Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್
Murder Case: ಪ್ರೇಯಸಿಯ ಮನೆಗೆ ಹೋಗಿ ಹಿಂದಿರುಗುವಾಗ ಯುವಕನ ಮೇಲೆ ದಾಳಿ ನಡೆಸಲಾಗಿದ್ದು, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಯುವಕ ಸಾವನ್ನಪ್ಪಿದ್ದಾನೆ.
Prabhakara R
January 5, 2025
ಕೋಲಾರ: ನಗರದಲ್ಲಿ ಯುವಕನೊಬ್ಬನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ (Murder Case) ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಗಲ್ ಪೇಟೆ ಠಾಣೆಯ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಪ್ರೇಯಸಿಯ ಮನೆಗೆ ಹೋಗಿ ಹಿಂದಿರುಗುವಾಗ ಯುವಕನ ಮೇಲೆ ದಾಳಿ ನಡೆಸಲಾಗಿದ್ದು, ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಉಸ್ಮಾನ್ (28) ಎನ್ನುವ ಯುವಕ ಸಾವನ್ನಪ್ಪಿದ್ದಾನೆ. ಪ್ರಕರಣದಲ್ಲಿ ಆಫ್ರೀದ್, ಜಮೀರ್, ನಜೀರ್ ಹಾಗೂ ಸಲ್ಮಾನ್ ಪಾಷ ಎಂಬುವವರನ್ನು ಬಂಧಿಸಲಾಗಿದೆ.
ಕಳೆದ ರಾತ್ರಿ ಪ್ರಿಯತಮೆ ಮನೆಗೆ ತೆರಳಿದ್ದಾಗ ಕೋಲಾರದ ನೂರ್ ನಗರದಲ್ಲಿಯುವಕನನ್ನು ಅಟ್ಟಾಡಿಸಿ ಕೊಲೆ ಮಾಡಲಾಗಿತ್ತು. ಉಸ್ಮಾನ್ ಕಳೆದ 5 ವರ್ಷಗಳ ಹಿಂದೆ ಜಬೀನ್ ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಆಕೆಗೆ ಕಿಡ್ನಿ ವಿಫಲವಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರ ಆರೋಗ್ಯ ವಿಚಾರಿಸಲು ಬಂದಿದ್ದ ಜಬೀನಾ ಸಂಬಂಧಿ ಯುವತಿಯೊಂದಿಗೆ ಉಸ್ಮಾನ್‌ಗೆ ಪ್ರೀತಿಯಾಗಿತ್ತು. ಈ ವಿಷಯ ತಿಳಿದು ಆತನ ಪತ್ನಿ ಮಹಿಳಾ ಠಾಣೆಗೆ ದೂರು ನೀಡಿದ್ದಳು. ಬಳಿಕ ತನ್ನ ಪತಿಯಿಂದ ದೂರಾಗಿ ತವರು ಮನೆ ಸೇರಿದ್ದಳು ಎಂದು ತಿಳಿದು ಬಂದಿದೆ.
ಕೊಲೆಯಾದ ಉಸ್ಮಾನ್ ಕಳೆದ ರಾತ್ರಿ ತನ್ನ ಪ್ರೇಯಸಿಯ ಮನೆಗೆ ತೆರಳಿದ್ದ. ಅಲ್ಲದೇ ಆಕೆಯನ್ನು ಮದುವೆ ಮಾಡಿಕೊಡುವಂತೆ ಹೇಳಿದ. ಇದರಿಂದ ಆತ ವಾಪಸ್ ತೆರಳುತ್ತಿದ್ದಾಗ ಯುವತಿಯ ಕುಟುಂಬಸ್ಯರು ಹಾಗೂ ಸ್ಥಳೀಯರು, ಉಸ್ಮಾನ್ನನ್ನು ಏರಿಯಾದಲ್ಲಿ ಅಟ್ಟಾಡಿಸಿ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಈ ಸುದ್ದಿಯನ್ನೂ ಓದಿ | Viral News: ಗೆಳತಿಯನ್ನು ಮೆಚ್ಚಿಸಲು ಸಿಂಹದ ಪಂಜರ ಹೊಕ್ಕ ಭೂಪ! ಆಮೇಲೆ ನಡೆದಿದ್ದೇ ಬೇರೆ
ಕಟ್ಟಡದಿಂದ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ಸಾವು
ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಸೆಂಟ್ರಿಂಗ್‌ಗೆ ಬಳಸಿದ್ದ ಮರದ ತುಂಡು ಬಿದ್ದು 15 ವರ್ಷದ ಬಾಲಕಿ ಮೃತಪಟ್ಟಿರುವುದು (Girl Dies) ವಿವಿ ಪುರಂ ಮೆಟ್ರೋ ನಿಲ್ದಾಣದ ಬಳಿ ಶನಿವಾರ ನಡೆದಿದೆ. ತೇಜಸ್ವಿನಿ (15) ಮೃತ ಬಾಲಕಿ. ಶಾಲೆ ಮುಗಿದ ಬಳಿಕ ರಸ್ತೆ ಪಕ್ಕ ಬಾಲಕಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಕಟ್ಟಡದಿಂದ ಮರದ ತುಂಡು ಬಿದ್ದು ದುರ್ಘಟನೆ ಸಂಭವಿಸಿದೆ.
ಶನಿವಾರವಾಗಿದ್ದರಿಂದ ಮಧ್ಯಾಹ್ನ ಸ್ಕೂಲ್ ಮುಗಿಸಿದ ಬಳಿಕ ಡ್ಯಾನ್ಸ್ ಕ್ಲಾಸ್‌ಗೆ ಬಾಲಕಿ ಹೋಗಿದ್ದಳು. ಅಲ್ಲಿಂದ ಮನೆಗೆ ವಾಪಸ್ ಆಗುತ್ತಿದ್ದಾಗ ಕಟ್ಟಡದ ಮೇಲಿಂದ ರಭಸವಾಗಿ ಮರದ ತುಂಡು ಬಾಲಕಿ ಮೇಲೆ ಬಿದ್ದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಪ್ರಕರಣ ಸಂಬಂಧ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತೇಜಸ್ವಿನಿ ವಾಸವಿ ವಿದ್ಯಾನಿಕೇತನ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದಳು ಎಂದು ತಿಳಿದುಬಂದಿದೆ.