Kannada Sahitya Sammelana: ರಾಮ, ಕೃಷ್ಣ, ದ್ರೌಪದಿ; ಪುರಾಣದ ಪಾತ್ರಗಳ ಮರುಶೋಧ

Kannada Sahitya Sammelana: ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನ ಸಮಾನಾಂತರ ವೇದಿಕೆಯಲ್ಲಿ "ಸಾಹಿತ್ಯ ಪಾತ್ರಗಳ ಮುಖಾಮುಖಿ" ಗೋಷ್ಠಿ ನಡೆಯಿತು.

Profile Prabhakara R December 21, 2024
ಮಂಡ್ಯ: ಪುರಾಣದ ಪಾತ್ರಗಳನ್ನು ಪ್ರತ್ಯೇಕವಾಗಿ ನೋಡುವ ಗುಣ ಇತ್ತೀಚೆಗೆ ನಮ್ಮಲ್ಲಿ ರೂಢಿಯಾಗಿದೆ. ಅವುಗಳನ್ನು ಹಾಗೇ ನೋಡಬೇಕಿಲ್ಲ. ಪುರಾಣಗಳನ್ನು ಸಮಗ್ರವಾಗಿ ನಮ್ಮಲ್ಲಿ ಮೊದಲು ಗಮನಿಸಲಾಗುತ್ತಿತ್ತು. ಪಾತ್ರಗಳನ್ನು ಪ್ರತ್ಯೇಕೀಕರಿಸುವ ಗುಣದಿಂದಾಗಿ ಸಮಗ್ರತೆಯ ಅವಗಣನೆ ಆಗುವ ಸಂಭವವಿದೆ ಎಂದು ವಿದ್ವಾಂಸ ಪಾದೇಕಲ್ಲು ವಿಷ್ಣು ಭಟ್ಟ ನುಡಿದರು. ಅವರು ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಎರಡನೇ ದಿನ ಸಮಾನಾಂತರ ವೇದಿಕೆಯಲ್ಲಿ ನಡೆದ "ಸಾಹಿತ್ಯ ಪಾತ್ರಗಳ ಮುಖಾಮುಖಿ" ಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾಗಚಂದ್ರನ ರಾಮಚಂದ್ರ ಚರಿತ ಪುರಾಣದ ರಾಮ ಹಾಗೂ ಕುವೆಂಪು ಅವರು ಶ್ರೀ ರಾಮಾಯಣ ದರ್ಶನಂದಲ್ಲಿ ಕಂಡರಿಸಿದ ರಾಮ ಇಬ್ಬರೂ ವಾಲ್ಮೀಕಿಯ ರಾಮನಿಗಿಂತ ಭಿನ್ನವಾದವರು. ಒಬ್ಬ ಆಧುನಿಕಪೂರ್ವ ರಾಮನನ್ನು ಹಾಗೂ ಇನ್ನೊಬ್ಬರು ಆಧುನಿಕ ರಾಮನನ್ನು ಚಿತ್ರಿಸಿದರು. ನಾಗಚಂದ್ರನಲ್ಲಿ ರಾಮ ಪೂರ್ಣ ಅಹಿಂಸಾವಾದಿಯಾಗಿದ್ದಾನೆ. ನಾಗಚಂದ್ರನ ಕಾವ್ಯದಲ್ಲಿ ಶುದ್ಧ ಲೌಕಿಕದ ಗುಣ ಇದೆ. ಮನುಷ್ಯ ತನ್ನ ಔನ್ನತ್ಯವನ್ನು ತಾನೇ ಸಾಧಿಸಬೇಕು ಎಂಬ ತಾತ್ವಿಕತೆ ಆತನಲ್ಲಿದೆ. ರಾಮನನ್ನು ಇಲ್ಲಿ ಉದಾತ್ತೀಕರಿಸಲಾಗಿದೆ. ಆತನು ಲೌಕಿಕವನ್ನು ತ್ಯಜಿಸಿದ ರಾಮ. ಹೀಗಾಗಿ ಆತನಿಂದ ಮಾಡಲಾಗದ ಹಿಂಸೆಯ ಕೃತ್ಯಗಳನ್ನು ಲಕ್ಷ್ಮಣನಿಂದ ಮಾಡಿಸಲಾಗಿದೆ ಎಂದು "ನಾಗಚಂದ್ರನ ಶ್ರೀರಾಮ- ಕುವೆಂಪು ಶ್ರೀರಾಮ" ಕುರಿತು ವಿಮರ್ಶಕ ಬಸವರಾಜ ಕಲ್ಗುಡಿ ನುಡಿದರು. ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತಿಗಳು ರಾಜಕಾರಣವನ್ನು ಅಸ್ಪೃಶ್ಯತೆಯಿಂದ ಕಾಣುತ್ತಿರುವುದು ದುರ್ದೈವ: ಎಚ್.ಕೆ.ಪಾಟೀಲ್ ಕುವೆಂಪು ಅವರಲ್ಲಿ ರಾಮ ಆಗುವ ಪ್ರಕ್ರಿಯೆಯಲ್ಲಿ ತೊಡಗಿದವನು. ಒಬ್ಬ ವ್ಯಕ್ತಿಯ ಮಾಗುವಿಕೆಯ ಹಲವು ಜೀವಗಳ ಸಹಾಯವೂ ಅಗತ್ಯ ಎಂಬ ಜೈನ ತತ್ವವೂ ಕುವೆಂಪು ಅವರ ಕಾವ್ಯದಲ್ಲಿ ಅಡಗಿದೆ. ಮಾನವ ಮುಕ್ತನಾಗಲು ಅತೀತದ ಪ್ರಜ್ಞೆಯನ್ನು ತ್ವರಿತಗೊಳಿಸಬೇಕಾಗಿದೆ ಎಂದು ಮಹರ್ಷಿ ಅರವಿಂದ ಜೀವನ ದರ್ಶನವೂ ಕುವೆಂಪು ಅವರಲ್ಲಿದೆ. ಸೀತೆಯ ಹಿಂದೆಯೇ ಅಗ್ನಿಯ ಒಳಗೆ ಹೋಗಿ ತಾನೂ ಪರೀಕ್ಷಿತನಾಗುವ ರಾಮ ವಾಲ್ಮೀಕಿಯ ರಾಮನಿಗಿಂತ ಭಿನ್ನ. ಅವನಲ್ಲಿ ಪ್ರಕೃತಿಯನ್ನು ಮೋಹಿಸುವ ಗುಣವಿದೆ ಎಂದು ಕಲ್ಗುಡಿ ನುಡಿದರು. "ಪಂಪನ ಕೃಷ್ಣ ಹಾಗೂ ಕುಮಾರವ್ಯಾಸನ ಕೃಷ್ಣ" ಕುರಿತು ಡಾ.ಎಸ್‌.ಪಿ ಪದ್ಮಪ್ರಸಾದ್‌ ವಿಚಾರ ಮಂಡಿಸಿದರು. ಕುಮಾರವ್ಯಾಸನಲ್ಲಿ ಕೃಷ್ಣ ನಿರ್ವಿವಾದಿತನಾಗಿ ಕಥಾನಾಯಕನಾಗಿದ್ದಾನೆ. ಅವನು ತಿಳಿಯಹೇಳುವೆ ಕೃಷ್ಣಕಥೆಯನು ಎಂದು, ಕೃಷ್ಣನನ್ನೇ ಲೀಲಾಮಾನುಷವಿಗ್ರಹನಾಗಿ ಕಂಡು ಕಾವ್ಯವನ್ನು ರಚಿಸಿದ. ಆದರೆ ಇವನಿಗಿಲ್ಲದ ಇಕ್ಕಟ್ಟು ಪಂಪನಿಗೆ ಇತ್ತು. ಅವನು ತನ್ನೊಡೆಯನಾದ ಅರಿಕೇಸರಿಯ ಜತೆಗೆ ಕಾವ್ಯವಾಯಕನಾಗಿ ಅರ್ಜುನನನ್ನು ಇಟ್ಟು ಚಿತ್ರಿಸಬೇಕಾಗಿ ಬಂದುದ್ದರಿಂದ ಕಾವ್ಯದಲ್ಲಿ ಅನೇಕ ಬಿಕ್ಕಟ್ಟುಗಳನ್ನು ಎದುರಿಸಿದ. ಕುಮಾರವ್ಯಾಸ ಸ್ವತಂತ್ರನಾಗಿದ್ದ ಎಂದು ಪದ್ಮಪ್ರಸಾದ್‌ ಹೇಳಿದರು. ಪಂಪನಲ್ಲಿ ಕೃಷ್ಣ ನಾಯಕನಲ್ಲ, ದೇವರೂ ಅಲ್ಲ. ಅಲ್ಲಿ ಆತ ಜೈನರ ಶಲಾಕಾ ಪುರುಷರಲ್ಲಿ ಒಬ್ಬ. ಜಾಣ ರಾಜಕೀಯ ಮುತ್ಸದ್ದಿಯಾಗಿ ಅವನನ್ನು ಕಾಣಿಸಿದ್ದಾನೆ. ಕುಮಾರವ್ಯಾಸನಲ್ಲಿ ಅವನು ಅರ್ಜುನನಿಗೆ ಮಾರ್ಗದರ್ಶಕ, ಸಹಾಯಕ ಆಗಿದ್ದರೆ ಪಂಪನಲ್ಲಿ ಹಾಗಿಲ್ಲ. ಹೀಗಾಗಿ ಪಂಪನಲ್ಲಿ ಭಗವದ್ಗೀತೆ ಎರಡು ಸಾಲುಗಳಿಗೆ ಸೀಮಿತವಾಗಿದೆ. ಅಗ್ರಪೂಜೆಯ ಸಂದರ್ಭದಲ್ಲಿ ಕುಮಾರವ್ಯಾಸನ ಚಕ್ರ ಸುದರ್ಶನ ಚಕ್ರ ಬಳಸಿದರೆ, ಪಂಪನಲ್ಲಿ ಅರ್ಘ್ಯದ ತಟ್ಟೆ ಬಳಸಿ ಶಿಶುಪಾಲನನ್ನು ಕೊಲ್ಲುತ್ತಾನೆ. ಆದರೂ ಪಂಪ ಅಲ್ಲಲ್ಲಿ ವೈದಿಕ ನಂಬಿಕೆಯ ಜೊತೆ ರಾಜಿ ಮಾಡಿಕೊಂಡಂತೆ ಕಾಣುತ್ತದೆ. ಅವನ ಲೀಲೆಗಳು ಕೆಲವು ಕಡೆ ಕಂಡುಬರುತ್ತವೆ ಎಂದರು. ಪುರಾಣ ಪಾತ್ರಗಳಲ್ಲಿ ದ್ರೌಪದಿಯಷ್ಟು ನೋವುಂಡುವರು, ಅವಮಾನ ಅನುಭವಿಸಿದವರು ಇನ್ಯಾರೂ ಇಲ್ಲ. ಶಿಷ್ಟ ಕಾವ್ಯಗಳಲ್ಲಿ ದ್ರೌಪದಿ ಭೀಮನ ಗಂಡುತನವನ್ನು ಚುಚ್ಚಿ ಎಚ್ಚರಿಸಿ ಕಲಿತನವನ್ನು ಕಾಣಿಸುವವಳಾಗಿದ್ದಾಳೆ. ಜಾನಪದ ಕಾವ್ಯಗಳಲ್ಲಿ ಶಿಷ್ಟ ಕಾವ್ಯಗಳಿಗಿಂತಲೂ ಗಟ್ಟಿಗಿತ್ತಿಯಾದ ದ್ರೌಪದಿಯನ್ನು ನಾವು ಕಾಣುತ್ತೇವೆ ಎಂದು "ಶಿಷ್ಟ ಕೃತಿಗಳ ದ್ರೌಪದಿ- ಜನಪದರ ದ್ರೌಪದಿ" ಕುರಿತು ಮಾತನಾಡಿದ ಡಾ.ಎಂ ಸುಮಿತ್ರಾ ನುಡಿದರು. ಈ ಸುದ್ದಿಯನ್ನೂ ಓದಿ | Kannada Sahitya sammelana: ಕನ್ನಡಕ್ಕೆ ಡಿಜಿಟಲ್‌ ಪ್ರಾಧಿಕಾರ ಬೇಕು; ವಿದ್ಯುನ್ಮಾನ ಗೋಷ್ಠಿಯಲ್ಲಿ ಹಕ್ಕೊತ್ತಾಯ
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ