ: Chi Saujanya Movie: ‘ಚಿ: ಸೌಜನ್ಯ’ ಚಿತ್ರದ ಮೂಲಕ ನಿರ್ದೇಶನದತ್ತ ನಟಿ ಹರ್ಷಿಕಾ ಪೂಣಚ್ಚ