Kannada Sahitya Sammelana: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್

Kannada Sahitya Sammelana: ನಾಳೆ ಸಮ್ಮೇಳನದಲ್ಲಿ ಮಾಂಸಾಹಾರ ಪ್ರಿಯರಿಗೆ ಮೊಟ್ಟೆ ಮತ್ತು ತುಂಡು ಬಾಡು ಕೊಡುವ ಮೂಲಕ ಬಾಡೂಟ ಆಂದೋಲನವನ್ನು ಉದ್ಘಾಟಿಸಲಾಗುತ್ತದೆ. ಈ ಕುರಿತು ಚಿತ್ರ ಸಾಹಿತಿ ಕವಿರಾಜ್ ಸೇರಿ ಕೆಲವು ಹೋರಾಟಗಾರರು ಮಾಹಿತಿ ನೀಡಿದ್ದಾರೆ.

Profile Prabhakara R December 21, 2024
ಮಂಡ್ಯ: ಕಳೆದ ಒಂದಷ್ಟು ದಿನಗಳಿಂದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಬಾಡೂಟ ಬೇಕು ಎಂಬ ಕೂಗು ಎದ್ದಿತ್ತು. ಒಂದಷ್ಟು ಗುಂಪಿನ ಜನರು ಬೀದಿಗಿಳಿದು ಹೋರಾಟ ಕೂಡ ಮಾಡಿದ್ದರು. ಬಾಡೂಟದ ವಿಷಯದಿಂದ ರಾಜ್ಯದಾದ್ಯಂತ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಒಂದು ವರ್ಗ ಬಾಡೂಟ ಬೇಕು ಎಂದರೆ ಮತ್ತೊಂದು ವರ್ಗ ಬಾಡೂಟ ಬೇಡ ಎಂದು ಹೇಳಿತ್ತು. ಖುದ್ದು ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷರು ಸಮ್ಮೇಳನದಲ್ಲಿ ಬಾಡೂಟಕ್ಕೆ ಅವಕಾಶವಿಲ್ಲ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದರು. ಆದರೆ ಪಟ್ಟು ಬಿಡದ ಒಂದು ಗುಂಪಿನ ಜನರು ಮಂಡ್ಯದ ಹಳ್ಳಿ ಹಳ್ಳಿಗಳಿಗೆ ಹೋಗಿ ಮನೆಗೊಂದು ಕೋಳಿ ಮತ್ತು ಕುರಿ ಎಂಬ ಅಭಿಯಾನವನ್ನು ಆರಂಭಿಸಿದ್ದರು. ಆದರೆ, ಇದೀಗ ಸಮ್ಮೇಳನದಲ್ಲಿ ಬಾಡೂಟ (non-veg food) ಕೊಡಲು ಸರ್ಕಾರ ಅನುಮತಿ ನೀಡಿದೆ ಎಂದು ತಿಳಿದುಬಂದಿದೆ. ʼಬಾಡೂಟ ಬೇಕೇಬೇಕುʼ ಎಂಬ ಒಕ್ಕಣಿಕೆ ಇದ್ದ ಮನವಿ ಪತ್ರವನ್ನು ಸರ್ಕಾರಕ್ಕೆ ಪ್ರಗತಿಪರ ಸಂಘಟನೆಗಳು ನೀಡಿದ್ದವು. ಆದರೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಆದರೂ ಬಾಡೂಟದ ವಿಷಯ ಬೂದಿ ಮುಚ್ಚಿದ ಕೆಂಡದಂತಿತ್ತು. ಆದರೆ, ಈಗ ಸಮ್ಮೇಳನದಲ್ಲಿ ಬಾಡೂಟ ಕೊಡಲು ಸರ್ಕಾರ ಅನುಮತಿ ನೀಡಿದೆ ಎಂಬ ಮಾಹಿತಿಯಿದೆ. ನಾಳೆ (ಡಿ. 22) ಸಮ್ಮೇಳನದಲ್ಲಿ ಮಾಂಸಾಹಾರ ಪ್ರಿಯರಿಗೆ ಮೊಟ್ಟೆ ಮತ್ತು ತುಂಡು ಬಾಡು ಕೊಡುವ ಮೂಲಕ ಬಾಡೂಟ ಆಂದೋಲನವನ್ನು ಉದ್ಘಾಟಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ಕುರಿತು ಚಿತ್ರ ಸಾಹಿತಿ ಕವಿರಾಜ್ ಸೇರಿ ಕೆಲವು ಹೋರಾಟಗಾರರು ಮಾಹಿತಿ ನೀಡಿದ್ದಾರೆ. ಸಮ್ಮೇಳನದಲ್ಲಿ ನಾಳೆ ಬಾಡೂಟ ವ್ಯವಸ್ಥೆ: ಚಿತ್ರ ಸಾಹಿತಿ ಕವಿರಾಜ್ ಈ ಬಗ್ಗೆ ಚಿತ್ರ ಸಾಹಿತಿ ಕವಿರಾಜ್‌ ಪ್ರತಿಕ್ರಿಯಿಸಿ, ಈ ಬಾರಿಯ ಸಾಹಿತ್ಯ ಸಮ್ಮೇಳನ ಮಂಡ್ಯದಲ್ಲಿ ನಡೆಯುತ್ತಿರುವುದು ಬಹಳ ವಿಶೇಷ. ಮಂಡ್ಯ ಅಪ್ಪಟ ಕನ್ನಡ ಸೊಗಡಿನ ನೆಲ. ಸಾಕಷ್ಟು ಜನ ಬರುತ್ತಿರುವುದು ಖುಷಿಯ ವಿಷಯ. ಆದರೂ ಈ ಸಮ್ಮೇಳನದಲ್ಲಿ ಮಾಂಸಾಹಾರವನ್ನು ನಿಷೇಧಿಸಲಾಗಿದೆ ಎಂಬ ಮಾತು ಬಂದಿತ್ತು. ಅದರೆ ಬಹು ಜನರ ಆಹಾರವನ್ನು ನಿಷೇಧಿಸುವುದು ಸಮ್ಮತಲ್ಲ. ಧೂಮಪಾನ, ಮದ್ಯಪಾನ ಮತ್ತು ಮಾಂಸ ಎಲ್ಲರನ್ನೂ ಒಗ್ಗೂಡಿಸುವಂಥದ್ದು. ಅದರಲ್ಲೂ ಬಾಡು ಈ ಪ್ರದೇಶದ ಆಹಾರ. ತಪ್ಪನ್ನು ಪರಿಷತ್ ತಿದ್ದಿಕೊಳ್ಳಬೇಕು. ನಾಳೆಯೇ ಸಣ್ಣದಾಗಿ ಮಾಂಸಾಹಾರ ಪ್ರವೇಶವಾಗಲಿದೆ. ಸರ್ಕಾರದಿಂದ ಅನುಮತಿ ಸಿಕ್ಕಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಅವರಿಗೆ ಬರುವಂತೆ ಹೇಳಿದ್ದೆವು. ಆದರೆ ಕಾರಣಾಂತರಗಳಿಂದ ಅವರು ಬರುತ್ತಿಲ್ಲ. ನಾಳೆ ಬಾಡೂಟದ ಪ್ರೇಮಿಗಳಿಗೆ ನಮ್ಮ ಸಂಘಟನೆಯಿಂದ ಊಟದ ವ್ಯವಸ್ಥೆಯಿದೆ. ಈ ಕುರಿತು ಇವತ್ತು ಸಭೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ. "ಬಾಡೂಟ ನಮ್ಮ ಆಹಾರ. ಎಲ್ಲದರಲ್ಲೂ ಸಮಾನತೆ ಬೇಕು. ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದೆವು. ಈಗ ಸರ್ಕಾರದಿಂದ ಅನುಮತಿ ದೊರೆತಿದೆ. ನಾಳೆ ಬಾಡೂಟ ತಿಂದು ಸಂಭ್ರಮಿಸಲಿದ್ದೇವೆ. ಹೋರಾಟವನ್ನು ಇಲ್ಲಿಗೆ ನಿಲ್ಲಿಸುವುದಿಲ್ಲ. ಮುಂದಿನ ವರ್ಷ ಪರಿಷತ್ ಸಸ್ಯಾಹಾರದ ಜತೆಗೆ ಮಾಂಸಾಹಾರದ ಅಡುಗೆಯನ್ನೂ ಮಾಡಿಸಬೇಕು"| ನವೀನ್ ಕುಮಾರ್, ಪ್ರಗತಿಪರ ಹೋರಾಟಗಾರ ಈ ಸುದ್ದಿಯನ್ನೂ ಓದಿ | Kannada Sahitya Sammelana: ಅವ್ಯವಸ್ಥೆಗಳು ಸರಿಯಾಗಲಿಲ್ಲ, ಸಮಾನಾಂತರಕ್ಕೆ ಜನ ಬರಲಿಲ್ಲ ಕಡೆಗೂ ಸಿಡಿಯಿತು ಬಾಡೂಟದ ಕಿಡಿ ಮಂಡ್ಯ: ಒಂದಷ್ಟು ತಿಂಗಳುಗಳಿಂದ ಸಮ್ಮೇಳನದಲ್ಲಿ (Kannada Sahitya Sammelana) ಬಾಡೂಟ ಬೇಕು ಎಂಬ ಕೂಗಿ ಕೇಳಿ ಬಂದಿತ್ತು. ಅವರು ಕೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅದು ಆಹಾರ ಸಂಸ್ಕೃತಿಯ ವಿಷಯವಷ್ಟೇ ಅಲ್ಲ. ಬಹುತ್ವದ ಭಾರತದಲ್ಲಿ ಎಲ್ಲರಿಗೂ ಹಕ್ಕಿದೆ ಎಂದು ಲೇಖಕಿ ಮತ್ತು ಪ್ರಕಾಶಕಿ ಅಕ್ಷತಾ ಹುಂಚದಕಟ್ಟೆ ಬಾಡೂಟದ ಪರ ಧ್ವನಿ ಎತ್ತಿದರು. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾನಾಂತರ ವೇದಿಕೆ-1ರಲ್ಲಿ ಕನ್ನಡ ಪುಸ್ತಕೋದ್ಯಮದ ಸವಾಲುಗಳು ಮತ್ತು ಪರಿಹಾರಗಳು ವಿಷಯದ ಗೋಷ್ಠಿ-1 ರಲ್ಲಿ ಅವರು ಮಾತನಾಡಿದರು. ಕನ್ನಡ ಪುಸ್ತಕಗಳು ಮತ್ತು ಓದುಗ ಬಳಗ ವಿಷಯದ ಬಗ್ಗೆ ಮಾತನಾಡಬೇಕಿದ್ದ ಅಕ್ಷತಾ ಹುಂಚದಕಟ್ಟೆ ವಿಷಯಾಂತರ ಮಾಡಿ, ಬಾಡೂಟದ ಬೇಡಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥನೆ ಮಾಡಿಕೊಂಡರು. ಕೆಲ ನಿಮಿಷಗಳ ನಂತರ ಮುಖ್ಯ ವಿಷಯವನ್ನು ಪ್ರಸ್ತಾಪಿಸಿದರು. ಈ ಸುದ್ದಿಯನ್ನೂ ಓದಿ | Kannada Sahitya Sammelana: ಸಮ್ಮೇಳನದ ಸ್ವಾರಸ್ಯಗಳು: ಸಮಾನಾಂತರ ವೇದಿಕೆಯೂ ಕಬ್ಬಿನ ಗದ್ದೆಯೂ! ಕನ್ನಡದ ಹಿರಿಯ ಕವಿಗಳಾದ ಪಂಪ, ಪೊನ್ನ, ರನ್ನ ಅವರುಗಳು ರಾಜಾಶ್ರಯದಲ್ಲಿದ್ದರು ಕೂಡ ಜನ ಸಾಮಾನ್ಯರ ಮೇಲೆ ಗಮನಹರಿಸಿ ಅವರುಗಳಗೆ ಅರ್ಥವಾಗುವ ರೀತಿಯಲ್ಲಿ ಸಾಹಿತ್ಯವನ್ನು ರಚಿಸಿದರು. ಆದರೆ ಇಂದಿನ ಓದುಗರು ಹಾಗೂ ಪುಸ್ತಕಗಳಲ್ಲಿ 2 ವಿಧಗಳಿವೆ. ಓದುಗರಲ್ಲಿ ಇವತ್ತಿನ ಓದು ಹಾಗೂ ಅರಿವು ಹೆಚ್ಚಿಸುವ ಓದು, ಪುಸ್ತಕದಲ್ಲಿ ಇಂದಿನ ಆಶಯ ನೆರವೇರಿಸುವ ಪುಸ್ತಕ ಹಾಗೂ ಅರಿವು ಪ್ರಜ್ಞೆಯನ್ನು ವಿಸ್ತರಿಸುವ ಪುಸ್ತಕ ಎಂಬುದಾಗಿ 2 ವಿಧಗಳಿವೆ. ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಶಿಕ್ಷಣ ಸಂಸ್ಥೆಗಳು, ಪ್ರಕಾಶಕರು, ಲೇಖಕರು ಮಾಡುತ್ತ ಬರುತ್ತಿದೆ. ಕನ್ನಡ ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಶ್ರಮಿಸಬೇಕು. ಜೊತೆಗೆ ಪುಸ್ತಕದ ಓದನ್ನು ಮೂಲಭೂತ ಅವಶ್ಯಕತೆ ಎಂದು ಪರಿಗಣಿಸಬೇಕು ಎಂದರು.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ