Kannada Sahitya Sammelana: ಕುಲಗೋತ್ರ ನಿಮ್ಮ ಔನ್ನತ್ಯ ಹೇಳುವುದಿಲ್ಲ: ಅಬೂಬಕರ್ ಸಿದ್ದೀಕ್

Kannada Sahitya Sammelana: 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕೊನೆಯ ದಿನವಾದ ಭಾನುವಾರ ಸಮಾನಾಂತರ ವೇದಿಕೆಯಲ್ಲಿ ಆಯೋಜಿಸಲಾಗಿದ್ದ " ಸಮಾನತೆ ಸಾರಿದ ದಾರ್ಶನಿಕರು " ಕುರಿತಾದ ಗೋಷ್ಠಿಯಲ್ಲಿ ಚಿಂತಕ ಕೆ.ಎಂ. ಅಬೂಬಕರ್ ಸಿದ್ದೀಕ್‌ ಮಾತನಾಡಿದ್ದಾರೆ.

Profile Prabhakara R December 22, 2024
ಸಮಾನಾಂತರ ವೇದಿಕೆ-1(ಮಂಡ್ಯ): ಕುಲಗೋತ್ರ ನಿಮ್ಮ ಔನ್ನತ್ಯ ಹೇಳುವುದಿಲ್ಲ. ಏಕೆಂದರೆ, ಎಲ್ಲರೂ ಗಂಡು ಹೆಣ್ಣಿನಿಂದಲೇ ಬಂದವರು. ಇಬ್ಬರ ಸಮ್ಮಿಳಿತವೇ ಮನುಷ್ಯ ಸೃಷ್ಟಿ. ಹಾಗೆಂದ ಮೇಲೆ ಒಬ್ಬರ ಔನ್ನತ್ಯವನ್ನು ಜಾತಿ, ಧರ್ಮದಿಂದ ಅಳೆಯಲು ಹೇಗೆ ಸಾಧ್ಯ ಎಂದು ಚಿಂತಕ ಕೆ.ಎಂ. ಅಬೂಬಕರ್ ಸಿದ್ದೀಕ್‌ ಪ್ರಶ್ನಿಸಿದರು. ಅಖಿಲ ಭಾರತ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಕೊನೆಯ ದಿನವಾದ ಭಾನುವಾರ ಸಮಾನಾಂತರ ವೇದಿಕೆಯಲ್ಲಿ ಆಯೋಜಿಸಲಾಗಿದ್ದ " ಸಮಾನತೆ ಸಾರಿದ ದಾರ್ಶನಿಕರು " ಕುರಿತಾದ ಗೋಷ್ಠಿಯಲ್ಲಿ ಅವರು ಆಶಯ ನುಡಿಗಳನ್ನಾಡಿದರು. ಈ ಜಗತ್ತಿಗೆ ಸಮಾನತೆಯನ್ನು ಬೋದಿಸಿದವರು ದಾರ್ಶನಿಕರು. ದಾರ್ಶನಿಕರ ತತ್ವ ಸಿದ್ಧಾಂತವು ಇಂದಿಗೂ ಜನತೆಗೆ ತಲುಪುತ್ತಿದೆ. ದಾರ್ಶನಿಕರ ಪ್ರಭಾವ ಜನಸಾಮಾನ್ಯರನ್ನು ಮಾತ್ರವಲ್ಲ, ರಾಜ ಮಹಾರಾಜರ ಮೇಲೂ ಬೀರಿತ್ತು. ಕೆಲ ರಾಜಮಹಾರಾಜರು ದಾರ್ಶನಿಕರನ್ನು ತಮ್ಮ ಆಸ್ಥಾನದಲ್ಲಿ ಇಟ್ಟುಕೊಂಡಿದ್ದರು. ಏಕೆಂದರೆ ಜನಪರ ನಿಲುವುಗಳಿಗೆ ಅವರು ದಾರ್ಶನಿಕರನ್ನು ಅವಲಂಬಿಸಿದ್ದರು. ಈ ಮೂಲಕ ಸಮಸಮಾಜ ನಿರ್ಮಾಣಕ್ಕೆ ಶ್ರಮಿಸಿದರು ಎಂದರು. ಇಡೀ ದೇಶವ್ಯಾಪಿ ಕರ್ನಾಟಕದಲ್ಲಿ ಸಮಾನತೆ ಬಗ್ಗೆ ದೊಡ್ಡ ದನಿ ಎದ್ದಿದೆ. ಮೇಲು ಕೀಳು ಎಂಬ ವಿಚಾರಗಳ ವಿರುದ್ಧ ಬಸವಣ್ಣ ದನಿಯೆತ್ತಿ ಅಸಮಾನತೆ ವಿರುದ್ಧ ಹೋರಾಟ ನಡೆಸಿದರು. ಜಾತಿ, ವರ್ಗ, ಧರ್ಮ ವಿರುದ್ಧ ಹೋರಾಟ ಮಾಡಿದರು ಎಂದು ಹೇಳಿದರು. ಅಲ್ಪಸಂಖ್ಯಾತ ಹಾಗೂ ಬಹುಸಂಖ್ಯಾತ ಎಂದು ಧರ್ಮದ ವರ್ಗೀಕರಣ ಆಗಿದೆ. ಮತಪಂಥ ಯಾವುದನ್ನೂ ನೋಡಬಾರದು ಎಂದು ಬಸವಣ್ಣ ಹೇಳಿದ್ದಾರೆ. ಅವರ ಮಾರ್ಗದರ್ಶನ ನಮ್ಮ ನಡೆಯಾಗಬೇಕು ಎಂದು ತಿಳಿಸಿದ ಅವರು ದಾರ್ಶನಿಕರ ದರ್ಶನಗಳಲ್ಲಿ ಸಾಮ್ಯತೆ ಕಾಣಬಹುದು. ದುರ್ಗುಣ ನಿವಾರಿಸುವುದೇ ಅವರ ಉದ್ದೇಶ ಆಗಿತ್ತು. ಸಮಾನತೆಯ ಕ್ಷಿಪ್ರ ಚಳವಳಿಯಲ್ಲಿ ಸೂಫಿ ಸಂತರು ಎಲ್ಲರನ್ನೂ ಒಳಗೊಂಡು ಬಹಳ ಬೇಗ ಬಂದರು. ಆ ಮೂಲಕ ಲೌಕಿಕ ಮತ್ತು ಪಾರಮಾರ್ಥಿಕ ಸಮಸ್ಯೆಗಳಿಗೆ ಪರಿಹಾರ ಹುಡುಕಿದರು ಎಂದರು. "ಸಾಂಸ್ಕೃತಿಕ ನಾಯಕ ಬಸವಣ್ಣ" ಎಂದು ವಿಷಯ ಕುರಿತು ಮಾತನಾಡಿದ ಶ್ರೀ ಶಿವರುದ್ರ ಸ್ವಾಮೀಜಿ, ನಾವು ಇಂದು ಜಾತಿ, ಮತ, ಪಂಥ, ಧರ್ಮ ಎಲ್ಲವನ್ನೂ ಇಟ್ಟುಕೊಂಡು ಗೊಂದಲದಲ್ಲಿ ಇದ್ದೀವಿ. ಮನುಷ್ಯರು ಸಮಾನ, ಪ್ರಾಣಿಗಳಲ್ಲಿ ಜಾತಿ ಇದೆ. ಕೀಳು ಮೇಲು ಎಂಬುದಿಲ್ಲ. ಇದನ್ನು ಮೂಲಭೂತವಾಗಿ ತಿಳಿದುಕೊಳ್ಳಬೇಕು ಎಂದು ಹೇಳಿದರು. ಊಟ ಬೇರೆ, ಆದರ ನಂತರದ ಸಂತೃಪ್ತಿ ಒಂದೇ. ಅದು ಅವರವರ ಆಹಾರ ಪದ್ದತಿ. ಸಮಾನತೆಯ ಆಧಾರದ ಮೇಲೆ ಎಲ್ಲರನ್ನೂ ಗುರುತಿಸಬೇಕು. ಈ ವಾಸ್ತವತೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಬಸವಣ್ಣ ಸಾಂಸ್ಕೃತಿಕ ನಾಯಕ ಎಂಬುದು ಹೊಗಳಿಕೆಯ ವಿಷಯ ಅಲ್ಲ, ಸಮಾನತೆಯ ಪ್ರತೀಕ. ಕಾಯಕ ನಿಷ್ಠೆಯ ಪ್ರತಿರೂಪ. ನೆಲೆ ನುಡಿಗಳ ಸಮನ್ವಯತೆಯೇ ಭಕ್ತಿ. ನುಡಿದಂತೆ ನಡೆಯಬೇಕು. ನಮ್ಮ‌ ಮಾತಿಗೆ ಸಾಕ್ಷಿ ನಮ್ಮ ನಡೆ ಆಗಿರಬೇಕು.ಎಲ್ಲರೂ ನಮ್ಮವರೆಂದಾಗ ವಿಶ್ವದಲ್ಲಿ ಯುದ್ದಗಳಿಗೆ ಅವಕಾಶವೇ ಇರುವುದಿಲ್ಲ. ಕಾಯಕವೇ ಕೈಲಾಸ ಎಂಬುದು ಮನೆ ಮಾತಾಗಬೇಕು ಎಂದು ಹೇಳಿದರು. ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಾಹಿತ್ಯ ಸಮ್ಮೇಳನಕ್ಕೆ ಸಂಭ್ರಮದ ತೆರೆ; 5 ನಿರ್ಣಯ ಮಂಡನೆ ವೃತ್ತಿ ವ್ಯವಸ್ಥೆ ಬಿಟ್ಟು ಜಾತಿಗೆ ಅಂಟಿಸಿ, ಮೇಲುಕೀಳು ವ್ಯವಸ್ಥೆ ಮಾಡುವುದನ್ನು ಬಿಡಬೇಕು. ಅವನು ಮಾಡುವ ಕೆಲಸ ಅವನ ಜಾತಿಯಲ್ಲ ಎಂಬ ವಾಸ್ತವತೆಯನ್ನು ತಿಳಿದುಕೊಳ್ಳಬೇಕು ಎಂದು ಆಶಿಸಿದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ