ಸ್ವಾಮೀಜಿ ವಿರುದ್ಧ ಕೊಲೆ ಬೆದರಿಕೆ ಆರೋಪ: FIR ದಾಖಲು
ಸ್ವಾಮೀಜಿ ವಿರುದ್ಧ ಕೊಲೆ ಬೆದರಿಕೆ ಆರೋಪ: FIR ದಾಖಲು
Vishwavani News
May 26, 2022
ಕೊಪ್ಪಳ: ಜಿಲ್ಲೆಯ ಪ್ರಸಿದ್ಧ ಮಠಗಳಲ್ಲಿ ಒಂದಾದ ಕೊಟ್ಟೂರು ಮಠದ ಸ್ವಾಮೀಜಿ ವಿರುದ್ಧ, ಮಹಿಳೆಯೊಬ್ಬರಿಗೆ ಕೊಲೆ ಬೆದರಿಕೆ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ FIR ಕೂಡ ದಾಖಲಾಗಿದೆ.
ಕೊಟ್ಟೂರೇಶ್ವರ ಕಾಲೇಜಿನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಕಮಲಾಕ್ಷಿ ಎಂಬವರಿಗೆ, ಬಸವಲಿಂಗಮ್ಮ ಎಂಬಾಕೆ ನೀನು ಇಲ್ಲಿಗೆ ಯಾಕ್ ಬಂದೆ ಎಂಬುದಾಗಿ ನಿಂದಿಸಿದ್ದಾರೆ ಎನ್ನಲಾಗಿದೆ. ಸ್ವಾಮೀಜಿ ಬಳಿಯಲ್ಲಿ ಪಿಸ್ತೂಲ್ ಇದೆ. ನಿನ್ನ ಕೊಲೆ ಮಾಡಿಸುತ್ತೇನೆ ಎಂಬುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಈ ಹಿನ್ನಲೆಯಲ್ಲಿ ಕಮಲಾಕ್ಷಿ ಎಂಬವರು ಜಿಲ್ಲೆಯ ಗಂಗಾವತಿ ನಗರ ಪೊಲೀಸ್ ಠಾಣೆಗೆ ಕಲ್ಮಠದ ಕೊಟ್ಟೂರು ಸ್ವಾಮೀಜಿ ಹಾಗೂ ಬಸಲಿಂಗಮ್ಮ ವಿರುದ್ಧ ದೂರು ನೀಡಿದ್ದಾರೆ. ದೂರಿನಲ್ಲಿ ಬಸಲಿಂಗಮ್ಮ ಕೊಲೆ ಬೆದರಿಕೆ ಹಾಕಿದ್ದರೆ, ಕೊಟ್ಟೂರು ಸ್ವಾಮೀಜಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ತಿಳಿಸಿದ್ದಾರೆ.