ಭಜನಾ ಪದಗಳು ಮಾನಸಿಕ ನೆಮ್ಮದಿಗೆ ರಹದಾರಿ
ಭಜನಾ ಪದಗಳು ಮಾನಸಿಕ ನೆಮ್ಮದಿಗೆ ರಹದಾರಿ
Vishwavani News
August 31, 2022
ಕೋಲಾರ: ಭಕ್ತಿಯ ಪರಿಭಾಷೆಯನ್ನು ಪ್ರಚುರ ಪಡಿಸುವ ಭಜನಾ ಪದಗಳು ಮಾನಸಿಕ ನೆಮ್ಮದಿಗೆ ರಹದಾರಿಯಾಗಿವೆ ಎಂದು ಯುವಮುಖಂಡ ಮಲ್ಲಿ ಕಾರ್ಜುನ ಬೆಳ್ಳುಬ್ಬಿ ಹೇಳಿದರು.
ಕೊಲ್ಹಾರ ಪಟ್ಟಣದ ದ್ಯಾಮವ್ವ ದೇವಿ ದೇವಸ್ಥಾನದ ವತಿಯಿಂದ ಹಮ್ಮಿ ಕೊಂಡಿದ್ದ ವಿಜಯಪುರ ಬಾಗಲಕೋಟೆ ಅವಳಿ ಜಿಲ್ಲೆಯ ಭಜನ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದ್ಯಾಮವ್ವ ದೇವಿ ದೇವಸ್ಥಾನದಲ್ಲಿ ಸುಮಾರು 50 ವರ್ಷಗಳಿಂದ ಶ್ರಾವಣ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳಕಾಲ ಭಜನೆ ಕೀರ್ತನೆ ಮಾಡುವ ಮೂಲಕ ಭಕ್ತಿಯನ್ನು ರಸವನ್ನು ಹರಡಲಾಗುತ್ತಿದೆ ಇದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರಾವಣ ಮಾಸದಲ್ಲಿ ಭಜನೆ ಪ್ರಾರಂಭಿಸಿದ ಮಹನೀಯ ರನ್ನು ಸನ್ಮಾನಿಸಲಾಯಿತು. ಚಿನ್ನಪ್ಪ ಗಿಡ್ಡಪ್ಪ ಗೋಳ, ಬಿ.ಎಸ್ ಹಂಗರಗಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಶೀಲವಂತ ಹಿರೇಮಠದ ಕೈಲಾಸ ನಾಥ ದೇವರು ಆಶಿರ್ವಚನ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಮುಖಂಡರಾದ ಶಂಕ್ರೆಪ್ಪ ದೇಸಾಯಿ, ಪ.ಪಂ ಮಾಜಿ ಅಧ್ಯಕ್ಷ ಕಲ್ಲಪ್ಪ ಸೊನ್ನದ, ಇಸ್ಮಾಯಿಲ್ ತಹಶಿಲ್ದಾರ, ಪಿ.ಕೆ ಗಿರಗಾಂವಿ, ಪ.ಪಂ ಸದಸ್ಯರಾದ ಬಾಬು ಬಜಂತ್ರಿ, ಅಪ್ಪಾಸಿ ಮಟ್ಯಾಳ, ರಾಜಶೇಖರ್ ಶೀಲವಂತ, ಈರಯ್ಯ ಮಠಪತಿ ಇತರರು ಇದ್ದರು.