ಶಾಸಕರಿಂದ ಬ್ಲ್ಯಾಕ್ ಮೇಲ್ ತಂತ್ರ: ಮಲ್ಲಿಕಾರ್ಜುನ ಬೆಳ್ಳುಬ್ಬಿ
ಶಾಸಕರಿಂದ ಬ್ಲ್ಯಾಕ್ ಮೇಲ್ ತಂತ್ರ: ಮಲ್ಲಿಕಾರ್ಜುನ ಬೆಳ್ಳುಬ್ಬಿ
Vishwavani News
August 31, 2022
ಕೋಲಾರ: ಶಾಸಕ ಶಿವಾನಂದ ಪಾಟೀಲರು ನಮ್ಮ ಕುಟುಂಬದ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಾ ಬ್ಲಾಕ್ ಮೇಲ್ ತಂತ್ರ ಮಾಡುತ್ತಿರುವುದು ಮತ್ತು ನಮ್ಮ ಬಗ್ಗೆ ಎಲ್ಲೆಡೆ ಇಲ್ಲಸಲ್ಲದ ಅಪಪ್ರಚಾರಗಳನ್ನು ಮಾಡುತ್ತಿರುವುದು ಸರಿಯಲ್ಲ. ಹೀಗೆ ಮುಂದುವರೆದರೆ ಶಾಸಕರ ಎಲ್ಲಾ ಅಕ್ರಮ, ಹಗರಣಗಳನ್ನು ಜನರ ಮುಂದೆ ಬಿಚ್ಚಿಡಲಾಗುವುದು ಎಂದು ಬಿಜೆಪಿ ಯುವ ಮುಖಂಡ ಮಲ್ಲಿಕಾರ್ಜುನ ಬೆಳ್ಳುಬ್ಬಿ ಶಾಸಕರ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೊಲ್ಹಾರ ಪಟ್ಟಣದಲ್ಲಿ ದ್ಯಾಮವ್ವ ದೇವಿ ದೇವಸ್ಥಾನದ ವತಿಯಿಂದ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿದ ಅವರು ಶಾಸಕ ಶಿವಾನಂದ ಪಾಟೀಲರು ನಮ್ಮ ಕುಟುಂಬದ ಮೇಲೆ ಪದೆ ಪದೆ ಆಧಾರ ರಹಿತ ಆರೋಪ ಮಾಡುತ್ತಿದ್ದು ಇದು ಸಲ್ಲ, ಶಾಸಕರು ಸಾಕ್ಷಾಧಾರಗಳಿಲ್ಲದೆ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರೆ.
೫೦ ಕೋಟಿ ಅನುದಾನ ತಂದಿದ್ದಿನಿ ಬೆಳ್ಳುಬ್ಬಿ ಅವರು ಪತ್ರ ಬರೆಯುವ ಮೂಲಕ ಅನುದಾನ ತಡೆಹಿಡಿದಿದ್ದಾರೆ ಎಂದು ಸಖಾಸುಮ್ಮನೆ ನಮ್ಮ ತಂದೆಯವರ ಮೇಲೆ ಆರೋಪ ಮಾಡುತ್ತಿದ್ದಿರಿ, ನಿಮ್ಮ ಹಿಂಬಾಲಕರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಬೆಳ್ಳುಬ್ಬಿ ಅವರು ಬರೆದ ಪತ್ರವನ್ನು ಹರಿಯಬಿಟ್ಟಿದ್ದರಿ, ನೀವು ಶಾಸಕರಿದ್ದಿರಿ ಸರಿಯಾಗಿ ಗಮನಸಿ ಆ ಪತ್ರವನ್ನ ಕೊಲ್ಹಾರ ಪಟ್ಟಣದ ಅಭಿವೃದ್ಧಿಗಾಗಿ ಎಲ್ಲಾ ವಾರ್ಡುಗಳಿಗೆ ಸಮನಾಗಿ ಅನುದಾನ ಹಂಚಿಕೆ ಮಾಡಿ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಸಮನಾಗಿ ಹಂಚಿಕೆ ಮಾಡಿ ಅಂತ ಪತ್ರ ಬರೆದರೆ ತಡೆಹಿಡಿಯಿರಿ ಅಂತ ಹೇಗಾಗುತ್ತದೆ ಎಂದು ಪ್ರಶ್ನಿಸಿದರು?.
ಸಂತ್ರಸ್ತರ ಬದುಕಿನ ಜೊತೆ ಚಲ್ಲಾಟ: ನಿವೇಶನಗಳಲ್ಲಿ ಅಕ್ರಮವೆಸಗಿದ್ದಾರೆ ಎಂದು ನೀವು ಸಂತ್ರಸ್ತರನ್ನು ವಿಧಾನಸಭೆ ಯವರೆಗೆ ಎಳೆದು 1117 ಜನರ ಮೇಲೆ ಪ್ರಕರಣ ದಾಖಿಸಿದ್ದಿರಿ ನಿಮಗೆ ಮತ ನೀಡಿರುವ ಜನರಿಗೆ ನೀವು ಸರಿಯಾದ ಪಾಠ ಕಲಿಸಿದ್ದಿರಿ ಎಂದು ವ್ಯಂಗವಾಡಿದರು.
ನಿಮ್ಮ ಅಕ್ಕಪಕ್ಕದವರು, ನಿಮ್ಮ ಜೊತೆಗಿರುವವರು, ನಿಮ್ಮ ಹಿಬಾಲಕರೇ ಅಕ್ರಮ ಎಸಗಿದ್ದು ಇದು ಮೊದಲು ಗಮನದಲ್ಲಿಟ್ಟು ಕೊಳ್ಳಿ. ನೀವು ಶಾಸಕರಿದ್ದಿರಿ ತನಿಖೆ ಮಾಡಿಸಿ ಸತ್ಯಾಸತ್ಯತೆ ಹೊರಬೀಳುತ್ತದೆ ಅದು ಬಿಟ್ಟು ಬೆಳ್ಳುಬ್ಬಿ ಅವರ ಮೇಲೆ ನಿರಾಧಾರ ಆರೋಪ ಮಾಡಿದಲ್ಲಿ ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಆಕ್ರೋಶ ಹೊರಹಾಕಿದರು.
ಮುಳುಗಡೆ ಸಂತ್ರಸ್ತರ ನೋವು ನಿಮಗೆ ಅರ್ಥವಾಗುತ್ತಿಲ್ಲ, ನಾವು ಸಂತ್ರಸ್ತರಿದ್ದಿವಿ ಮನೆ ಮಠ ಕಳೆದುಕೊಂಡಿದ್ದೆವೆ ಆ ನೋವು ನಮಗಿದೆ ಹೊರತು ನಿಮಗಲ್ಲ, ಸಂತ್ರಸ್ತರ ವಿಷಯಕ್ಕೆ ಬಂದಲ್ಲಿ ನಾವು ಸುಮ್ಮನಿರಲಾರೆವು ಎಂದು ಶಾಸಕರ ವಿರುದ್ಧ ಗುಡುಗಿದರು.