ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ೫ ಜನ ಸಾವು
ಭೀಕರ ರಸ್ತೆ ಅಪಘಾತ : ಒಂದೇ ಕುಟುಂಬದ ೫ ಜನ ಸಾವು
Vishwavani News
July 24, 2022
ಕೊಪ್ಪಳ : ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ ೫ ಜನ ಸಾವನ್ನಪ್ಪಿದ ಧಾರುಣ ಘಟನೆ ಕುಕನೂರು ತಾಲೂಕಿನ ಭಾನಾಪುರ ಬಳಿ ಸಂಭವಿಸಿದೆ.
ಸ್ಕಾರ್ಪಿಯೋ ವಾಹನಕ್ಕೆ ಯಾವುದೋ ಒಂದು ವಾಹನ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಕುಕನೂರು ತಾಲೂಕಿನ ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ ಸೇರಿ ಅವರ ಕುಟುಂಬದ ೫ ಜನ ಸಾವನ್ನಪ್ಪಿದ್ದಾರೆ.
ಬಿನ್ನಾಳ ಗ್ರಾಮದ ದೇವಪ್ಪ ಕೊಪ್ಪದ(೬೨), ಮೃತರ ಸೊಸೆ ಗಿರಿಜಮ್ಮ(೪೫), ಅಣ್ಣನ ಮಕ್ಕಳಾದ ಶಾಂತಮ್ಮ(೩೫), ಪಾರ್ವತಮ್ಮ(೩೨), ಸಂಬ0ಧಿ ಕಸ್ತೂರಮ್ಮ(೨೦) ಎಂದು ತಿಳಿದು ಬಂದಿದೆ.
ಚಾಲಕ ಹರ್ಷವರ್ಧನ, ಮಕ್ಕಳಾದ ಬಸವರಾಜ, ಪುಟ್ಟರಾಜ, ಭೂಮಿಕಾ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಮಕ್ಕಳು ಸೇರಿ ಒಟ್ಟು ೯ ಜನ ಪ್ರಯಾಣಿಸುತ್ತಿದ್ದ ವಾಹನಕ್ಕೆ ಇನ್ನೊಂದು ವಾಹನ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ.
ಕೊಪ್ಪಳದಲ್ಲಿ ಬರ್ತಡೇ ಪಾರ್ಟಿ ಮುಗಿಸಿಕೊಂಡು ಹೊರಟಿದ್ದ ಕುಟುಂಬ ಈ ಆಘಾತಕ್ಕೆ ಒಳಗಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಕನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.